‘ವಾರಣಾಸಿ’ ಸೆಟ್ ಸೇರಲು ರೆಡಿ ಆದ ಸುದೀಪ್​; ಯಾವಾಗ, ಎಷ್ಟು ದಿನ?

‘ವಾರಣಾಸಿ’ ಸೆಟ್ ಸೇರಲು ರೆಡಿ ಆದ ಸುದೀಪ್​; ಯಾವಾಗ, ಎಷ್ಟು ದಿನ?


'ವಾರಣಾಸಿ' ಸೆಟ್ ಸೇರಲು ರೆಡಿ ಆದ ಸುದೀಪ್; ಯಾವಾಗ, ಎಷ್ಟು ದಿನ?

ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ (ಎಸ್ ಎಸ್ ರಾಜಮೌಳಿ) ಅವರು ‘ವಾರಣಾಸಿ’ ಸಿನಿಮಾ ನಿರ್ದೇಶನ ಮಾಡುವುದರಲ್ಲಿ ಬ್ಯುಸಿ ಇದ್ದಾರೆ. ವಿವಿಧ ಹಂತಗಳಲ್ಲಿ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು 2027ರ ಏಪ್ರಿಲ್ ನಲ್ಲಿ ಸಿನಿಮಾ ತೆರೆಗೆ ಬರುತ್ತಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಯಲ್ಲಿದ್ದಾರೆ. ಈ ಸಿನಿಮಾದ ಕಥೆ ರಾಮಾಯಣದಿಂದ ಸ್ಫೂರ್ತಿ ಪಡೆದಿದೆ. ಈ ಚಿತ್ರದಲ್ಲಿ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಹಾಗೂ ಪೃಥ್ವಿರಾಜ್ ಸುಕುಮಾರನ್ ನಟಿಸುತ್ತಿದ್ದಾರೆ. ಹೀಗಿರುವಾಗಲೇ ಈ ಚಿತ್ರದ ಸೆಟ್‌ಗೆ ಸುದೀಪ್ ಸೇರಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಇದನ್ನು ಕೇಳಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ಕಿಚ್ಚ ಸುದೀಪ್ ಅವರು ‘ವಾರಣಾಸಿ’ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ಈ ಮೊದಲು ವರದಿ ಮಾಡಿದ್ದಾರೆ. ಈ ಬಗ್ಗೆ ರಾಜಮೌಳಿ ಆಗಲಿ, ಸುದೀಪ್ ಆಗಲಿ ಅಧಿಕೃತವಾಗಿ ಹೇಳಿಲ್ಲ. ಈಗ ಕೇಳಿ ಬರಿತ್ತಿರುವ ಓಸ ಮಾಹಿತಿ ಎಂದರೆ ಸುದೀಪ್ ಏಪ್ರಿಲ್ ನಲ್ಲಿ 15 ದಿನಗಳ ಶೂಟಿಂಗ್ ನಲ್ಲಿ ಭಾಗಿ ಆಗಲಿದ್ದಾರೆ ಎಂದು ವರದಿಯಾಗಿದೆ. ಇದು ಅಭಿಮಾನಿಗಳ ಖುಷಿಗೆ ಕಾರಣವಾಗಿದೆ. ಅವರ ಪಾತ್ರ ಹೇಗಿರಲಿದೆ ಎಂಬ ಕುತೂಹಲ ಹೆಚ್ಚಿದೆ. ಇನ್ನು, ಸದ್ಯಕ್ಕಂತೂ ಈ ಬಗ್ಗೆ ಅವರು ಮಾಹಿತಿ ನೀಡುವುದು ಅನುಮಾನವೇ.

ಸುದೀಪ್ ಹಾಗೂ ರಾಜಮೌಳಿ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ಇದಕ್ಕೆ ಕಾರಣ ಆಗಿದ್ದು, ‘ಈಗ’ ಸಿನಿಮಾ. ಈ ಚಿತ್ರವನ್ನು ರಾಜಮೌಳಿ ನಿರ್ದೇಶನ ಮಾಡಿದ್ದಾರೆ, ಸುದೀಪ್ ಅವರಿಗೆ ವಿಲನ್. ಈ ಚಿತ್ರದಲ್ಲಿ ಸುದೀಪ್ ಅವರು ಶೋ ವಿನ್ನರ್ ಎನಿಸಿಕೊಂಡರು. ಅವರ ನಟನೆ ಬೇರೆಯದೇ ಲೆವೆಲ್ ನಲ್ಲಿ ಇತ್ತು. ಈ ಕಾರಣಕ್ಕೆ ರಾಜಮೌಳಿಗೆ ಸುದೀಪ್ ಎಂದರೆ ಫೇವರಿಟ್. ಈ ಕಾರಣದಿಂದಲೇ ‘ವಾರಣಾಸಿ’ ಸಿನಿಮಾದಲ್ಲಿ ಆಫರ್ ಕೊಟ್ಟಿದ್ದಾರೆ. ಈ ಬಗ್ಗೆ ಅಧಿಕೃತ ಮಾಹಿತಿ ಸಿಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.

ಇದನ್ನೂ ಓದಿ: ‘ನಾನು ಸುದೀಪ್ ಸರ್ ಬಗ್ಗೆ ಹಗುರವಾಗಿ ಮಾತನಾಡಿಲ್ಲ’; ಉಲ್ಟಾ ಹೊಡೆದ ಸತೀಶ್

ಸುದೀಪ್ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದು ‘ಮಾರ್ಕ್’ ಚಿತ್ರದಲ್ಲಿ. ಕಳೆದ ವರ್ಷ ಡಿಸೆಂಬರ್ ನಲ್ಲಿ ಸಿನಿಮಾ ತೆರೆಗೆ ಬಂತು. ಈ ಚಿತ್ರ ಗಮನ ಸೆಳೆಯಿತು. ಇದಾದ ಬಳಿಕ ರೋಮ್-ಕಾಮ್ ಅಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತೆಲುಗು ನಿರ್ದೇಶಕ ಸುಕುಮಾರ್ ಅಡಿಯಲ್ಲಿ ಪಳಗಿದ ನಿರ್ದೇಶಕ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *