ಹುಬ್ಬಳ್ಳಿ, ಫೆ.13: ಹುಬ್ಬಳ್ಳಿ ಕಿಮ್ಸ್ (KIMS) ಆಸ್ಪತ್ರೆಯಲ್ಲಿ ಶಿಶುಗಳ ಸುರಕ್ಷತೆ ಮತ್ತು ಜನದಟ್ಟಣೆ ನಿಯಂತ್ರಣಕ್ಕಾಗಿ ಹೊಸ ಯೋಜನೆ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಇತ್ತೀಚೆಗೆ ಶಿಶುಗಳ ಕಳ್ಳತನ ಆಗುತ್ತಿದೆ. ಇದನ್ನು ತಡೆಗಟ್ಟಲು ಕ್ಯೂಆರ್ ಕೋಡ್ (QR ಕೋಡ್) ವ್ಯವಸ್ಥೆ ತಂದಿದೆ. ಇನ್ನು ಮುಂದೆ ಹೆರಿಗೆ ಮನೆಗೆ ಬರಬೇಕಾದರೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಬರಬೇಕು. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಕುಟುಂಬದವರು ಒಳಹೋಗಬೇಕು ಎಂದು ಕಿಮ್ಸ್ ಹೇಳಿದೆ. ಹೆರಿಗೆ ವಾರ್ಡ್ ಪ್ರವೇಶಿಸುವ ಕುಟುಂಬದ ಸದಸ್ಯರಿಗೆ ಸಿಬ್ಬಂದಿ ಕ್ಯೂಆರ್ ಕೋಡ್ ಜನರೇಟ್ ಮಾಡಿ. ಇದನ್ನು ಸ್ಕ್ಯಾನ್ ಮಾಡಿದ ನಂತರವೇ ಒಳಹೋಗಲು ಅವಕಾಶವಿದೆ. ಸಾಮಾನ್ಯ ಹೆರಿಗೆಯಾದವರಿಗೆ 3 ದಿನಗಳ ಪಾಸ್ ಮತ್ತು ಸಿಸೇರಿಯನ್ ಆದವರಿಗೆ 7 ದಿನಗಳ ಪಾಸ್. ಒಂದು ಪಾಸ್ ಬಳಸಿ ಒಳಹೋದರೆ, ಅದೇ ಪಾಸ್ ಅನ್ನು ಹೊರಗಿನವರಿಗೆ ನೀಡಿ ಅವರು ಒಳಬರಲು ಸಾಧ್ಯವಿಲ್ಲ
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ