ಬೆಂಗಳೂರು, ಅ.22: ಬೆಂಗಳೂರಿನ ಮೂಲಸೌಕರ್ಯಗಳ ಕುರಿತು ಧ್ವನಿ ಎತ್ತಿ, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾದ ಕಿರಣ್ ಮಜುಂದಾರ್-ಶಾ, ಇದೀಗ ಮತ್ತೊಂದು ವಿಚಾರವಾಗಿ ಸುದ್ದಿಯಾಗಿದೆ. ಈ ಹಿಂದೆ ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಎಕ್ಸ್ನಲ್ಲಿ ಹಂಚಿಕೊಂಡು ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದ ಕಿರಣ್ ಮಜುಂದಾರ್-ಶಾ, (ಕಿರಣ್ ಮಜುಂದಾರ್-ಶಾ) ಈಗ ನಾನು ಕನ್ನಡತಿ ಎಂದು ಹೇಳಿದ ಎಕ್ಸ್ ಪೋಸ್ಟ್ ಒಂದನ್ನು ಹಾಕಿದೆ. ಗುಂಡಿಗಳ ಬಗ್ಗೆ ಪೋಸ್ಟ್ ಹಾಕಿ ಟೀಕೆಗೆ ಗುರಿಯಾಗಿರುವ ಕಿರಣ್ ಮಜುಂದಾರ್-ಶಾ ನೆನ್ನೆ (ಅ.21) ಸಿಎಂ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದರೂ. ಇದೀಗ ಇದರ ಬೆನ್ನಲ್ಲೇ ಎಕ್ಸ್ನಲ್ಲಿ ನಾನು ಗುಜರಾತಿ ಅಲ್ಲ, ಕನ್ನಡತಿ ಎಂದು ಪೋಸ್ಟ್ ಹಾಕಲು, ಹೊಸ ಚರ್ಚೆಗೆ ಕಾರಣ.
ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್-ಶಾ, ಸಾಮಾಜಿಕ ಜಾಲತಾಣದಲ್ಲಿ ಕರ್ನಾಟಕದ ಮೇಲಿನ ನಿಷ್ಠೆಯ ಬಗ್ಗೆ ಪ್ರಶ್ನೆ ಮಾಡಿದವರಿಗೆ ಸರಿಯಾಗಿ ಉತ್ತರಿಸಿದ್ದಾರೆ. ಎಕ್ಸ್ ನಲ್ಲಿ ಕನ್ನಡದ ಬಗ್ಗೆ ಕಿರಣ್ ಮಜುಂದಾರ್-ಶಾ ಹೀಗೆ ಹಂಚಿಕೊಂಡಿದ್ದಾರೆ. “ನಾನು ಬೆಂಗಳೂರಿನಲ್ಲಿ ಜನಿಸಿದ್ದು, ನನ್ನ ನಗರ, ನನ್ನ ಕನ್ನಡ ಸಂಸ್ಕೃತಿಯನ್ನು ಪ್ರೀತಿಸುತ್ತಾ ಏಳು ಇರುವುದನ್ನು ಇಲ್ಲಿ ಕಳೆದಿದ್ದೇನೆ. ಕನ್ನಡ ಅದ್ಭುತ ಭಾಷೆ, ಅದನ್ನು ಬರೆಯಲು ಮತ್ತು ಮಾತನಾಡಲು ಬರುತ್ತದೆ. ನನ್ನ ನಿಷ್ಠೆಯನ್ನು ಪ್ರಶ್ನಿಸುವ ಯಾರಿಗೂ ನಾನು ಉತ್ತರಿಸುವ ಅಗತ್ಯವಿಲ್ಲ, ನಾನು ಹೆಮ್ಮೆಯ ಕನ್ನಡತಿ” ಎಂದು ಬರೆದಿದ್ದೇನೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
ನಾನು ಈ ನಗರದಲ್ಲಿ ಹುಟ್ಟಿದ್ದೇನೆ ಮತ್ತು ಏಳು ದಶಕಗಳಿಂದ ನನ್ನ ನಗರವನ್ನು, ನನ್ನ ಕನ್ನಡ ಸಂಸ್ಕೃತಿಯನ್ನು ಪ್ರೀತಿಸುತ್ತಿದ್ದೇನೆ ಮತ್ತು ಈ ಅದ್ಭುತ ಭಾಷೆಯನ್ನು ಬರೆಯಲು ಮತ್ತು ಮಾತನಾಡಲು ಓದಬಲ್ಲೆ. ಕರ್ನಾಟಕಕ್ಕೆ ನನ್ನ ನಿಷ್ಠೆಯನ್ನು ಪ್ರಶ್ನಿಸುವ ಯಾರಿಗಾದರೂ ನಾನು ಉತ್ತರಿಸಲಾರೆ ಎಂದು ನಾನು ಭಾವಿಸುವುದಿಲ್ಲ. ನಾನೊಬ್ಬ ಹೆಮ್ಮೆಯ ಕನ್ನಡಿಗ. https://t.co/qan79ioepZ
– ಕಿರಣ್ ಮಜುಂದಾರ್-ಶಾ (@kiranshaw) ಅಕ್ಟೋಬರ್ 22, 2025
ನನ್ನನ್ನು ಯಾರಾದರೂ ಎಂದು ಭಾವಿಸಿದ್ದಾರೆ. ಉತ್ತರ ಭಾರತೀಯ ಎಂಬ ಹಣೆಪಟ್ಟಿ ಕಟ್ಟಿದ್ದಾರೆ. ಇನ್ನು ಕೆಲವರು ನಾನು ಗುಜರಾತಿ ಎಂದು ಕಮೆಂಟ್ ಮಾಡಿದ್ದೇನೆ. ನಗರದ ಮೂಲಸೌಕರ್ಯ ಸಮಸ್ಯೆಗಳ ಕುರಿತು ಬಹಿರಂಗವಾಗಿ ಮಾತನಾಡಿದಾಗ ಈ ಎಲ್ಲ ಆರೋಪ, ಪ್ರಶ್ನೆಗಳು ಬಂದಿದೆ. ಬೆಂಗಳೂರಿನ ಕೌರ್ಯ ಸಮಸ್ಯೆಯ ಬಗ್ಗೆ ಪ್ರಶ್ನೆ ಮಾಡಿದ್ದು ಗೌರವಿಸಿದ್ರು, ಇನ್ನು ಕೆಲವರು ಕೋಪಗೊಂಡಿದ್ದಾರೆ ಎಂದು ಹೇಳಿದ್ದಾರೆ. ಆದರೆ ನಾನು ನೀವು ಭಾವಿಸಿದಂತೆ ಇಲ್ಲ, ನಾನು ಕನ್ನಡತಿ ಎಂದು ಹೇಳಿದರು. ನಾನು ಈ ಮಣ್ಣಿನ ಹೆಮ್ಮೆಯ ಮಗಳು, ನಾನು ಬೆಂಗಳೂರಿನಲ್ಲಿ ಜನಿಸಿದ್ದೇನೆ ಮತ್ತು ನನ್ನ ನಗರದ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಪ್ರಶ್ನೆ ಮಾಡಿದವರಿಗೆ ಉತ್ತರಿಸಿದೆ.
ಇದನ್ನೂ ಓದಿ: ಸ್ವಂತ ಖರ್ಚಿನಲ್ಲಿ ಗುಂಡಿ ಮುಚ್ಚಿದ ವ್ಯಕ್ತಿ, ಒಂದು ಗಂಟೆಯಲ್ಲಿ ಎಲ್ಲವನ್ನು ಹಾಳು ಮಾಡಿದ ನೀರಿನ ಟ್ಯಾಂಕರ್
ಬಯೋಕಾನ್ ಅಧ್ಯಕ್ಷ ಕಿರಣ್ ಮಜುಂದಾರ್-ಶಾ ಎಕ್ಸ್ನಲ್ಲಿ ಸರ್ಕಾರವನ್ನು ಮತ್ತು ಉತ್ತಮ ಆಡಳಿತದ ಅವಶ್ಯಕತೆಯಿದೆ ಎಂದು ಹೇಳುವ ಮೂಲಕ ಟೀಕೆಗೆ ಮತ್ತು ಬೆಂಬಲಕ್ಕೆ ಕಾರಣವಾಯಿತು. ದೀರ್ಘಕಾಲದ ಮೂಲಸೌಕರ್ಯ ನಿರ್ಲಕ್ಷ್ಯದಿಂದ ಬೆಂಗಳೂರು ಬಳಲುತ್ತಿದೆ ಎಂಬ ಪೋಸ್ಟ್ ಹಾಕಿದ್ದಕ್ಕೆ ರಾಜಕೀಯ ವ್ಯಕ್ತಿಗಳು ಅವರನ್ನು ಟೀಕೆ ಮಾಡಲು ಶುರು ಮಾಡಿದ್ರು, ಆದರೆ ಕಿರಣ್ ಮಜುಂದಾರ್-ಶಾ ಇದಕ್ಕೆಲ್ಲ ಉತ್ತರ ನೀಡಿದ್ದಾರೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ