Karna Serial: ಅವಿವಾಹಿತ ಕಿರಣ್​ ರಾಜ್​ ಸಕ್ಸಸ್​ ಹಿಂದಿರೋದು ಇಬ್ಬಿಬ್ಬರು ಸುಂದರಿಯರು! ಕೊನೆಗೂ ಸೀಕ್ರೆಟ್​ ರಿವೀಲ್​

Karna Serial: ಅವಿವಾಹಿತ ಕಿರಣ್​ ರಾಜ್​ ಸಕ್ಸಸ್​ ಹಿಂದಿರೋದು ಇಬ್ಬಿಬ್ಬರು ಸುಂದರಿಯರು! ಕೊನೆಗೂ ಸೀಕ್ರೆಟ್​ ರಿವೀಲ್​

Karna Serial: ಅವಿವಾಹಿತ ಕಿರಣ್​ ರಾಜ್​ ಸಕ್ಸಸ್​ ಹಿಂದಿರೋದು ಇಬ್ಬಿಬ್ಬರು ಸುಂದರಿಯರು! ಕೊನೆಗೂ ಸೀಕ್ರೆಟ್​ ರಿವೀಲ್​

’ಕನ್ನಡತಿ’ಯ ಹರ್ಷನಾಗಿ ನಂತರ ‘ಕರ್ಣ’ ಧಾರಾವಾಹಿಯಲ್ಲಿ ಕರ್ಣನಾಗಿ ಮಿಂಚುತ್ತಿರುವ ನಟ ಕಿರಣ್ ರಾಜ್ ಅವರ ಎರಡೂ ಸೀರಿಯಲ್‌ಗಳಲ್ಲಿ ಇಬ್ಬರು ನಾಯಕಿಯರಿರುವುದು ವಿಶೇಷ. ಇದೇ ವಿಚಾರವಾಗಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ, ನಟನ ಕಾಲೆಯುತ್ತಿದ್ದಾರೆ. ಏನಿದು ಡಬಲ್​ ನಾಯಕಿ ಸೀಕ್ರೆಟ್​?

ಧಾರಾವಾಹಿಗಳು ಯಾವುದೇ ಭಾಷೆಯಲ್ಲಿ ಇರಲಿ, ಹೆಚ್ಚಿನ ಸೀರಿಯಲ್​ಗಳಲ್ಲಿ ಇರೋದು ಇಬ್ಬರು ನಾಯಕಿಯರು ಇಲ್ಲವೇ ಇತ್ತೀಚಿನ ಕೆಲವು ಸೀರಿಯಲ್​ಗಳ ಸ್ಟೋರಿಯಲ್ಲಿ ಮದುವೆಯಾದರೂ ದೈಹಿಕ ಸಂಬಂಧ ಬೆಳೆಸದ ಜೋಡಿಗಳು! ಇವರಿಬ್ಬರ ನಡುವೆ ಒಂದಿಷ್ಟು ಮಂದಿ ವಿಲನ್​ಗಳು. ಇಷ್ಟರ ಮಧ್ಯೆಯೇ ಸುತ್ತುವ ಕಥೆಗಳೇ ಹೆಚ್ಚು.

ಆದರೆ, ಇದೇ ಕಥೆಯಲ್ಲಿ ಒಂದಿಷ್ಟು ಆಚೀಚೆ ಇದ್ದರೂ ಜನರ ಮನಸ್ಸನ್ನು ಕದ್ದು ಬೀಗುತ್ತಿರುವ ಸೀರಿಯಲ್​​ಗಳಲ್ಲಿ ಒಂದು ಜೀ ಕನ್ನಡದ ಕರ್ಣ (Karna Serial). ಕರ್ಣನ ಒಳ್ಳೆಯತನ ಸ್ವಲ್ಪ ಅತಿಯಾಯ್ತು ಎಂದು ಅಂದುಕೊಂಡವರೆಲ್ಲಾ ಫುಲ್​ ಖುಷ್​ ಆಗುವಂತೆ, ವಿಲನ್​ ರಮೇಶನ ಚಳಿ ಬಿಡಿಸ್ತಿದ್ದಾನೆ ಈ ಕರ್ಣ. ನಿಧಿಯನ್ನು ಲವ್​ ಮಾಡ್ತಿದ್ರೂ ನಿತ್ಯಾಳ ಖುಷಿಗಾಗಿ ತನ್ನ ಜೀವವನ್ನೇ ಮುಡಿಪಾಗಿಟ್ಟಿದ್ದಾನೆ. ಇವನ ಒಳ್ಳೆಯತನ ನೋಡಿ ನಿತ್ಯಾ ಇವನನ್ನು ಲವ್​ ಮಾಡದಿದ್ರೆ ಸಾಕಪ್ಪಾ ಎನ್ನುತ್ತಿದ್ದಾರೆ ಸೀರಿಯಲ್​ ಪ್ರೇಮಿಗಳು.

ಕರ್ಣನ ಪಾತ್ರದಲ್ಲಿ ಕಾಣಿಸಿಕೊಳ್ತಿರೋ ನಟನ ಹೆಸರು ಕಿರಣ್​ ರಾಜ್​ (Kiran Raj). ಸೀರಿಯಲ್​ ನೋಡುವವರು ಕಲರ್ಸ್​ ಕನ್ನಡದ ಕನ್ನಡತಿ ಸೀರಿಯಲ್​ ಕೂಡ ನೋಡಿರಲು ಸಾಕು. ಕನ್ನಡತಿಯಲ್ಲಿ ಕಿರಣ್​ ರಾಜ್​ ಅವರೇ ನಾಯಕ. ಅಲ್ಲಿ ಅವರು ಹರ್ಷನ ರೋಲ್​ ಮಾಡುತ್ತಿದ್ದರು.

ಕನ್ನಡತಿ ಸೀರಿಯಲ್​ನಲ್ಲಿ ಹಳ್ಳಿ ಹುಡುಗಿ ಭುವಿ. ಸದಾ ಕನ್ನಡದಲ್ಲಿಯೇ ಮಾತನಾಡೋ ಈಕೆ ಹೃದಯ ಶ್ರೀಮಂತಿಕೆ ಇರೋ ಹೆಣ್ಣು. ಫ್ರೆಂಡ್ ವರುಧಿನಿ. ಅವಳ ನೆರವಿನಿಂದಲೇ ಹಳ್ಳಿಯಿಂದ ಬಂದು ಸಿಟಿ ಸೇರುವ ಭುವಿ ಸೇರೋದು. ಆದರೆ, ಪ್ರಾಣಕ್ಕಿಂತಲೂ ಹೆಚ್ಚು ವರುಧಿನಿ ಪ್ರೀತಿಸುತ್ತಿದ್ದ ಹುಡುಗನೇ ಹರ್ಷ. ಅವನು ಇವಳ ಬಲೆಗೆ ಬೀಳುತ್ತಾನೆ. ಪಾರ್ಟಿ, ಔಟಿಂಗ್ ಅಂತ ವರುಧಿನಿ ಜೊತೆ ಅಡ್ಡಾಡುತ್ತಿದ್ದ ಹರ್ಷ, ಹಳ್ಳಿ ಹುಡುಗಿಯ ಪ್ರೀತಿಯ ಸೆರೆಯಲ್ಲಿ ಸಿಕ್ಕಿ ಹಾಕಿಕೊಳ್ಳೋದು ಕಥೆ. ಈ ಸೀರಿಯಲ್ ಕಾಲೇಜು ಹುಡುಗರ ಫೇವರೇಟ್ ಸೀರಿಯಲ್ ಆಗಿದ್ದು, ಹರ್ಷ-ಭವಿ ಜೋಡಿ ಹವಿ ಅಂತಾನೇ ಫೇಮಸ್ ಆಗಿತ್ತು. ಇವರಿಬ್ಬರ ಪ್ರೇಮ ಕಹಾನಿ ಟಿನೇಜ್ ಹುಡುಗರಿಗೆ ಕಚಗುಳಿ ಇಡುವಂತಿತ್ತು.

ಇದೀಗ ಸೀರಿಯಲ್​ ಪ್ರೇಮಿಗಳು, ಜಾಲತಾಣದಲ್ಲಿ ಕಿರಣ್​ ರಾಜ್​ ಅವರ ಕಾಲೆಳೆಯುತ್ತಿದ್ದಾರೆ. ನಿಮ್ಮ ಸೀರಿಯಲ್​ ಸಕ್ಸಸ್​ ಕಾಣಬೇಕು ಎಂದರೆ ಇಬ್ಬರು ಬ್ಯೂಟಿಗಳು ಇರಲೇಬೇಕಾ ಎನ್ನುವುದು ಅವರು ಪ್ರಶ್ನೆ. ಕಿರಣ್​ ರಾಜ್​ ಅವರ ಸಕ್ಸಸ್​ ಹಿಂದೆ ಇರೋದು ಇಬ್ಬರು ಸುಂದರಿಯರು ಎನ್ನುತ್ತಿದ್ದಾರೆ! ಕರ್ಣ ಸೀರಿಯಲ್​ನಲ್ಲಿ ನಿತ್ಯಾ ಆಗಿ ನಮ್ರತಾ ಗೌಡ ಹಾಗೂ ನಿಧಿಯಾಗಿ ಕಾವ್ಯಾ ಗೌಡ ಇದ್ದರೆ, ಕನ್ನಡತಿಯಲ್ಲಿ, ವರುಧಿನಿಯಾಗಿ ಸಾರಾ ಅಣ್ಣಯ್ಯ, ಭುವಿಯಾಗಿ ರಂಜನಿ ರಾಘವನ್ ಅಭಿನಯಿಸಿದ್ದರು.

ನಟ ಕಿರಣ್​ ರಾಜ್​ ನಿಜ ಜೀವನದಲ್ಲಿ ಇನ್ನೂ ಮೋಸ್ಟ್​ ಎಲಿಜಿಬಲ್​ ಬ್ಯಾಚುಲರ್​. ಆದರೆ ಸೀರಿಯಲ್​ನಲ್ಲಿ ಮಾತ್ರ ಇಬ್ಬಿಬ್ಬರು ಹೀರೋಯಿನ್​ಗಳು ಬೇಕೇ ಬೇಕು. ಇಬ್ಬರು ನಾಯಕಿಯರ ಮುದ್ದಿನ ನಾಯಕ ಇವರೇ ಎಂದು ನಟನ ಕಾಲೆಳೆಯುತ್ತಿದ್ದಾರೆ.

Source link

Leave a Reply

Your email address will not be published. Required fields are marked *