ನವದೆಹಲಿ, ಫೆಬ್ರವರಿ 18: ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಭಾರೀ ಹಿಮಪಾತ ಸಂಭವಿಸಿದೆ, ಹಿಮದಲ್ಲಿ ಸಿಲುಕಿದ ವಾಹನವನ್ನು ತಳ್ಳಲು ಕೇಂದ್ರ ಸಚಿವ ಕಿರಣ್ ರಿಜಿಜು ಸಹಾಯ ಮಾಡಿದ್ದಾರೆ. ಈ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶೋಂಗಟ್ಸರ್ ಸರೋವರ ಮತ್ತು ಪಿಟಿ ತ್ಸೋ ಪ್ರದೇಶದ ನಡುವೆ ಈ ಘಟನೆ ನಡೆದಿದ್ದು, ಭಾರಿ ಹಿಮಪಾತವು ಪ್ರಮುಖ ರಸ್ತೆ ತಡೆಗೆ ಕಾರಣವಾಯಿತು. ಹಿಮದಿಂದ ಆವೃತವಾದ ರಸ್ತೆಯಲ್ಲಿ ಸಿಲುಕಿರುವ ವಾಹನವನ್ನು ಸ್ಥಳಾಂತರಿಸಲು ಮತ್ತು ಸ್ಥಳೀಯರು ಮತ್ತು ಕಾರ್ಮಿಕರೊಂದಿಗೆ ತಾವು ಕೂಡ ವಾಹನವನ್ನು ತಳ್ಳುತ್ತಿರುವುದನ್ನು ಕಾಣಬಹುದು. ಈ ವಿಡಿಯೋವನ್ನು ಖುದ್ದಾಗಿ ಅವರೇ ಹಂಚಿಕೊಂಡಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ