
ಕಳೆದ ಹನ್ನೊಂದು ಸೀಸನ್‌ಗೂ ಈ ಸೀಸನ್‌ಗೂ ಹೋಲಿಕ ಮಾಡಿದ್ರೆ..?
ಈ ಬಗ್ಗೆ ಕಿರಿಕ್ ಕೀರ್ತಿ ಹೇಳಿದ್ದು ಹೀಗೆ: “ನನಗೆ ವೈಯಕ್ತಿಕವಾಗಿ ಈ ಬಾರಿಯ ಬಿಗ್ ಬಾಸ್ ತುಂಬಾ ಖುಷಿ ಕೊಟ್ಟಿದೆ. ಕಳೆದ 11 ಸೀಸನ್‌ಗೆ ಹೋಲಿಸಿದರೆ ಅತೀ ಹೆಚ್ಚು ಮನರಂಜನೆ ನೀಡಿದ ಸೀಸನ್ ಇದು. ಅದಕ್ಕೆ ಕಾರಣ, ಈ ಶೋದಲ್ಲಿ ಇರೋ ಸ್ಪರ್ಧಿಗಳ ಕ್ವಾಲಿಟಿ. ತುಂಬಾನೇ ಖಡಕ್ ಆದ ಮಹಿಳಾ ಸ್ಪರ್ಧಿಯಾಗಿ ಎಲ್ಲರಿಗೂ ಕಾಣಿಸಿದ್ದು ಅಶ್ವಿನಿ.. ಉಳಿದ ಸ್ಪರ್ಧಿಗಳಾದ ಗಿಲ್ಲಿ, ರಕ್ಷಿತಾ, ಕಾವ್ಯಾ, ರಘು, ಎಲ್ಲರೂ ಒಂದೊಂದು ರೀತಿಯಲ್ಲಿ ಪ್ರಬಲವಾಗಿ ಆಡಿದ್ದಾರೆ’ ಎಂದಿದ್ದಾರೆ ಕಿರಿಕ್ ಕೀರ್ತಿ.