ಏಳು ಕೋಟಿಗೂ ಅಧಿಕ ರೈತರಿಗೆ ಕಿಸಾನ್ ಪೆಹಚಾನ್ ಪತ್ರ; ಏನಿದರ ವಿಶೇಷತೆ?

ಏಳು ಕೋಟಿಗೂ ಅಧಿಕ ರೈತರಿಗೆ ಕಿಸಾನ್ ಪೆಹಚಾನ್ ಪತ್ರ; ಏನಿದರ ವಿಶೇಷತೆ?


ಜನವರಿ, ನವೆಂಬರ್ 10: ರೈತರಿಗೆ (ರೈತ) ವಿಶೇಷ ಗುರುತಿನ ಚೀಟಿ ಕೊಡುವ ಕೇಂದ್ರ ಸರ್ಕಾರದ ಕಿಸಾನ್ ಪೆಹಚಾನ್ ಕಾರ್ಡ್ ಯೋಜನೆ (Kisan Pehchaan Patra) ಭರದಿಂದ ಸಾಗಿದೆ. ವರದಿಗಳ ಪ್ರಕಾರ 16 ರಾಜ್ಯಗಳಿಂದ 7.4 ಕೋಟಿ ರೈತರಿಗೆ ಈ ಐಡಿಯನ್ನು ನೀಡಲಾಗುತ್ತದೆ. ಈಗ ಪಂಜಾಬ್, ಹಿಮಾಚಲ ಮತ್ತು ಉತ್ತರಾಖಂಡ್ ರಾಜ್ಯ ಅಭಿಯಾನ ನಡೆಯುತ್ತಿದೆ. ಈ ಹಣಕಾಸು ವರ್ಷದೊಳಗೆ 9 ಕೋಟಿ ಕಿಸಾನ್ ಪೆಹಚಾನ್ ಕಾರ್ಡ್ ವಿತರಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.

ದೇಶಾದ್ಯಂತ ಒಂದು ಅಂದಾಜು ಪ್ರಕಾರ 14 ಕೋಟಿ ರೈತರಿದ್ದಾರೆ. ಇವರ ಒಂದು ಶೇ. 30-40ರಷ್ಟು ಮಂದಿಗೆ ಸ್ವಂತ ಜಮೀನು ಇಲ್ಲ. ಇವರು ಗುತ್ತಿಗೆ ಪಡೆದು ಕೃಷಿ ಮಾಡುತ್ತಿದ್ದಾರೆ. ಸ್ವಂತ ಜಮೀನು ಹೊಂದಿರುವ ರೈತರಿಗೆ ಪೆಹಚಾನ್ ಕಾರ್ಡ್ ಕೊಡದಿದ್ದರೆ.

ಇದನ್ನೂ ಓದಿ: ಭಾರತದ ಈ ವರ್ಷದ ಆರ್ಥಿಕ ಬೆಳವಣಿಗೆ ನಿರೀಕ್ಷೆಮೀರುತ್ತದೆಯೇ?; ವಿ ಅನಂತನಾಗೇಶ್ವರನ್ ವಿಶ್ವಾಸ

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ 11.2 ಕೋಟಿ ಮಂದಿ ನೊಂದಾಯಿಸಿದ್ದಾರೆ. ಇವರೆಲ್ಲರೂ ಕೂಡ ಕಿಸಾನ್ ಪೆಹಚಾನ್ ಕಾರ್ಡ್‌ಗಳನ್ನು ಪಡೆಯಲು ಅರ್ಹರಾಗಿರಬಹುದು. 2026-27ರ ವರ್ಷದೊಳಗೆ 11 ಕೋಟಿ ಕಿಸಾನ್ ಪೆಹಚಾನ್ ಕಾರ್ಡ್ ವಿತರಿಸುವ ಗುರಿಯನ್ನು ಇಡಲಾಗಿದೆ.

ಕಿಸಾನ್ ಪೆಹಚಾನ್ ಕಾರ್ಡ್ ಮೂಲಕ ಕೇಂದ್ರ ಸರ್ಕಾರವು ರಾಷ್ಟ್ರವ್ಯಾಪಿ ರೈತರ ಡಿಜಿಟಲ್ ರಿಜಿಸ್ಟ್ರಿಯನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಿದೆ. ಡಿಜಿಟಲ್ ಅಗ್ರಿಕಲ್ಚರ್ ಮಿಷನ್ ಅಡಿಯಲ್ಲಿ ಈ ಹೆಜ್ಜೆ ಇಡಲಾಗುತ್ತಿದೆ. ಈ ಡಿಜಿಟಲ್ ಅಗ್ರಿಕಲ್ಚರ್ ಮಿಷನ್ ಅಡಿಯಲ್ಲಿ ರೈತರಿಗೆ ಹಲವ ಯೋಜನೆಗಳನ್ನು ವಿತರಿಸಲು ಅನುಕೂಲವಾಗುತ್ತದೆ. ಹೀಗಾಗಿ, ಗುರುತಿಸಿ ಕಿಸಾನ್ ಪೆಹಚಾನ್ ಕಾರ್ಡ್‌ಗಳನ್ನು ವಿತರಿಸುವುದು ಬಹಳ ಮುಖ್ಯ ರೈತರ ಪಟ್ಟಿ. ಪಿಎಂ ಕಿಸಾನ್ ಸೇರಿದಂತೆ ರೈತರಿಗೆ ಸರ್ಕಾರ ರೂಪಿಸುವ ವಿವಿಧ ಯೋಜನೆಗಳಿಗೆ ಈ ಕಾರ್ಡ್ ಮುಖ್ಯ ದಾಖಲೆಯಾಗಿ ಅಥವಾ ಆಧಾರವಾಗಿ ಇರುತ್ತದೆ.

ಇದನ್ನೂ ಓದಿ: ಸ್ಕ್ರ್ಯಾಪ್‌ಗಳನ್ನು ಮಾರಿ ಒಂದೇ ತಿಂಗಳಲ್ಲಿ 800 ಕೋಟಿ ರೂ ಗಳಿಸಿದ ಸರ್ಕಾರ; 4 ವರ್ಷದಿಂದ ಬಂದ ಆದಾಯ 4,000 ರೂ ಹೆಚ್ಚು

ಅತಿಹೆಚ್ಚು ರೈತರಿಗೆ ಈ ಗುರುತಿನ ಕಾರ್ಡ್ ವಿತರಿಸಿರುವುದು ಉತ್ತರ ಪ್ರದೇಶ ರಾಜ್ಯ. ಇಲ್ಲಿ 1.56 ಕೋಟಿ ರೈತರಿಗೆ ಪೆಹಚಾನ್ ಕಾರ್ಡ್ ಕೊಡಲಾಗಿದೆ. ರಾಜ್ಯದಲ್ಲಿ ಕೋಟಿಗಿಂತ ಹೆಚ್ಚು ರೈತರಿಗೆ ಕಾರ್ಡ್ ಕೊಡಲಾಗಿದೆ. ಮಧ್ಯಪ್ರದೇಶ ರಾಜಸ್ಥಾನ, ಗುಜರಾತ್, ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಸಾಕಷ್ಟು ಪೆಹಚಾನ್ ಕಾರ್ಡ್‌ಗಳನ್ನು ವಿತರಿಸಲಾಗಿದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *