16

Image Credit : Instagram
ಕಿಶನ್ ಬಿಳಗಲಿ
ಕನ್ನಡ ಮಾತ್ರವಲ್ಲದೇ ಹಿಂದಿ ರಿಯಾಲಿಟಿ ಶೋಗಳನ್ನು ಡ್ಯಾನ್ಸ್ ಮಾಡಿ ವಿಜೇತರಾಗಿ ಖ್ಯಾತಿ ಪಡೆದ ಕಿಶನ್ ಬಿಳಗಲಿ, ಕನ್ನಡ ಬಿಗ್ ಬಾಸ್ ಮೂಲಕ ಕನ್ನಡಿಗರಿಗೆ ಹತ್ತಿರವಾಗಿದ್ದರು. ಇದೀಗ ಸ್ಪೆಷಲ್ ಫೋಟೊ ಶೇರ್ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ.
26
Image Credit : Instagram
ಕಿಶನ್ ಮಾಜಿ ಗೆಳತಿಯ ಹುಟ್ಟುಹಬ್ಬ
ಸದ್ಯ ಕಿಶನ್ ತಮ್ಮ ಇನ್’ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿರುವ ಫೋಟೊಗಳು ಭಾರಿ ಸದ್ದು ಮಾಡುತ್ತಿವೆ. ಅಷ್ಟಕ್ಕೂ ಕಿಶನ್ ಶೇರ್ ಮಾಡಿರೋದು ಯಾರ್ ಫೋಟೊ ಗೊತ್ತಾ? ತಮ್ಮ ಮಾಜಿ ಗರ್ಲ್ ಫ್ರೆಂಡ್ ಫೋಟೊ. ಕಾರಣ ಇವತ್ತು ಆಕೆಯ ಬರ್ತ್ ಡೇ.
36
Image Credit : Instagram
ಮಾಜಿ ಗರ್ಲ್ ಫ್ರೆಂಡ್ ಗೆ ಸ್ಪೆಷಲ್ ಬರ್ತ್ ಡೇ ವಿಶ್
ಕಿಶನ್ ಬಿಳಗಲಿ ತಮ್ಮ ಮಾಜಿ ಗರ್ಲ್ ಫ್ರೆಂಡ್ ಹುಟ್ಟುಹಬ್ಬಕ್ಕೆ ಒಂದಷ್ಟು ಹಳೆಯ ಫೋಟೊಗಳನ್ನು ಶೇರ್ ಮಾಡಿ, ಬೆಂಬಲ ನೀಡಿದಕ್ಕಾಗಿ ಥ್ಯಾಂಕ್ಯೂ ಎಂದಿದ್ದಾರೆ. ಜೊತೆಗೆ ಮುದ್ದಾಗಿ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
46
Image Credit : Instagram
ಏನ್ ಹೇಳಿದ್ರು ಕಿಶನ್
ಪ್ರತಿಯೊಂದು ಪ್ರೇಮಕಥೆಯೂ ಸುಖಾಂತ್ಯವಾಗಬೇಕಾಗಿಲ್ಲ, ಪ್ರತಿ ಬ್ರೇಕಪ್ ದ್ವೇಷವಾಗಿ ಬದಲಾಗಬೇಕಾಗಿಲ್ಲ .. ನನ್ನದು ನನ್ನ ಜೀವನವನ್ನು ಬದಲಾಯಿಸಿತು … ಹುಟ್ಟುಹಬ್ಬದ ಶುಭಾಶಯಗಳು ಪ್ರಿನ್ಸೆಸ್. ನಾನು ನನ್ನ ಜೀವನದ ಕಠಿಣ ಪರಿಸ್ಥಿತಿಯಲ್ಲಿದ್ದಾಗ ನನ್ನ ಪಕ್ಕದಲ್ಲಿದ್ದಕ್ಕಾಗಿ ಮತ್ತು ನನ್ನ ಎಲ್ಲಾ ಪರಿಸ್ಥಿತಿಯಲ್ಲೂ ನಂಬಿದ್ದಕ್ಕಾಗಿ ಧನ್ಯವಾದಗಳು .. ನಿನ್ನ ನೆನಪುಗಳು ನನ್ನ ದೊಡ್ಡ ನಿಧಿಯಾಗಿರುತ್ತವೆ .. ಹೇಳಲಾಗದ ಕಥೆ . “ಮಿಸ್ ಇಂಡಿಪೆಂಡೆಂಟ್. ಎಂದು ಕಿಶನ್ ಬರೆದುಕೊಂಡಿದ್ದಾರೆ.
56
Image Credit : Instagram
ಕಿಶನ್ ನಡೆ ಮೆಚ್ಚಿಕೊಂಡ ಫ್ಯಾನ್ಸ್
ಬ್ರೇಕಪ್ ಮಾಡಿಕೊಂಡ ಹುಡುಗಿಯನ್ನು ದ್ವೇಷಿಸುವವರ ಮಧ್ಯೆ, ಆಕೆಯನ್ನು ಹೊಗಳಿ, ತನ್ನ ಬದಕು ಬದಲಾಯಿಸಿದ ಆಕೆಗೆ ಶುಭ ಕೋರಿದ ಕಿಶನ್ ನಡೆಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ನಿಮ್ಮ ಮೃದು ಹೃದಯಕ್ಕೆ, ಮುದ್ದಾದ ಶುಭಾಶಯಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ ಅಭಿಮಾನಿಗಳು.
66
Image Credit : Instagram
ಯಾರು ಈ ಮಿಸ್ಟ್ರೀ ಗರ್ಲ್
ಅಂದ ಹಾಗೆ ಕಿಶನ್ ಶೇರ್ ಮಾಡಿರುವಂತಹ ಆ ಮಿಸ್ಟ್ರಿ ಗರ್ಲ್ ಯಾರು ಎಂಬುದು ಗೊತ್ತಿಲ್ಲ. ಫೋಟೊ ನೋಡುತ್ತಿದ್ದರೆ ತುಂಬಾ ಹಳೆಯ ಫೋಟೊದಂತಿದೆ. ಎಲ್ಲೂ ಕಿಶನ್ ಆಕೆಯ ಫೇಸ್ ರಿವೀಲ್ ಮಾಡಿಲ್ಲ. ಹಾಗಾಗಿ ಆಕೆ ಕಿಶನ್ ಬಿಳಗಲಿಯ ಮಿಸ್ಟ್ರಿ ಎಕ್ಸ್ ಗರ್ಲ್ ಫ್ರೆಂಡ್ ಆಗಿಯೇ ಉಳಿದುಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.