2026 ರ ಐಪಿಎಲ್ ಆರಂಭಕ್ಕೂ ಮುನ್ನ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ರಿಂಕು ಸಿಂಗ್ ಅವರನ್ನು ತಂಡ ಉಪನಾಯಕನನ್ನಾಗಿ ನೇಮಿಸಿದೆ. ಇದು ಕೆಕೆಆರ್ ಜೊತೆಗಿನ ರಿಂಕು ಸಿಂಗ್ ಅವರ ಎಂಟನೇ ಸೀಸನ್ ಆಗಿದ್ದು, ಈಗ ಅವರನ್ನು ಉಪನಾಯಕನನ್ನಾಗಿ ನೇಮಿಸಲಾಗಿದೆ.
2018 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಐಪಿಎಲ್ಗೆ ಪಾದಾರ್ಪಣೆ ಮಾಡಿದ ರಿಂಕು ಸಿಂಗ್ ಆವೃತ್ತಿಯಲ್ಲಿ ಕೇವಲ 29 ರನ್ ಗಳಿಸಿದರು. ಮುಂದಿನ ಆವೃತ್ತಿಯಲ್ಲಿ ರಿಂಕು ಕಲೆಹಾಕಿದ್ದು, ಕೇವಲ 37 ರನ್ ಗಳಿಸಿದರು. ಅದರ ನಂತರದ ಆವೃತ್ತಿಯಲ್ಲಿ ಕೇವಲ ಒಂದು ಪಂದ್ಯವನ್ನು ಆಡಿದ್ದ ಅವರು, 11 ರನ್ ಗಳಿಸಿದ್ದರು. ಆದರೆ ಇಂದು ಕೋಲ್ಕತ್ತಾ ತಂಡದಲ್ಲಿ ಅತ್ಯುತ್ತಮ ಫಿನಿಷರ್ ಆಗಿದ್ದು, ಉಪನಾಯಕನಾಗಿ ಆಯ್ಕೆಯಾಗಿದ್ದಾರೆ.
ರಿಂಕು ಸಿಂಗ್ ಐಪಿಎಲ್ನಲ್ಲಿ ಇದುವರೆಗೆ 51 ಇನ್ನಿಂಗ್ಸ್ಗಳನ್ನಾಡಿದ್ದು, 1099 ರನ್ ಗಳಿಸಿದ್ದಾರೆ. ಅವರ ಬ್ಯಾಟಿಂಗ್ ಸರಾಸರಿ 30.52 ಆಗಿದ್ದು, ಅವರ ಸ್ಟ್ರೈಕ್ ರೇಟ್ 145 ಹೆಚ್ಚು. ರಿಂಕು ಇದುವರೆಗೆ ನಾಲ್ಕು ಅರ್ಧಶತಕಗಳನ್ನು ಬಾರಿಸಿದ್ದು, ಐಪಿಎಲ್ನಲ್ಲಿ 56 ಸಿಕ್ಸರ್ಗಳು ಮತ್ತು 87 ಬೌಂಡರಿಗಳನ್ನು ಬಾರಿಸಿದ್ದಾರೆ. ಕಾಲದಿಂದ ಕೆಕೆಆರ್ ತಂಡದಲ್ಲಿರುವ ರಿಂಕು ಸಿಂಗ್ಗೆ ಕೆಕೆಆರ್ ಇಂತಹ ಮಹತ್ವದ ಜವಾಬ್ದಾರಿಯನ್ನು ವಹಿಸಿದೆ.
ರಿಂಕು ಸಿಂಗ್ ಕಠಿಣವಾಗಿ ಎದುರಿಸುತ್ತಿರುವ ಸಮಯದಲ್ಲಿ ಅವರನ್ನು ಕೆಕೆಆರ್ ತಂಡದ ಉಪನಾಯಕನನ್ನಾಗಿ ನೇಮಿಸಲಾಗಿದೆ. ಅವರು ಇತ್ತೀಚೆಗೆ ಕ್ಯಾನ್ಸರ್ ನಿಂದ ಬಳಲುತ್ತಿದ್ದ ತಮ್ಮ ತಂದೆಯನ್ನು ಕಳೆದುಕೊಂಡರು. ಇದಲ್ಲದೆ, ಅವರು 2026 ರ ಟಿ20 ಅವಯಲ್ಲಿ ಕಳಪೆ ಪ್ರದರ್ಶನ ನೀಡಿ, ಆಡಿದ ಐದು ಪಂದ್ಯಗಳಲ್ಲಿ ಕೇವಲ 23 ರನ್ ಗಳಿಸಿದ್ದರು.
ಹೀಗಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನ ನಂತರ, ಅವರನ್ನು ಆಡುವ ಹನ್ನೊಂದರ ಬಳಗದಿಂದ ಕೈಬಿಡಲಾಯಿತು. ಇದರಿಂದ ಅವರು ಫೈನಲ್ನಲ್ಲಿಯೂ ಆಡಲಿಲ್ಲ. ರಿಂಕು ಸಿಂಗ್ ಪ್ರಸ್ತುತ ಫಾರ್ಮ್ನಲ್ಲ, ಆದರೆ ಕೋಲ್ಕತ್ತಾ ಅವರ ಮೇಲಿನ ವಿಶ್ವಾಸವನ್ನು ತೋರಿಸಿದೆ. ಆದ್ದರಿಂದ, ಈ ಜವಾಬ್ದಾರಿಯನ್ನು ಹೊತ್ತುಕೊಂಡು ಉತ್ತಮ ಪ್ರದರ್ಶನ ನೀಡುವ ಒತ್ತಡ ಅವರ ಮೇಲಿರುತ್ತದೆ.




