KMFನಲ್ಲಿ ಉದ್ಯೋಗದ ಆಮಿಷ: ಲಕ್ಷ ಲಕ್ಷ ಹಣ ಕೊಟ್ಟು ಯಾಮಾರಿದ ಹಲವರು!

KMFನಲ್ಲಿ ಉದ್ಯೋಗದ ಆಮಿಷ: ಲಕ್ಷ ಲಕ್ಷ ಹಣ ಕೊಟ್ಟು ಯಾಮಾರಿದ ಹಲವರು!


KMFನಲ್ಲಿ ಉದ್ಯೋಗದ ಹೆಸರಿನಲ್ಲಿ ವಂಚನೆ

ಬೆಂಗಳೂರು, ಜನವರಿ 08: ಕರ್ನಾಟಕ ಹಾಲು ಒಕ್ಕೂಟದಲ್ಲಿ (ಕರ್ನಾಟಕ ಹಾಲು ಒಕ್ಕೂಟ) ಕೆಲಸದ ಆಸೆ ತೋರಿಸಿ ಉದ್ಯೋಗಾಂಕ್ಷಿಗಳಿಂದ ಹಣ ಪಡೆದು 10ಕ್ಕೂ ಹೆಚ್ಚು ಜನರಿಗೆ ವಂಚಿಸಿರುವ ಆರೋಪ ಕೇಳಿಬಂದಿದೆ. ಒಂದೊಂದು ಹುದ್ದೆಗೆ 10 ಲಕ್ಷ ರೂಪಾಯಿಗಳನ್ನು ಪಡೆದಿದ್ದಾರೆ ಎನ್ನಲಾದ ಆರೋಪಿಗಳ ವಿರುದ್ಧ ದೂರು ದಾಖಲಾಗಿದೆ. ಕೆಇಎಸ್ ಅಧಿಕಾರಿಯೆಂದು ಪರಿಚಯಿಸಿಕೊಂಡು ಆರೋಪಿಗಳು ವಂಚನೆಗೆ ಒಳಗಾಗಿದ್ದಾರೆ.

ತಾನು ಕೆಎಸ್‌ಎಸ್‌ ಅಧಿಕಾರಿಯೆಂದು ಆರೋಪಿ ರಾಧಾಕೃಷ್ಣನ್‌ ದೂರುದಾರರಿಗೆ ಪರಿಚಯಿಸಿಕೊಂಡಿದ್ದಾರೆ. ಪೇಪರ್ ನಲ್ಲಿ ಕೆಎಂಎಫ್ ನವರು ನೀಡಿದ ಜಾಹಿರಾತು ತೋರಿಸಿ ನಾವೇ ಕೊಟ್ಟಿರೋದು. 10 ಲಕ್ಷ ಕೊಟ್ಟರೆ ಈ ಕೆಲಸ ನಿಮ್ಮವರಿಗೆ ಮಾಡಿಸ್ತೀನಿ ಎಂದು ಭರವಸೆ ನೀಡಿದ್ದಾರೆ. ತಾನು ಕರ್ನಾಟಕ ಹಾಲು ಒಕ್ಕೂಟದಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಹೀಗಾಗಿ ಹಣ ಕೊಟ್ಟರೆ ಕೆಲಸ ಪಕ್ಕಾ ಎಂದು ನಂಬಿಕೆ ಹುಟ್ಟಿಸಿದೆ. ಈತನ ಮಾತು ನಂಬಿ ಕುಂಟುಂಬದವರು, ಸ್ನೇಹಿತರಿಂದ ದೂರುದಾರ ಹಣ ಹಾಕಿದ್ದರು. ಕೆಲಸದ ಲಿಸ್ಟ್‌ನಲ್ಲಿ ನಿಮ್ಮ ಹೆಸರಿದೆ ಎಂದು ನಂಬಿಕೆ ಬರುವಂತೆ ಆರೋಪಿ, ನಂತರ ಮೇಲಿನ ಅಧಿಕಾರಿಗಳು ಇನ್ನೂ 15 ಲಕ್ಷ ಹಣವನ್ನು ಕೇಳಿದ್ದಾರೆ. ಎಲ್ಲಾ ರೆಡಿ ಆಗಿದ್ದರೆ ಹೆಚ್ಚಿನ ಹಣ ಕೊಟ್ಟರೆ ಕೆಲಸ ಪಕ್ಕಾ ಆಗುತ್ತೆ ಎಂದಿದ್ದ.

ಇದನ್ನೂ ಓದಿ: ನಂದಿನಿ ಬೂತ್‌ಗಳಲ್ಲಿ ಬೇರೆ ಬ್ರಾಂಡ್ ಪ್ರಾಡಕ್ಟ್ ಗೆ ಬ್ರೇಕ್; ಕೆಎಂಎಫ್ ಹೊಸ ರೂಲ್ಸ್

ದೂರುದಾರರು ಸದ್ಯ ಸಂಪರ್ಕಕ್ಕೆ ಪ್ರಯತ್ನಿಸಿದಾಗ ಆರೋಪಿ ಕೈಗೆ ಸಿಗುತ್ತಿಲ್ಲ. ಕೂಡ ಫೋನ್ ಸ್ವಿಚ್ ಆಫ್ ಆಗಿದೆ. ಹೀಗಾಗಿ ಈ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ನೇಮಗೌಡ ಕಾಣಿಸಿಕೊಂಡಿದ್ದು, ಪ್ರಕರಣ ಸಂಬಂಧ ರಾಧಾಕೃಷ್ಣನ್, ನಾಗರಾಜ್ ವಿರುದ್ಧ ದೂರು ದಾಖಲಾಗಿದೆ. ಲಕ್ಷ ಲಕ್ಷ ಹಣ ಹಲವರಿಗೆ ಮೋಸ ಸಿಕ್ಕಿದೆ ಎನ್ನಲಾಗಿದ್ದು, ದಾಖಲೆಗಳನ್ನು ಪರಿಶೀಲನೆ ನಡೆಯಲಿದೆ. ಆರೋಪಿಗಳನ್ನು ಬಂಧಿಸಿದ ನಂತರ ಸತ್ಯಾಂಶ ತಿಳಿಯಲಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *