Headlines

ನಕಲಿ ನಂದಿನಿ ತುಪ್ಪ ಕಡಿವಾಣಕ್ಕೆ KMF ಹೊಸ ಪ್ರಯೋಗ: ಕ್ಯೂ ಆರ್ ಕೋಡಿನಲ್ಲೇ ಅಸಲಿ, ನಕಲಿ ಪತ್ತೆ

ನಕಲಿ ನಂದಿನಿ ತುಪ್ಪ ಕಡಿವಾಣಕ್ಕೆ KMF ಹೊಸ ಪ್ರಯೋಗ: ಕ್ಯೂ ಆರ್ ಕೋಡಿನಲ್ಲೇ ಅಸಲಿ, ನಕಲಿ ಪತ್ತೆ


ಬೆಂಗಳೂರು, ನವೆಂಬರ್ 28: ಕೆಎಂಎಫ್ (ಕೆಎಂಎಫ್) ತುಪ್ಪಕ್ಕೆ ಎಲ್ಲಿಲ್ಲದ ಬೇಡಿಕೆ. ತಿರುಪತಿ ತಿಮ್ಮಪ್ಪ ಹಿಡಿದು ಪ್ರತಿಯೊಬ್ಬರಿಗೆ ನಂದಿನಿ ತುಪ್ಪ (ನಂದಿನಿ ತುಪ್ಪ) ಬೇಕು. ಇದನ್ನೇ ಬಂಡವಾಳ ಮಾಡಿಕೊಂಡು ನಕಲಿ ತುಪ್ಪ ಮಾರಾಟ ಮಾಡುತ್ತಿರುವ ಜಾಲವೊಂದು ಇತ್ತೀಚೆಗೆ ಇತ್ತು. ಹೀಗಾಗಿ ಇದಕ್ಕೆ ಕಡಿವಾಣ ಹಾಕುವ ಆಧುನಿಕ KMF ನಯಾ ಪ್ಲಾನ್‌ಗೆ ಮುಂದಾಗಿದೆ. ಕ್ಯೂ ಆರ್ ಕೋಡ್ ಬಳಕೆಗೆ ಸಿದ್ಧತೆ ನಡೆಸಿದೆ.

ಕ್ಯೂ ಆರ್ ಕೋಡ್ ಬಳಕೆ ಮುಂದಾದ ಕೆಎಂಎಫ್

ಕರ್ನಾಟಕದ ಹೆಮ್ಮೆಯ ನಂದಿನಿ ತುಪ್ಪ ತಿರುಪತಿ ಲಡ್ಡುಗೆ ಬಳಕೆ ಮಾಡಲಾಗುತ್ತಿದೆ. ಜೊತೆಗೆ ಇದರ ಘಮಲು ವಿದೇಶಕ್ಕೂ ತಲುಪುತ್ತಿದೆ. ಆದರೆ ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಆರೋಪಿಗಳು ನಂದಿನಿ ಬ್ರಾಂಡ್ ತುಪ್ಪವನ್ನು ಕಲಬೆರಕೆ ಮಾಡಿ ಮಾರಾಟ ಮಾಡುತ್ತಿದ್ದಾರೆ ಬೃಹತ್ ಜಾಲವನ್ನು ಸಿಸಿಬಿ ಪೊಲೀಸರು ಮತ್ತು ಕೆಎಂಎಫ್‌ನ ಜಾಗೃತ ದಳ ಬಯಲು ಮಾಡಿದೆ. ಈ ಪ್ರಕರಣದಿಂದ ಎಚ್ಚೆತ್ತ ಕೆಎಂಎಫ್ ತುಪ್ಪದ ಪ್ಯಾಕೆಟ್ ಮತ್ತು ಬಾಟಲ್‌ಗೆ ಕ್ಯೂ ಆರ್ ಕೋಡ್ ಬಳಸಲು ಮುಂದಾಗಿದೆ.

ಇದನ್ನೂ ಓದಿ: ನಂದಿನಿ ಹೆಸರಿನಲ್ಲಿ ನಕಲಿ ತುಪ್ಪ: ತಮಿಳುನಾಡಿನಲ್ಲಿ ಕಲಬೆರಕೆ ಮಾಡಿ ಕರ್ನಾಟಕದಲ್ಲಿ ಮಾರಾಟ

ಈ ಕುರಿತು ಕೆಎಂಎಫ್ ಅಧಿಕಾರಿಗಳು, ಅವರೊಂದಿಗೆ ಸಭೆ ಮಾಡಿ ಚರ್ಚೆ ನಡೆಸಿದ್ದಾರೆ. ಕ್ಯೂ ಆರ್ ಕೋಡ್ ಬಳಸಿದ ತುಪ್ಪದ ಉತ್ಪಾದನೆ, ಪೂರೈಕೆ, ಯಾವ ಮಳಿಗೆ, ಯಾರಿಗೆ ಮಾರಾಟವಾಗಿದೆ ಎಂಬುದು ಈ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವುದರಿಂದ ತಿಳಿಯಲಿದೆ. ಆ ಮೂಲಕ ಗ್ರಾಹಕರು ಖರೀದಿ ಮಾಡಿರುವುದು ಅಸಲಿಯೋ, ನಕಲಿಯೋ ಎಂಬುದು ಗೊತ್ತಾಗಲಿದೆ. ಆದರೆ ಇದಕ್ಕೆ ಆಗುವ ಹೆಚ್ಚುವರಿ ವೆಚ್ಚವನ್ನು ಗ್ರಾಹಕರ ಮೇಲೆ ಹೊರೆಸದೇ ಕೆಎಂಎಫ್ ಭರಿಸಲು ಮುಂದಾಗಿದೆ.

ಇದನ್ನೂ ಓದಿ: ಇನ್ಮುಂದೆ ಸೌದಿ ಅರೇಬಿಯಾ, ಅಮೆರಿಕ, ಆಸ್ಟ್ರೇಲಿಯಾದಲ್ಲಿ ‘KMF ನಂದಿನಿ’ ಹವಾ

ಒಟ್ಟಿನಲ್ಲಿ ನಂಬಿಕೆಯಿಂದ ಖರೀದಿಸುತ್ತಿದ್ದ ಕೆಎಂಎಫ್ ತುಪ್ಪ ನಕಲಿ ಪ್ರಕರಣ ಬೆಳಕಿಗೆ ಬರುತ್ತಿರುವ ಕಾರಣ ಕೆಎಂಎಫ್ ಹೊಸ ದಾಳ ಪ್ರಯೋಗಕ್ಕೆ ಮುಂದಾಗಿದ್ದು, ಕ್ಯೂ ಆರ್ ಕೋಡ್ ಮೊರೆ ಹೋಗುತ್ತಿದೆ. ಆದರೆ ಇದು ಎಷ್ಟರ ಮಟ್ಟಿಗೆ ಯಶಸ್ವಿ ಆಗುತ್ತೆ ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *