Shri Raghavendra Mahathme: ನೀವು ಶ್ರೀ ರಾಘವೇಂದ್ರ ಮಹಾತ್ಮೆ ಧಾರಾವಾಹಿ ನೋಡುತ್ತಿದ್ದರೆ, ಆ ಧಾರಾವಾಹಿಯಲ್ಲಿ ರಾಯರ ಪೂರ್ವಾಶ್ರಮದ ಅಂದ್ರೆ ವೆಂಕಟನಾಥರ ಪತ್ನಿ ಸರಸ್ವತಿಯ ಪಾತ್ರದಲ್ಲಿ ನಟಿಸುತ್ತಿರುವ ನಟಿ ಯಾರೂ ಎನ್ನುವ ಕುತೂಹಲ ನಿಮಗೆ ಹುಟ್ಟಿರಬಹುದು. ಇಲ್ಲಿದೆ ನಟಿಯ ಕುರಿತು ಮಾಹಿತಿ.

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ರಾಘವೇಂದ್ರ ಮಹಾತ್ಮೆ ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದೆ. ಧಾರಾವಾಹಿಯ ಪ್ರತಿಯೊಂದು ಪಾತ್ರಗಳು ಸಹ ಆ ಪಾತ್ರಕ್ಕೆ ಜೀವ ತುಂಬಿ ನಟಿಸುತ್ತಿರುವುದರಿಂದ ನಿಜವಾಗಿಯೂ ರಾಯರು ಮತ್ತು ಅವರ ಕುಟುಂಬವನ್ನೇ ನೋಡಿದಂತಾಗುತ್ತದೆ.

ಅದರಲ್ಲೂ ರಾಯರ ಪತ್ನಿ ಸರಸ್ವತಿಯ ಪಾತ್ರ ಇತ್ತೀಚಿನ ದಿನಗಳಲ್ಲಿ ಗಮನ ಸೆಳೆದಿದೆ. ಕಣ್ಣುಗಳಲ್ಲಿ ಹೊಳಪನ್ನು ಹೊಂದಿರುವ, ಮುಖದಲ್ಲಿ ತೇಜಸ್ಸು ಹೊಂದಿರುವ ರಾಯರ ಪತ್ನಿ ಹೀಗೆಯೇ ಇದ್ದಿರಬಹುದು ಏನೋ ಎಂದೆನಿಸುವ ಮಟ್ಟಿಗೆ ಪಾತ್ರವನ್ನು ನಿರ್ವಹಿಸುತ್ತಿರುವ ನಟಿ ಪುಣ್ಯ ಬಸವರಾಜು.

ಪುಣ್ಯ ಬಸವರಾಜು ತುಂಬಾನೆ ಅದ್ಭುತವಾಗಿ ಪಾತ್ರ ನಿರ್ವಹಿಸುತ್ತಿದ್ದಾರೆ. ಇದು ಅವರ ಮೊದಲ ಧಾರಾವಾಹಿಯಾಗಿದ್ದರು, ಇವರ ನಟನೆಗೆ ಈಗಾಗಲೇ ವೀಕ್ಷಕರು ಅಭಿಮಾನಿಯಾಗಿದ್ದಾರೆ. ಸಾಕ್ಷಾತ್ ಸರಸ್ವತಿ ಭಾಯ್ ಅವರನ್ನೇ ನೋಡಿದ ಹಾಗೆ ಆಗುತ್ತೆ, ಎಂದು ಕಾಮೆಂಟ್ ಗಳಲ್ಲೆ ಕೈಮುಗಿಯುತ್ತಿದ್ದಾರೆ ಜನ.

ಅಂದಹಾಗೆ ಪುಣ್ಯ ರಂಗ ಭೂಮಿ ಕಲಾವಿದೆ ಎನ್ನುವ ವಿಚಾರ ಅವರ ಇನ್’ಸ್ಟಾಗ್ರಾಂ ಫ್ರೊಫೈಲ್ ನಿಂದ ವರದಿಯಾಗಿದೆ. ಶ್ರೀ ರಾಘವೇಂದ್ರ ಮಹಾತ್ಮೆ ಇವರ ಮೊದಲ ಧಾರಾವಾಹಿ. ಆದರೆ ಪುಣ್ಯ ಎಲ್ಲಿಯವರು, ಇಲ್ಲಿವರೆಗೆ ಏನು ಮಾಡುತ್ತಿದ್ದರು ಎನ್ನುವ ಕುರಿತು ಯಾವುದೇ ಮಾಹಿತಿ ದೊರೆತಿಲ್ಲ.

ಇತ್ತೀಚೆಗೆ ವೆಂಕಟನಾಥ ಮತ್ತು ಸರಸ್ವತಿ ಅವರ ಮದುವೆ ಅದ್ಧೂರಿಯಾಗಿ ನಡೆದಿದೆ. ವೆಂಕಟನಾಥ- ಸರಸ್ವತಿಯ ಮದುವೆಯನ್ನು ಮಾಧ್ವ ಸಂಪ್ರದಾಯದ ಅನುಸಾರ, ಹಳೆಯ ಕಾಲದ ರೀತಿ ರಿವಾಜುಗಳಂತೆ ಚಿತ್ರಿಸಲಾಗಿದೆ. ಇದನ್ನು ನೋಡಿದವರು ನಿಜವಾಗಿಯೂ ರಾಯರ ಮದುವೆಯನ್ನು ಕಣ್ತುಂಬಿಕೊಂಡ ಅನುಭವ ಆಗಿದೆ , ಇದನ್ನು ನೋಡಿದ ನಾವೇ ಧನ್ಯರು ಎನ್ನುತ್ತಿದ್ದಾರೆ.

ಶ್ರೀ ರಾಘವೇಂದ್ರ ಮಹಾತ್ಮೆ ಧಾರಾವಾಹಿಯಲ್ಲಿ ನವೀನ್ ಕೃಷ್ಣ ನಿರ್ದೇಶನ ಮಾಡುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ವೆಂಕಟನಾಥರಾಗಿ ಶ್ರೇಯಸ್ ಕಷ್ಯಪ್ ನಟಿಸುತ್ತಿದ್ದಾರೆ. ಇವರಲ್ಲದೇ ಯದು ಕೃಷ್ಣ, ಶ್ರೀಲತಾ ಅನೂಪ್, ಬಿಂದು ಎನ್, ಭವಾನಿ ಪುರೋಹಿತ್, ಮದನ್, ಸ್ಪರ್ಶ ಶೆಣೈ ಮೊದಲಾದವರು ನಟಿಸುತ್ತಿದ್ದಾರೆ.

Source link
Sri Raghavendra Mahathme: ರಾಯರ ಪತ್ನಿ ಸರಸ್ವತಿಯಾಗಿ ನಟಿಸುತ್ತಿರುವ ಸುಂದರಿ ಇವರೇ