ಹಿಂದೆಲ್ಲಾ ಸಮಾಜದಲ್ಲಿ ಅವಿಭಕ್ತ ಕುಟುಂಬಗಳೇ (ಕುಟುಂಬ) ಕಾಣಸಿಗುತ್ತಿತ್ತು. ಈ ಕುಟುಂಬದಲ್ಲಿ ಎಲ್ಲರೂ ಒಟ್ಟಿಗೆ ಕುಳಿತು ಕಷ್ಟಸುಖಗಳ ಬಗ್ಗೆ ಮಾತನಾಡುತ್ತಾ ಜೊತೆ ಕುಳಿತು ಊಟ ಮಾಡುತ್ತಿದ್ದರು. ಆದರೆ ವಿಭಕ್ತ ಕುಟುಂಬಗಳೇ ಹೆಚ್ಚಿರುವ ಈ ಕಾಲದಲ್ಲಿ ಮನೆಯವರೆಲ್ಲಾ ಜೊತೆ ಕುಳಿತು ಊಟ ಮಾಡುವುದೇ ಅಪರೂಪವಾಗಿಬಿಟ್ಟಿದೆ. ಹೌದು ಈಗಂತೂ ಟಿವಿ ನೋಡುತ್ತಾ ಊಟ ಮಾಡಿದ್ರೆ, ಇನ್ನೂ ಕೆಲವರು ರೂಂನಲ್ಲಿ ಮೊಬೈಲ್ ನೋಡುತ್ತಾ ಅಲ್ಲೇ ಊಟ ಮಾಡಿ ಮುಗಿಸುತ್ತಾರೆ. ಮನೆಯವರೆಲ್ಲಾ ಜೊತೆ ಕುಳಿತು ಊಟವೇ. ಆದರೆ ಏನ್ ಗೊತ್ತಾ, ಇಂದಿನ ಈ ಒತ್ತಡದ ಜೀವನಶೈಲಿಯಲ್ಲಿ ಮನಸ್ಸಿಗೆ ಸ್ವಲ್ಪ ನೆಮ್ಮದಿ ಬೇಕಂದ್ರೆ ಸ್ವಲ್ಪ ಬಿಡುವು ಮಾಡಿಕೊಂಡು ಮನೆಯವರ ಜೊತೆ ಕುಳಿತು ಊಟಮಾಡಬೇಕಂತೆ. ಹಾಗಿದ್ರೆ ಮನೆಯವರೆಲ್ಲಾ ಜೊತೆ ಸೇರಿ ಊಟ ಮಾಡುವುದರಿಂದ ಸಿಗುವ ಪ್ರಯೋಜನಗಳ ಬಗ್ಗೆ ತಿಳಿಯಿರಿ.
ಮನೆಯವರೆಲ್ಲಾ ಒಟ್ಟಿಗೆ ಕುಳಿತು ಊಟ ಮಾಡುವುದರಿಂದ ಸಿಗುವ ಪ್ರಯೋಜನಗಳು:
ಒತ್ತಡ: ಮನೆಯವರೆಲ್ಲಾ ಕುಳಿತು ಊಟ ಮಾಡುವಾಗ ನಗು, ಸಂಭಾಷಣೆಗಳು. ಈ ಸಂತೋಷದ ಮಾತುಗಳು ದೇಹದಲ್ಲಿ ಡೋಪಮೈನ್ ಮತ್ತು ಸಿರೊಟೋನಿನ್ ರಾಸಾಯನಿಕಗಳನ್ನು ಸಕ್ರಿಯಗೊಳಿಸುತ್ತದೆ. ಇದು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಒಟ್ಟಿಗೆ ಕುಳಿತು ಊಟ ಮಾಡುವುದರಿಂದ ಸಂಬಂಧಗಳಲ್ಲಿ ನಿಕಟತೆ, ನಂಬಿಕೆ ಮತ್ತು ಭಾವನಾತ್ಮಕ ಸಂಪರ್ಕವನ್ನು ಹೊಂದಿದೆ.
ಮಾನಸಿಕ ಶಾಂತಿ: ನೀವು ನಿಮ್ಮ ಕುಟುಂಬದೊಂದಿಗೆ ಒಟ್ಟಿಗೆ ಕುಳಿತು ಊಟ ಮಾಡುವ ಸಂದರ್ಭದಲ್ಲಿ ನಡೆಯುವ ಸಣ್ಣ ಸಂಭಾಷಣೆಗಳು ದಿನದ ಆಯಾಸವನ್ನು ನಿವಾರಿಸುವುದಲ್ಲದೆ ನಿಮ್ಮ ಮನಸ್ಸಿಗೆ ವಿಶ್ರಾಂತಿ ನೀಡುತ್ತದೆ. ಈ ಸಣ್ಣ ಸಂಭಾಷಣೆಗಳು ನಿಮ್ಮ ದೇಹದಲ್ಲಿ ಬಂಧದ ಹಾರ್ಮೋನ್ ಎಂದೂ ಕರೆಯಲ್ಪಡುವ ಆಕ್ಸಿಟೋಸಿನ್ ಎಂಬ ಹಾರ್ಮೋನನ್ನು ಸಕ್ರಿಯಗೊಳಿಸುತ್ತದೆ. ಈ ಹಾರ್ಮೋನ್ ಒತ್ತಡದ ಹಾರ್ಮೋನ್ ಕಾರ್ಟಿಸೋಲನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮ ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. ಈ ಸಂಭಾಷಣೆಗಳು ನಿಮ್ಮನ್ನು ಭಾವನಾತ್ಮಕವಾಗಿ ಸುರಕ್ಷಿತವಾಗಿರಿಸುತ್ತದೆ ಮತ್ತು ನೀವು ನಿದ್ರೆ ಮಾಡಲು ಸಹಾಯ ಮಾಡುತ್ತದೆ.
ಆರೋಗ್ಯದ ಮೇಲೆ ಪರಿಣಾಮ: ಒಟ್ಟಿಗೆ ಕುಳಿತು ಊಟ ಮಾಡುವಾಗ ಮೊಬೈಲ್ ಫೋನ್ ಪಕ್ಕಕ್ಕೆ ಇಟ್ಟು, ತಮಾಷೆಯ ಸಂಭಾಷಣೆಯ ಸಮಯದಲ್ಲಿ. ಇದು ದಿನದ ಆಯಾಸವನ್ನು ನಿವಾರಿಸಿ ಮನಸ್ಸಿಗೆ ಸಂತೋಷ ನೀಡುವುದರ ಜೊತೆಗೆ ಆರೋಗ್ಯದ ಮೇಲೂ ಉತ್ತಮ ಪರಿಣಾಮ ಬೀರಿದೆ. ಒಟ್ಟಿಗೆ ಊಟ ಮಾಡುವಾಗ ಆಹಾರವನ್ನು ನಿಧಾನವಾಗಿ ಸೇವಿಸುತ್ತೇವೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಬೊಜ್ಜನ್ನು ನಿಯಂತ್ರಣದಲ್ಲಿಡುತ್ತದೆ.
ಇದನ್ನೂ ಓದಿ: ಪ್ರತಿನಿತ್ಯ ಈ ಕೆಲಸಗಳನ್ನು ಮಾಡಿದ್ರೆ ಸಾಕು, ನೀವು ಲೈಫಲ್ಲಿ ಹ್ಯಾಪಿ ಆಗಿರ್ತೀರಾ
ಪರಸ್ಪರ ತಿಳಿದುಕೊಳ್ಳುವ ಅವಕಾಶ: ಇಂದಿನ ಬ್ಯುಸಿ ಜೀವನಶೈಲಿಯಲ್ಲಿ ಕುಟುಂಬದೊಂದಿಗೆ ಸಮಯ ಕಳೆಯುವುದೇ ಅನೇಕರಿಗೆ ಕಷ್ಟಕರವಾಗಿದೆ. ಹೀಗಿರುವಾಗ ಒಟ್ಟಿಗೆ ಕುಳಿತು ಊಟ ಮಾಡುವ ಮೂಲಕ ಕುಟುಂಬದವರೊಂದಿಗೆ ಸಮಯ ಕಳೆಯಬಹುದು. ಈ ಸಮಯದಲ್ಲಿ ನಡೆಯುವ ಸಂಭಾಷಣೆಯ ಮೂಲಕ ಪರಸ್ಪರ ಇಷ್ಟಾನಿಷ್ಟಗಳನ್ನು ತಿಳಿಯಬಹುದು. ಸಲಹೆಗಳನ್ನು ನೀಡುವ ಮೂಲಕ ಏನಾದ್ರೂಗಳಿದ್ದರೆ ಅದಕ್ಕೂ ಪರಿಹಾರವನ್ನು ಪಡೆಯಬಹುದು.
ಸಂಬಂಧಗಳನ್ನು ಒದಗಿಸುತ್ತದೆ: ಮನೆಯವರೆಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವುದರಿಂದ ಸಂಬಂಧ ಬಲವಾಗಿರುತ್ತದೆ. ದಿನದ ಆಯಾಸ ಮತ್ತು ಒತ್ತಡವು ಊಟದ ಸಮಯದಲ್ಲಿ ನಗು ಮತ್ತು ಮೋಜಿನ ವಿಷಯವಾಗಿ ರೂಪಾಂತರಗೊಳ್ಳುತ್ತದೆ. ಈ ಅಂಶಗಳ ಒತ್ತಡವನ್ನು ನಿವಾರಿಸಿ, ಮನಸ್ಸಿಗೆ ಖುಷಿ ನೀಡುವ ಸಂಬಂಧಗಳ ಮಾಧುರ್ಯವನ್ನು ನೀಡಲಾಗುತ್ತದೆ. ಯಾವುದೇ ದಿನಕ್ಕೆ ಕನಿಷ್ಠ ಒಂದು ಬಾರಿಯ ಊಟವನ್ನಾದರೂ ಮನೆಯವರ ಜೊತೆ ಕುಳಿತು ಸೇವಿಸಿ. ಇದು ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಉಂಟು ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ