ವಾಷಿಂಗ್ಟನ್, ನವೆಂಬರ್ 28: ಅಮೆರಿಕ ಅಧ್ಯಕ್ಷರ ಗೃಹ ಕಚೇರಿಯಾದ ಶ್ವೇತಭವನದ (ವೈಟ್ ಹೌಸ್) ಬಾಲಿ ಗಾರ್ಡ್ ಭದ್ರತಾ ಸಿಬ್ಬಂದಿ ಮೇಲೆ ಗುರುವಾರ ಗುಂಡಿನ ದಾಳಿ ಎಸಗಿದ ಘಟನೆ ಅಧ್ಯಕ್ಷ ಡೊನಾ ಟ್ರಂಪ್ (ಡೊನಾಲ್ಡ್ ಟ್ರಂಪ್) ಅವರನ್ನು ರೊಚ್ಚಿಗೆಬ್ಬಿಸಿದೆ. 19 ದೇಶಗಳ ಜನರ ಗ್ರೀನ್ ಕಾರ್ಡ್ಗಳನ್ನು (US ಗ್ರೀನ್ ಕಾರ್ಡ್) ರದ್ದು ಮಾಡುವುದಾಗಿ ಹೇಳಿರುವ ಅವರು, ತೃತೀಯ ವಿಶ್ವದ ದೇಶಗಳಿಂದ (ಮೂರನೇ ವಿಶ್ವ ದೇಶಗಳು) ವಲಸೆಯನ್ನು ಖಾಯಂ ಆಗಿ ನಿಲ್ಲಿಸುವುದಾಗಿಯೂ ಬೆದರಿಕೆ ಹಾಕಿದ್ದಾರೆ.
‘ಅಮೆರಿಕದ ವ್ಯವಸ್ಥೆ ಪೂರ್ಣವಾಗಿ ಚೇತರಿಸಿಕೊಳ್ಳುವಂತೆ ತೃತೀಯ ವಿಶ್ವದ ಎಲ್ಲಾ ದೇಶಗಳಿಂದ ಖಾಯಂ ಆಗಿ ವಲಸೆ ನಿಲ್ಲಿಸುತ್ತೇನೆ. ನಿದ್ರಾಮಂಪರಿನ ಜೋ ಬೈಡನ್‌ರ ಆಟೊಪೆನ್‌ನಿಂದ ಸಹಿ ಹಾಕಲಾದ ಎಲ್ಲಾ ಕೋಟ್ಯಂತರ ಅಕ್ರಮ ದಾಖಲಾತಿಗಳನ್ನು (ವಲಸಿಗರು) ರದ್ದು ಮಾಡುತ್ತೇನೆ. ಅಮೆರಿಕಕ್ಕೆ ಮೌಲ್ಯ ತರದವರು, ಅಮೆರಿಕವನ್ನು ಪ್ರೀತಿಸಲು ಸಾಧ್ಯವಾಗದವರು ಎಲ್ಲರನ್ನೂ ಹೊರಗೆ ಕಳುಹಿಸುತ್ತೇನೆ. ನಮ್ಮ ದೇಶದ ನಾಗರಿಕರಲ್ಲದವರಿಗೆ ನೀಡುತ್ತಿದ್ದ ಎಲ್ಲಾ ಸಬ್ಸಿಡಿ, ಸರ್ಕಾರಿ ಸವಲತ್ತುಗಳನ್ನು ನಿಲ್ಲಿಸುತ್ತೇನೆ. ಅಮೆರಿಕದ ಶಾಂತಿ ಕದಡುವ ವಲಸಿಗರನ್ನು ಮತ್ತು ಭದ್ರತೆಗೆ ಅಪಾಯವಾಗಿರುವ ಮತ್ತು ಪಾಶ್ಚಿಮಾತ್ಯ ನಾಗರಿಕರಿಗೆ ಯಾವುದೇ ವಿದೇಶಿ ನಾಗರಿಕರನ್ನು ಹೊರಗಟ್ಟುತ್ತೇನೆ’ ಎಂದು ಟ್ರಂಪ್ ತಮ್ಮ ಟ್ರೂತ್ ಸೋಷಿಯಲ್‌ನಲ್ಲಿ ಎಚ್ಚರಿಕೆಯ ಮೆಸೇಜ್ ಬರೆದಿದ್ದಾರೆ.
‘ಈ ಪರಿಸ್ಥಿತಿಗೆ ಏಕೈಕ ಪರಿಹಾರವೆಂದರೆ ಅದು ಹಿಮ್ಮುಖ ವಲಸೆ. ದ್ವೇಷಿಸುವ, ಕಡಿಯುವ, ಕೊಲೆ ಮಾಡುವ, ಮತ್ತು ಅಮೆರಿಕದ ನಂಬಿಕೆಯನ್ನು ಒಡೆಯುವವರೆ ನೀವು ಹೆಚ್ಚು ದಿನ ಇರಲಾರಿರಿ’ ಎಂದು ಅಮೆರಿಕ ಅಧ್ಯಕ್ಷರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಅಮೆರಿಕದ ಶ್ವೇತ ಭವನದ ಬಳಿ ಗುಂಡಿನ ದಾಳಿ, ಇಬ್ಬರು ಗಾರ್ಡ್‌ಗಳಿಗೆ ಗಾಯ
ತೃತೀಯ ಜಗತ್ತಿನ ದೇಶಗಳೆಂದರೆ?
ಅಭಿವೃದ್ಧಿಶೀಲ ಮತ್ತು ಹಿಂದುಳಿದ ದೇಶಗಳು ಸಾಮಾನ್ಯವಾಗಿ ತೃತೀಯ ಜಗತ್ತು ಎಂದು. ಗ್ಲೋಬಲ್ ಸೌತ್, ಥರ್ಡ್ ವರ್ಲ್ಡ್ ಇತ್ಯಾದಿ ಪದಗಳು ಕೂಡ ಈ ದೇಶಗಳನ್ನು ಸೂಚಿಸಲು ಬಳಸಲಾಗಿದೆ.
ಎರಡನೇ ವಿಶ್ವ ಮಹಾಯುದ್ಧದ ಬಳಿಕ ಅಮೆರಿಕ ಮತ್ತು ಸೋವಿಯಲ್ ರಷ್ಯಾ ಮಧ್ಯೆ ಶುರುವಾದ ಶೀತಲ ಸಮರ ಅಥವಾ ಕೋರ್ಡ್ ವಾರ್ ಸಂದರ್ಭದಲ್ಲಿ ಥರ್ಡ್ ವರ್ಲ್ಡ್ ಪದಬಳಕೆ ಆರಂಭವಾಯಿತು. ಅಮೆರಿಕ ಮತ್ತು ಅದರೊಂದಿಗೆ ಮೈತ್ರಿ ಮಾಡಿಕೊಂಡ ದೇಶಗಳನ್ನು ಫಸ್ಟ್ ವರ್ಲ್ಡ್ ಎಂದು ಕರೆಯಲಾಯಿತು. ಸೋಶಿಯತ್ ರಷ್ಯಾದೊಂದಿಗೆ ಜೋಡಿತವಾದ ಕಮ್ಯೂನಿಸ್ಟ್ ದೇಶಗಳನ್ನು ಸೆಕೆಂಡ್ ವರ್ಲ್ಡ್ ಎಂದು ಕರೆಯಲಾಯಿತು. ಆಲಿಪ್ತ ನೀತಿ, ಹಾಗೂ ಅಮೆರಿಕ ಮತ್ತು ರಷ್ಯಾ ಗುಂಪುಗಳಿಗೆ ಸೇರಿದ ಇತರ ದೇಶಗಳನ್ನು ಥರ್ಡ್ ವರ್ಲ್ಡ್ ಎಂದು ಸಂಬೋಧಿಸುವ ಪರಿಪಾಟ ಪ್ರಾರಂಭವಾಯಿತು.
ನಂತರ, ಬಡ ಮತ್ತು ಅಭಿವೃದ್ಧಿ ದೇಶಗಳನ್ನು ಥರ್ಡ್ ವರ್ಲ್ಡ್ ದೇಶಗಳೆಂದು ಪರಿಗಣಿಸಲು ಬಂದಿದೆ. ಈ ಥರ್ಡ್ ವರ್ಲ್ಡ್ ದೇಶಗಳ ಸಾಲಿನಲ್ಲಿ ಭಾರತವೂ ಇದೆ. ಈಗ ಡೊನಾಲ್ಡ್ ಟ್ರಂಪ್ ಅವರು ಥರ್ಡ್ ವರ್ಲ್ಡ್ ಎಂದು ಹೇಳಿದ್ದು ಯಾವ ದೇಶವನ್ನು ಉದ್ದೇಶಿಸಿ ಎಂಬುದು ಸ್ಪಷ್ಟವಾಗಿಲ್ಲ. ಒಂದು ವೇಳೆ ವಲಸೆ ನಿಲ್ಲಿಸುವ ದೇಶಗಳ ಪಟ್ಟಿಗೆ ಭಾರತವನ್ನು ಸೇರಿಸುವುದು ಟ್ರಂಪ್ ಉದ್ದೇಶಕ್ಕಾಗಿ, ಜಾಗತಿಕ ರಾಜಕೀಯ ರಚನೆಯ ಸ್ವರೂಪವೇ ಬದಲಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: ಗಾರ್ಡ್ ಮೇಲೆ ದಾಳಿ, 19 ದೇಶಗಳ ಜನರ ಗ್ರೀನ್ ಕಾರ್ಡ್‌ಗಳ ಮೇಲೆ ಟ್ರಂಪ್ ಕಣ್ಣು, ಭಾರತದ ಮೇಲೂ ಪರಿಣಾಮ ಬೀರುತ್ತಾ?
ಭಾರತಕ್ಕೆ ಹಿನ್ನಡೆಯಾಗುತ್ತದಾ?
ಹಲವು ಅಂಶಗಳಿಂದ ಭಾರತದ ಬುದ್ಧಿಶಾಲಿ ವ್ಯಕ್ತಿಗಳು ಬಣ್ಣಬಣ್ಣದ ಕನಸು ಹೊತ್ತು ಅಮೆರಿಕಕ್ಕೆ ತೆರಳಿ ಬದುಕು ಕಟ್ಟಿಕೊಂಡಿದ್ದಾರೆ. ಅಲ್ಲಿಯ ದೇಶವನ್ನೂ ಕಟ್ಟಿದ್ದಾರೆ. ಅವರು ಕೂಡ ಅಮೆರಿಕದಲ್ಲಿ ಓದಬೇಕು, ಬದುಕು ಕಟ್ಟಬೇಕು ಎಂದು ತವಕಿಸುವ ಭಾರತೀಯರ ಸಂಖ್ಯೆ ತೀರಾ ಕಡಿಮೆ ಆಗಿಲ್ಲ. ಅಮೆರಿಕವೇನಾದರೂ ಭಾರತವನ್ನು ಗುರಿಯಾಗಿಸಿಕೊಂಡರೆ ದೇಶದಿಂದ ಟ್ಯಾಲೆಂಟ್ ಮೈಗ್ರೇಶನ್ ನಿಲ್ಲುತ್ತದೆ. ಬೆಳೆಯುತ್ತಿರುವ ಆರ್ಥಿಕತೆಗೆ ಬುದ್ಧಿಶಾಲಿ ವ್ಯಕ್ತಿಗಳು ಅಗತ್ಯ ಇರುವ ಭಾರತಕ್ಕೆ ಅನುಕೂಲವೇ ಹೆಚ್ಚು.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ