
ಜನವರಿ, ಮಾರ್ಚ್ 20: ನಿನ್ನೆ ಯುಗಾದಿ ಹಬ್ಬದ ದಿನದಂದು ಹೂಡಿಕೆದಾರರಿಗೆ 12 ಲಕ್ಷ ಕೋಟಿ ರೂ ನಷ್ಟ ತಂದಿತ್ತು ಷೇರು ಮಾರುಕಟ್ಟೆ (ಸ್ಟಾಕ್ ಮಾರುಕಟ್ಟೆ) ಇವತ್ತು ಹಸಿರು ಬಣ್ಣಕ್ಕೆ ತಿರುಗಿದೆ. ಸೆನ್ಸೆಕ್ಸ್, ನಿಫ್ಟಿ ಇತ್ಯಾದಿ ಪ್ರಧಾನ ಸೂಚ್ಯಂಕಗಳು ಗಳಿಕೆ ಕಂಡಿವೆ. ಸೆನ್ಸೆಕ್ಸ್ 1,016 ಅಂಕ ಗಳಿಸಿದೆ. ನಿಫ್ಟಿ50 ಸೂಚ್ಯಂಕ 288 ಅಂಕಗಳನ್ನು ಗಳಿಸಿದೆ. ಈ ಬರೆಯುವ ವೇಳೆ, ಸೆನ್ಸೆಕ್ಸ್ ವರದಿ 300ಕ್ಕೂ ಹೆಚ್ಚು ಅಂಕಗಳು 74,530 ಮಟ್ಟದಲ್ಲಿತ್ತು. ನಿಫ್ಟಿ ಗಳಿಸಿದ ಅಂಕಗಳು ನೂರಕ್ಕಿಂತ ತುಸು ಹೆಚ್ಚು.
ಕಡಿಮೆಗೊಂಡ ಯುದ್ಧದ ತೀವ್ರತೆ
ಇರಾನ್ ತೈಲ ಘಟಕಗಳ ಮೇಲೆ ಇಸ್ರೇಲ್ ದಾಳಿ ಮಾಡಿದ ಪರಿಣಾಮ, ಇರಾನ್ ದೇಶವು ಸುತ್ತಮುತ್ತಲಿನ ಗಲ್ಫ್ ರಾಷ್ಟ್ರಗಳ ತೈಲ ಘಟಕಗಳನ್ನು ಗುರಿಯಾಗಿಸಿದ್ದು ಇಡೀ ಜಗತ್ತನ್ನು ಆತಂಕಕ್ಕೆ ದೂಡಿತ್ತು. ಇಸ್ರೇಲ್ಗೆ ಎಚ್ಚರಿಕೆ ಕೊಟ್ಟಿರುವುದು ಮತ್ತೆ ತೈಲ ಘಟಕಗಳ ಮೇಲೆ ದಾಳಿಯಾಗುವ ಸಾಧ್ಯತೆ ಕಡಿಮೆಯಾಗಿದೆ. ಹಾಗೆಯೇ, ಭೂಸೇನೆಗಳು ರಣರಂಗಕ್ಕೆ ಇಳಿಯುವುದಿಲ್ಲ ಎನ್ನುವ ಆಶ್ವಾಸನೆಯೂ ಸಿಕ್ಕಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಹು ಕೂಡ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಇದು ಮಾರುಕಟ್ಟೆಯನ್ನು ಶಾಂತಗೊಳಿಸಿದೆ.
ಇದನ್ನೂ ಓದಿ: ಇರಾನ್ ಹೊಸ ವರಸೆ; ಹಾರ್ಮುಜ್ ಜಲಸಂಧಿಯಲ್ಲಿ ಟೋಲ್ ಸಂಗ್ರಹಕ್ಕೆ ಆಲೋಚನೆ
ಯುದ್ಧದ ತೀವ್ರತೆ ಮತ್ತು ಅಪಾಯವು ಕಡಿಮೆಯಾದ ಪರಿಣಾಮ ಅಮೆರಿಕದ ಮಾರುಕಟ್ಟೆಗೆ ಕಳೆ ಬಂದಿದೆ. ಇದು ಭಾರತವೂ ಸೇರಿ ವಿಶ್ವದ ವಿವಿಧ ಷೇರುಪೇಟೆಯ ಮೇಲೂ ಸಕಾರಾತ್ಮಕ ಭಾವನೆ ಮೂಡಿಸಿದೆ.
ತೈಲ ಬೆಲೆ ಇಳಿಕೆ
ಜಾಗತಿಕ ತೈಲ ಬೆಲೆಗಳು ಇಳಿದಿವೆ. ಬ್ರೆಂಟ್ ಕ್ರೂಡ್ ತೈಲದ ಬೆಲೆ 119.13 ಡಾಲರ್ ಇದ್ದದ್ದು 107 ಡಾಲರ್‌ಗೆ ಇಳಿದಿದೆ. ಹೀಗಾಗಿ, ಜಾಗತಿಕ ಆರ್ಥಿಕತೆಯ ಮೇಲಿನ ಒತ್ತಡ ಕಡಿಮೆಯಾಗಿದೆ. ಇದು ಮಾರುಕಟ್ಟೆಯ ವಿಶ್ವಾಸ ಹೆಚ್ಚಿಸಿದೆ.
ಇದನ್ನೂ ಓದಿ: ಇಂಧನ ದತ್ತಾಂಶವನ್ನು ರಾಷ್ಟ್ರೀಯ ಭದ್ರತಾ ವಿಚಾರವೆಂದು ವರ್ಗೀಕರಿಸಿದ ಸರ್ಕಾರ; ತೈಲ, ಅನಿಲ ಕ್ಷೇತ್ರದ ಸಂಸ್ಥೆಗಳಿಗೆ ಹೊಸ ಜವಾಬ್ದಾರಿ
ಒಳ್ಳೆಯ ಬೆಲೆಗೆ ಷೇರುಗಳನ್ನು ಖರೀದಿಸುವ ಯತ್ನ
ಗುರುವಾರ ಷೇರು ಬಜಾರು ಶೇ. 3ರಷ್ಟು ಕುಸಿತ ಕಂಡಿತ್ತು. ಅನೇಕ ಒಳ್ಳೆಯ ಷೇರುಗಳಿಗೆ ಮಾರುಕಟ್ಟೆ ಕರೆಕ್ಷನ್ ಸಿಕ್ಕಿದೆ. ಹೀಗಾಗಿ, ಒಳ್ಳೆಯ ಷೇರುಗಳು ಕಡಿಮೆ ಬೆಲೆಗೆ ಲಭ್ಯವಿವೆ. ಹೂಡಿಕೆದಾರರು ಇದರ ಲಾಭ ಪಡೆಯಲು ಶುಕ್ರವಾರ ಮುಗಿದಿದೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ