ಕಾಫಿ ಕಣ, ಹಾಕಿ ತವರು, ಮಂಜಿನ ನಗರಿ ಎಂದೆಲ್ಲಾ ಮಸ್ ಆಗಿರುವ ಕೊಡಗು ಜಿಲ್ಲೆಯ ಮತ್ತೊಂದು ಹೆಗ್ಗಳಿಕೆ ಅಂದರೆ ಕೋವಿ ಹಬ್ಬ. ಈ ದಕ್ಷಿಣದ ಕಾಶ್ಮೀರದ ಮೂಲನಿವಾಸಿಗಳು ಕೋವಿ ಪ್ರಿಯರು. ಇಲ್ಲ ಪ್ರತಿ ವರ್ಷ ಕೋವಿ ಹಬ್ಬ ಮಾಡಲಾಗುವುದು. ಆ ಹಬ್ಬದ ಒಂದು ಝಲಕ್ ಇಲ್ಲಿದೆ ನೋಡಿ.
ಕೊಡಗಿನಲ್ಲಿ ನೂರಾರು ವರ್ಷಗಳಿಂದ ಬಂದೂಕನ್ನ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿ ಪೂಜಿಸಿಕೊಂಡು ಬರುತ್ತಿದೆ. ಅದರಂತೆ ಕೊಡಗು ಕೌನ್ಸಿಲ್ ಸಂಘಟನೆಯ ವತಿಯಿಂದ ಮೂರ್ನಾಡು ಸಮೀಪ ಗನ್ ಕಾರ್ನಿವಲ್ ನಡೆಯಿತು.
ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಆಗಮಿಸಿದ್ದ ಜನರು ತಮ್ಮ ವಿವಿಧ ಕೋವಿಗಳಿಗೆ ಪೂಜೆ ಸಲ್ಲಿಸಿದರು. ಬಳಿಕ ಕೊಡಗಿನ ಮದುವೆಗಳಲ್ಲಿ ಕಂಡು ಬರು ಸಾಂಪ್ರದಾಯಿಕ ಬಾಳೆ ಕಡಿಯುವ ಪದ್ಧತಿ ಆಚರಿಸಿ ಸಂಭ್ರಮಿಸಿದರು.
ಕೊಡಗು ಜಿಲ್ಲೆಯ ಮೂಲನಿವಾಸಿಗಳು ಪ್ರಕೃತಿಯ ಆರಾಧಕರು. ಹಬ್ಬ-ಹರಿದಿನಗಳು ಪ್ರಕೃತಿಯೊಂದಿಗೆ ನಂಟು. ವಾರದ ಹಿಂದಷ್ಟೇ ಹುತ್ತರಿ ಹಬ್ಬ ಕೂಡ ನೆರವೇರಿತ್ತು. ಇದರ ಬೆನ್ನಲ್ಲೇ ಇದೀಗ ಬಂದೂಕು ಪೂಜಿಸುವ ಮೂಲಕ ಹಬ್ಬ ಆಚರಿಸುತ್ತಾರೆ.
ಬಂದೂಕನ್ನು ಬರೀ ಪೂಜಿಸುವುದಷ್ಟೇ ಅಲ್ಲದೆ, ತೆಂಗಿನ ಕಾಯಿಗೆ ಗುಂಡು ಹೊಡೆದು ಬಹುಮಾನ ಗೆದ್ದು ಸಂಭ್ರಮಿಸಿದರು. ಪುರುಷರಲ್ಲಿ ಮಹಿಳೆಯರು ಕೂಡ ಗುರಿ ಇಟ್ಟು ಗುಂಡು ಹೊಡೆದು ತಾವೇನು ಕಡಿಮೆ ಇಲ್ಲ ಎಂದು ನಿರೂಪಿಸಿದರು.
ಈ ವಿಶೇಷ ಇಡೀ ಅಂದರೆ ದೇಶದ ಕೊಡಗಿನ ಪ್ರತಿಯೊಬ್ಬ ಮೂಲನಿವಾಸಿಗಳಿಗೆ ಮಾತ್ರ ಬಂದೂಕು ಹೊಂದುವ ವಿಶೇಷ ಅಧಿಕಾರ ಮತ್ತು ಹಕ್ಕನ್ನು ಕೊಡುಗೆ. ಬ್ರಿಟಿಷರ ಅವಧಿಯಲ್ಲಿ ಈ ಕೊಡಗಿನ ಜನರಿಗೆ ನಿಡ ಹಿಂದೆ, ಹಕ್ಕು ಅಲ್ಲಿ ಮುಂದುವರೆದಿರುವುದು ವಿಶೇಷ.





