Headlines

ಕಾಶಿಯಿಂದ ಬರುತ್ತಿದ್ದಂತೆಯೇ ಸಿಎಂ ಬದಲಾವಣೆ ಬಗ್ಗೆ ಕೋಡಿಮಠ ಸ್ವಾಮೀಜಿ ಸ್ಫೋಟಕ ಭವಿಷ್ಯ

ಕಾಶಿಯಿಂದ ಬರುತ್ತಿದ್ದಂತೆಯೇ ಸಿಎಂ ಬದಲಾವಣೆ ಬಗ್ಗೆ ಕೋಡಿಮಠ ಸ್ವಾಮೀಜಿ ಸ್ಫೋಟಕ ಭವಿಷ್ಯ


ದೇವನಹಳ್ಳಿ, (ಫೆಬ್ರವರಿ 18): ಕಾಲಜ್ಞಾನದ ಮೂಲಕ ಭಯಾನಕ ಭವಿಷ್ಯ ನುಡಿಯುವ ಕೋಡಿಮಠದ (ಕೋಡಿಮಠ) ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ (ಕೋಡಿಶ್ರೀ) (ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ) ಇದೀಗ ಮತ್ತೊಂದು ಭವಿಷ್ಯ ನುಡಿದಿದ್ದಾರೆ. ಶಿವರಾತ್ರಿಯಲ್ಲಿ ಕಾಶಿ ವಿಶ್ವನಾಥನ ದರ್ಶನ ಮಾಡಿಕೊಂಡು ಇಂದು (ಫೆಬ್ರವರಿ 18) ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಕೋಡಿಶ್ರೀ, ಸಿಎಂ ಸಿದ್ದರಾಮಯ್ಯ (ಸಿಎಂ ಸಿದ್ದರಾಮಯ್ಯ), ಡಿಕೆ ಶಿವಕುಮಾರ್ (ಡಿಕೆ ಶಿವಕುಮಾರ್) ಸೇರಿದಂತೆ ರಾಜ್ಯ ಕರ್ನಾಟಕ ರಾಜಕೀಯ, ರಾಜ್ಯ ಕಾಂಗ್ರೆಸ್ ಪಕ್ಷದ ಬಗ್ಗೆ ಕುತೂಹಲಕಾರಿ ಭವಿಷ್ಯ ನುಡಿದಿದ್ದಾರೆ.

ಇನ್ನು ಇದೇ ವೇಳೆ ಸಿಎಂ ಬದಲಾವಣೆ ಬಗ್ಗೆ ಮಾತನಾಡಿದ ಅವರು, ನಾನು ಈ ಮೊದಲೇ ಹೇಳಿದ್ದೆ ಸಂಕ್ರಾಂತಿ ನಂತರ ಬಜೆಟ್ ಆಗುತ್ತೆ ಅಂತ. ಯುಗಾದಿ ನಂತರ ಅವರಿಗೆ ಅಧಿಕಾರ ಬಿಟ್ಟರೆ ಬದಲಾವಣೆ ಆಗುತ್ತೆ. ರಾಜಕಾರಣದಲ್ಲಿ ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ. ಎಲ್ಲರಿಗೂ ಒಳ್ಳೆಯದಾಗಲಿ.

ನಾನು ಶಿವರಾತ್ರಿಗೆ ಕಾಶಿ ವಿಶ್ವನಾಥನ ದರ್ಶನಕ್ಕೆ ಹೋಗಿದ್ದೆ. ಪ್ರಯಾಗಕ್ಕೆ ಹೋಗಿದ್ದು, ಕರ್ನಾಟಕಕ್ಕೆ ಸುಖ ಶಾಂತಿ ಮಳೆ ಬೆಳೆಯಾಗಲಿ ಅಂತ ಪ್ರಾರ್ಥನೆ ಮಾಡಿದೆ. ಈ ವರ್ಷ ಕರ್ನಾಟಕ ರಾಜ್ಯಕ್ಕೆ ಮಳೆ ಬೆಳೆಯಲ್ಲಿ ಯಾವುದೇ ತೊಂದರೆ ಇಲ್ಲ. ಪ್ರಪಂಚದಾದ್ಯಂತ ಸಮಸ್ಯೆ ಇರಲಿದೆ. ಈ ಹಿಂದೆ ಆದಂತಹ ಅವಾಂತರದಿಂದ ಹೆಚ್ಚಿನ ಹಾನಿ ಆಗುತ್ತೆ. ಯುದ್ಧ ಆಗುವ ಲಕ್ಷಣಗಳು ಸಹ ಇವೆ ಎಂದು ಭಯಾನಕ ಭವಿಷ್ಯ ನುಡಿದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *