ಬಂಡೆ ಹೊಸೂರಿನ ಬೈಯಪ್ಪನಹಳ್ಳಿಯಲ್ಲಿರೋ ಅಪಾರ್ಟ್ಮೆಂಟ್
ಬೆಂಗಳೂರು, ಜನವರಿ 1: ಜನವರಿ 2 ರಂದು ಕೋಗಿಲು (ಕೋಗಿಲು ಲೇಔಟ್) ನಿರಾಶ್ರಿತರಿಗೆ ಮನೆ ಹಸ್ತಾಂತರ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಬಂಡೆ ಹೊಸೂರಿನ ಬೈಯಪ್ಪನಹಳ್ಳಿಯಲ್ಲಿರೋ ಅಪಾರ್ಟ್‌ಮೆಂಟ್‌ನಲ್ಲಿ ಮನೆ ಮಾಡಲು ನಿರ್ಧರಿಸಲಾಗಿದೆ. ಸುಮಾರು 1 ಸಾವಿರಕ್ಕೂ ಹೆಚ್ಚು 1 BHK ಫ್ಲ್ಯಾಟ್‌ಗಳು ಈ ಅಪಾರ್ಟ್‌ಮೆಂಟ್‌ನಲ್ಲಿವೆ. ಸದ್ಯ ಕಾಮಗಾರಿ ನಡೆದಿದ್ದು, ಸಣ್ಣಪುಟ್ಟ ಕೆಲಸಗಳಷ್ಟೇ ಬಾಕಿ ಉಳಿದಿವೆ.
ಆದರೆ, ಸರ್ಕಾರ ಕೋಗಿಲು ನಿವಾಸಿಗಳಿಗೆ ಸೂರು ಕಲ್ಪಿಸಿಕೊಡುತ್ತಿದೆ, ಮನೆ ಕಳೆದುಕೊಂಡು ಉರುಳಿದರೂ ರಾಜ್ಯದ ಅನೇಕ ಕಡೆ ಅರ್ಹ ಸಂತ್ರಸ್ತರ ಗಮನವೇ ಕೊಟ್ಟಿಲ್ಲ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಲಿಂಗನಮಕ್ಕಿ ಜಲಾಶಯಕ್ಕಾಗಿ ಭೂಮಿ ಕಳೆದುಕೊಂಡವರಿಗೆ 65 ವರ್ಷದಿಂದ ಹಕ್ಕುಪತ್ರ ನೀಡಿಲ್ಲ.
ಬೆಳಗಾವಿ ನೆರೆ ಸಂತ್ರಸ್ತರ ಗೋಳನ್ನೂ ಹೇಳುವವರಿಲ್ಲ. ಎರಡು ವರ್ಷಗಳಿಂದ 500 ಕುಟುಂಬಗಳು ಬೀದಿಗೆ ಬಿದ್ದಿದ್ದರೂ ಒಂದು ಸುತ್ತಿನ ಗತಿ ಇಲ್ಲದ ಪರಿಸ್ಥಿತಿ ಇವರದ್ದು. ಸರ್ಕಾರ ಮಾತ್ರ ಒಂದು ಎರಡು ಕಂತಿನ ಹಣ ಕೊಟ್ಟು ಕೈತೊಳೆದುಕೊಂಡಿದೆ.
ಮಿನಿ ಬಾಂಗ್ಲಾ ಮಾಡ್ತಿದ್ದೀರಿ: ಬಿಜೆಪಿ ವಾಗ್ದಾಳಿ
ಮತ್ತೊಂದೆಡೆ, ಕೋಗಿಲು ಪ್ರಕರಣ ಸುತ್ತ ರಾಜಕೀಯ ಜಟಾಪಟಿ ಜೋರಾಗಿಯೇ ನಡೆಯುತ್ತಿದೆ. ಇದೇ ವಿಚಾರ ಮುಂದಿಟ್ಟು ವಿಪಕ್ಷ ಬಿಜೆಪಿ ಸರ್ಕಾರಕ್ಕೆ ಹಿಗ್ಗಾಮುಗ್ಗಾ ಜಾಡಿಸಿದೆ. ವಿಪಕ್ಷ ನಾಯಕ ಅಶೋಕ್ ನೇತೃತ್ವದಲ್ಲಿ ಬಿಜೆಪಿ ನಿಯೋಗ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಛಲವಾದಿ ನಾರಾಯಣಸ್ವಾಮಿ, ಅಶ್ವತ್ಥ್ ನಾರಾಯಣ್ ಸೇರಿದಂತೆ ಕೇಸರಿ ನಾಯಕರು, ಅಕ್ರಮ ಮನೆಗಳ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಕಾಂಗ್ರೆಸ್ ಕರ್ನಾಟಕವನ್ನು ಮಿನಿ ಬಾಂಗ್ಲಾದೇಶ ಮಾಡಲು ಹೊರಟಿದೆ ಎಂದು ಅಶೋಕ್ ತೀವ್ರ ವಾಗ್ದಾಳಿ ಸರ್ಕಾರ.
ಇದನ್ನೂ ಓದಿ: ಕೋಗಿಲು ಲೇಔಟ್ ನಲ್ಲಿದ್ದಿದ್ದು ಬಾಂಗ್ಲಾ ಅಕ್ರಮ ವಲಸಿಗರೇ? ಮುಸ್ಲಿಂ ದಂಪತಿ ಆಧಾರ್ ಕಾರ್ಡ್ ನೋಡಿ ಬಿಜೆಪಿ ನಾಯಕರಿಗೆ ಶಾಕ್!
ಇಲ್ಲಿ ರೋಹಿಂಗ್ಯಾಗಳು, ಬಾಂಗ್ಲಾದವರು ಇದ್ದಾರೆ. ನಾವು ಬರುವ ವಿಷಯ ತಿಳಿದು ಬೇರೆ ಕಡೆ ಸ್ಥಳಾಂತರ ಮಾಡಲಾಗಿದೆ. ದೇಶದ ಭದ್ರತೆ ಕಥೆ ಏನು ಎಂದು ಛಲವಾದಿ ನಾರಾಯಣಸ್ವಾಮಿ, ಅಶ್ವತ್ಥ್ ನಾರಾಯಣ್ ಕಳವಳ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ಸಚಿವ ಸತೀಶ್ ಜಾರಕಿಹೊಳಿ ಕೂಡ ಪಶ್ಚಿಮ ಬಂಗಾಳ, ಬಾಂಗ್ಲಾದವರ ಪತ್ತೆ ಆಗಬೇಕು.
ಸತ್ಯಶೋಧನೆಗೆ ಸಮಿತಿ ರಚಿಸಿದ ಬಿಜೆಪಿ
ಕೋಗಿಲು ಲೇಔಟ್ ನಲ್ಲಿ ಬಿಜೆಪಿ ಸತ್ಯ ಶೋಧನೆಗೆ ಮುಂದಾಗಿದೆ. ಯಲಹಂಕ ಶಾಸಕ ವಿಶ್ವನಾಥ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಶಾಸಕ ಮುನಿರಾಜು, ಪರಿಷತ್ ಸದಸ್ಯ ನವೀನ್ ಸೇರಿ 7 ನಾಯಕರನ್ನು ಒಳಗೊಂಡ ಸತ್ಯಶೋಧನಾ ಸಮಿತಿ ರಚನೆ ಮಾಡಿರುವ ರಾಜ್ಯಾಧ್ಯಕ್ಷ ವಿಜಯೇಂದ್ರ, ಒಂದು ವಾರದಲ್ಲಿ ವರದಿ ನೀಡುವಂತೆ ಸೂಚಿಸಿದ್ದಾರೆ. ಇತ್ತ ಸಿದ್ದರಾಮಯ್ಯ ಸಿಎಂ ಕುರ್ಚಿ ವ್ಯಾಮೋಹಕ್ಕೆ ರಾಜ್ಯದ ಜನರ ಹಿತಾಸಕ್ತಿ ಬಲಿ ಕೊಟ್ಟಿದ್ದಾರೆ ಎಂದು ಬಿಜೆಪಿ ಸಾಮಾಜಿಕ ತಾಲತಾಣದಲ್ಲಿ ಕುಟುಕಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ