Headlines

ಕೋಗಿಲು ಲೇಔಟ್:​ ಒತ್ತುವರಿ ಮಾಡಿಕೊಂಡಿದ್ದವರಲ್ಲಿ ಮುಸ್ಲಿಂ ಕುಟುಂಗಳೇ ಹೆಚ್ಚು, ಜಿಬಿಎ ಕೈಸೇರಿತು ಅಂತಿಮ ವರದಿ

ಕೋಗಿಲು ಲೇಔಟ್:​ ಒತ್ತುವರಿ ಮಾಡಿಕೊಂಡಿದ್ದವರಲ್ಲಿ ಮುಸ್ಲಿಂ ಕುಟುಂಗಳೇ ಹೆಚ್ಚು, ಜಿಬಿಎ ಕೈಸೇರಿತು ಅಂತಿಮ ವರದಿ


ಬೆಂಗಳೂರು, ಜನವರಿ 3: ಕೋಗಿಲು ಲೇಔಟ್‌ನಲ್ಲಿ (ಕೋಗಿಲು ಲೇಔಟ್) ಒತ್ತುವರಿ ತೆರವು ಸಂಬಂಧ ಮನೆ ಕಳೆದುಕೊಂಡವರಿಗೆ ಸರ್ಕಾರ ಫ್ಲಾಟ್ ನೀಡಲು ಮುಂದಾಗಿದೆ. ಹೋಗಿ ಮನೆ ಕಳೆದುಕೊಂಡವರ ಮಾಹಿತಿಯನ್ನು ಸಂಗ್ರಹಿಸಿ, ಇಲಾಖೆ ಮತ್ತು ಉತ್ತರ ಪಾಲಿಕೆ ಇಲಾಖೆ ಅಧಿಕಾರಿಗಳು ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (GBA) ಅಂತಿಮ ವರದಿ ಸಲ್ಲಿಸಿದ್ದಾರೆ. ಕೋಗಿಲು ಲೇಔಟ್ನ ಒಟ್ಟು ಮೂರು ಕಾಲೋನಿಗಳಲ್ಲಿ ಮನೆ ತೆರವಿಯಿಂದ ಎಷ್ಟು ಜನ ನಿರಾಶ್ರಿತರಾಗಿದ್ದಾರೆ ಅನ್ನೋ ಕುರಿತು ವರದಿಯಾಗಿದೆ.

ಜಿಬಿಎಗೆ ಸಲ್ಲಿಕೆಯಾಗಿರುವ ವರದಿಯಂತೆ, ಫಕೀರ್ ಕಾಲೋನಿಯ 40 ಮನೆ ಬಾಗಿಲು ಮಾಡಿದ್ದು, 56 ಮಂದಿ ಮನೆಯ ಮುಖ್ಯಸ್ಥರಿದ್ದು, 96 ಮಂದಿ ವಯಸ್ಕರಾಗಿದ್ದಾರೆ. 140 ಮಕ್ಕಳಿದ್ದು, ಒಟ್ಟು 292 ಜನರಿದ್ದಾರೆ. ಇನ್ನು ನ್ಯೂ ಫಕೀರ್ ಲೇಔಟ್‌ನಲ್ಲಿ ಒಟ್ಟು 45 ಮನೆ ತೆರೆಯಲಾಗಿದೆ, 50 ಮಂದಿ ಮನೆಯ ಮುಖ್ಯಸ್ಥರಿದ್ದು, ವಯಸ್ಕರು 128, 116 ಮಕ್ಕಳಿದ್ದು, ಒಟ್ಟು 294 ಮಂದಿ ಇದ್ದಾರೆ. ಇನ್ನು ವಸೀಂ ಲೇಔಟ್‌ನಲ್ಲಿ, 82 ಮನೆ ತೆರೆವು ಮಾಡಲಾಗಿತ್ತು, ಮನೆ ಮುಖ್ಯಸ್ಥರು 82 ಜನರಿದ್ದಾರೆ. 201 ವಯಸ್ಕರು, 394 ಮಕ್ಕಳಿದ್ದು, ಒಟ್ಟು 394 ಜನರಿದ್ದಾರೆ. ಹೀಗೆ ಮೂರು ಕಾಲೋನಿಯ ಒಟ್ಟು ಒಂದು ಸಾವಿರ ಏಳು ಮಂದಿ ನಿರಾಶ್ರಿತರಾಗಿದ್ದಾರೆ. ಈ ಮೂರು ಲೇಔಟ್‌ಗಳಲ್ಲಿ 156 ಮುಸ್ಲಿಂ ಸಮುದಾಯದ ಕುಟುಂಬದವರು ಇದ್ದಾರೆ. 31 ಹಿಂದೂ ಕುಟುಂಬಗಳಿವೆ. ಒಂದು ಕುಟುಂಬ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದೆ.

ಸದ್ಯ ಈ ಕುರಿತು ಮತ್ತೊಂದು ಸುತ್ತಿನ ಪರಿಶೀಲನೆ ನಡೆಯಲಿದೆ, ಬಳಿಕ ಜಿಬಿಎ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಈ ಮಧ್ಯೆ ಇಂದು ಕೋಗಿಲು ಲೇಔಟ್‌ಗೆ ಬಿಜೆಪಿಯ ಸತ್ಯಶೋಧನಾ ಸಮಿತಿ ಭೇಟಿ ನೀಡುತ್ತಿದೆ.

ರಾಜೀವ್ ಗಾಂಧಿ ವಸತಿ ಯೋಜನೆ ಅಡಿ ಅರ್ಜಿ ಸಲ್ಲಿಸಿ, ಮನೆ ಸಿಗದೇ ರೋಸಿ ಹೋಗಿದ್ದವರು ಸರ್ಕಾರದ ವಿರುದ್ಧ ಪ್ರತಿಭಟನೆಗೆ ಹಾಜರಾಗಿದ್ದಾರೆ. ಅವರು ಶನಿವಾರ ಕೂಡ ರಾಜೀವ್ ಗಾಂಧಿ ವಸತಿ ಕಚೇರಿಗೆ ಬಂದಿದ್ದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏತನ್ಮಧ್ಯೆ, ಕನ್ನಡ ಸಂಘಟನೆಗಳು ಒತ್ತುವರಿದಾರರಿಗೆ ಮನೆ ಹಂಚಿಕೆ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿವೆ. ಈ ಸಂಬಂಧ ರಾಜ್ಯಪಾಲರನ್ನು ಭೇಟಿಯಾಗಿ ಮನವಿಯನ್ನೂ ಸಲ್ಲಿಸಿವೆ. ಸರ್ಕಾರ ನಿರ್ಧಾರ ಬದಲಿಸದಿದ್ದರೆ ಹೋರಾಟದ ಎಚ್ಚರಿಕೆ ನೀಡಿವೆ. ಮಧ್ಯೆ ಶಾಸಕ ಎಸ್.ಟಿ.ಸೋಮಶೇಖರ್ ಸಹ ಸಚಿವ ಜಮೀರ್ ಅಹ್ಮದ್ ವಿರುದ್ಧ ಅಸಮಾಧಾನ ಹೊರಹಾಕಿದರು, ಒಬ್ಬರಿಗೊಂದು ನ್ಯಾಯ, ಮತ್ತೊಬ್ಬರಿಗೊಂದು ನ್ಯಾಯ ಕೊಡಬೇಡಿ ವಸತಿ.

ಇದನ್ನೂ ಓದಿ: ಕೋಗಿಲು ನಿರಾಶ್ರಿತರ ಮೇಲೆ ಬಹುದೊಡ್ಡ ಅನುಮಾನ: ಒತ್ತುವರಿದಾರರ ಜನ್ಮಜಾಲಾಡಲು ಮುಂದಾದ, ಪೊಲೀಸ್

ಇನ್ನು ಕೋಗಿಲು ಲೇಟ್ ಜೊತೆಗೆ ಸಚಿವ ಕೃಷ್ಣ ಭೈರೇಗೌಡ ಪ್ರತಿನಿಧಿಸುವ ಬ್ಯಾಟರಾಯನಪುರ ಕ್ಷೇತ್ರಕ್ಕೆ ಬರುತ್ತದೆ. ಅಕ್ರಮ ಮನೆಗಳ ತೆರವು ಪ್ರಕರಣ ಇಷ್ಟೊಂದು ಗಂಭೀರ ಸ್ವರೂಪ ಪಡೆದಿದ್ದರೂ, ಇತರ ಸಚಿವರು ಮಾತ್ರ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಹೀಗೆಂದು ಬ್ಯಾಟರಾಯನಪುರ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ‘ಸಚಿವ ಕೃಷ್ಣ ಭೈರೇಗೌಡ ಕಾಣೆಯಾಗಿದ್ದಾರೆ’ ಎಂದು ಪೋಸ್ಟರ್ ಅಭಿಯಾನ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *