Headlines

ಕೋಗಿಲು ನಿವಾಸಿಗಳ ಪಟ್ಟಿ ಸಿದ್ಧ: ಲೇಔಟ್​ಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ

ಕೋಗಿಲು ನಿವಾಸಿಗಳ ಪಟ್ಟಿ ಸಿದ್ಧ: ಲೇಔಟ್​ಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ


ಬೆಂಗಳೂರು, ಜನವರಿ 03: ಕೋಗಿಲು (ಕೋಗಿಲು ಲೇಔಟ್) ಅಕ್ರಮ ಒತ್ತುವರಿ ಜಟಾಪಟಿ ರಾಜಕಾರಣದಲ್ಲಿ ಮಾತಿನ ಸಮರವನ್ನೇ ಸೃಷ್ಟಿಸಿದೆ. ಮನೆ ಕೊಡ್ತೀವಿ ಎಂದಿರುವ ಸರ್ಕಾರದ ನಡೆಯನ್ನ ಪ್ರಶ್ನಿಸಿ ಬಿಜೆಪಿ (ಬಿಜೆಪಿ) ಸಮರ ಸಾರಿದೆ. ರಾಜ್ಯ ಸರ್ಕಾರದ ನಿರ್ಧಾರವೇ ಅಕ್ರಮ ಅಂತ ಆರೋಪಿಸಿದ್ದಾನೆ. ಕೋಗಿಲುಔಟ್ ಲೇ ತೆರವು ಪ್ರಕರಣ ದಿನಕ್ಕೊಂದು ತಿರುವುಕೊಳ್ತಿದ್ದು, ಇದರ ನಡುವೆ ಮತ್ತೊಂದು ಇಲಾಖೆ ಸಂತ್ರಸ್ತರ ಪಟ್ಟಿಯನ್ನು ರೆಡಿ ಮಾಡಿದೆ.

ಕೋಗಿಲು ಲೇಔಟ್‌ನಲ್ಲಿ ಮನೆ ಕಳೆದುಕೊಂಡ ಅರ್ಹ ಪ್ರಯೋಜನಗಳ ಸಂಪೂರ್ಣ ಮಾಹಿತಿ ಇವತ್ತು GBA ಕೈ ಸೇರಿದೆ. ಇಲಾಖೆ ಮತ್ತು ಉತ್ತರ ನಗರ ಪಾಲಿಕೆ ಅಧಿಕಾರಿಗಳು ನಡೆಸಿದ ಸರ್ವೆಯ ಅಂತಿಮ ವರದಿ ಈಗ ಅಧಿಕಾರಿಗಳ ಟೇಬಲ್ ಮೇಲಿದೆ.

ವರದಿಯಲ್ಲಿ ಇರೋದೇನು?

ಹೊಸ ಫಕೀರ್ ಲೇಔಟ್ ಮತ್ತು ವಾಸೀಂ ಲೇಔಟ್ ನಿರಾಶ್ರಿತರ ಬಗ್ಗೆ ಮಾಹಿತಿ ಕಲೆಹಾಕಲಾಗಿದೆ. ಇಲಾಖೆ ಮತ್ತು ಉತ್ತರ ನಗರ ಪಾಲಿಕೆಯಿಂದ ವರದಿಯನ್ನು ಸಿದ್ಧಪಡಿಸಲಾಗಿದೆ. ಒಟ್ಟು 167 ಮನೆಗಳನ್ನು ಗುರುತಿಸಿ ಜಿಬಿಎಗೆ ವರದಿ ಮಾಡಲಾಗಿದೆ. ಈ ಮಾಹಿತಿ ಅನುಸಾರ, 167 ಮನೆಗಳ ತೆರವು ಹಿನ್ನೆಲೆ 188 ಕುಟುಂಬಗಳು ನಿರಾಶ್ರಿತವಾಗಿವೆ. 188 ಕುಟುಂಬಗಳ 1,007 ಸದಸ್ಯರು ಅಧಿಕೃತ ನಿರಾಶ್ರಿತರು ಅಂತಾ ಹೇಳಲಾಗಿದೆ. 188 ಕುಟುಂಬಗಳ ಮುಖ್ಯಸ್ಥರು, 425 ಜನ ವಯಸ್ಕರು, 304 ಮಕ್ಕಳು, 156 ಮುಸ್ಲಿಂ ಕುಟುಂಬಗಳು, 31 ಹಿಂದೂ, 1 ಕ್ರಿಶ್ಚಿಯನ್ ಕುಟುಂಬ ನಿರಾಶ್ರಿತವಾಗಿದೆ ಅಂತಾ ವರದಿಯಲ್ಲಿ ಹೇಳಲಾಗಿದೆ.

ಆಯುಕ್ತ ಎಂ ಮಹೇಶ್ವರ ರಾವ್ ಹೇಳಿದ್ದಾರೆ

ಇನ್ನು ಈ ಬಗ್ಗೆ ಜಿಬಿಎ ಮುಖ್ಯ ಆಯುಕ್ತ ಎಂ ಮಹೇಶ್ವರ ರಾವ್ ಮಾತನಾಡಿ, ಮತ್ತೊಂದು ಸುತ್ತಿನ ಪರಿಶೀಲನೆ ಬಳಿಕ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡುವುದಾಗಿ ಹೇಳಿದ್ದಾರೆ.

ರಾಜೀವ್ ಗಾಂಧಿ ವಸತಿ ನಿಗಮದ ಕಚೇರಿಗೆ ಕಮಲಪಡೆ ಭೇಟಿ

ಈ ಮಧ್ಯೆ ಇವತ್ತು ವಿಪಕ್ಷ ನಾಯಕ ಆರ್. ಅಶೋಕ್ ರಾಜೀವ್ ಗಾಂಧಿ ವಸತಿ ನಿಗಮದ ಕಚೇರಿಗೆ ಭೇಟಿ. ಕೆ.ಜಿ.ರಸ್ತೆಯ ಕಾವೇರಿ ಭವನದ ಕಚೇರಿಗೆ ಬಂದು ಎಂ.ಡಿ ಪರಶುರಾಮ್ ಬಳಿ ಮಾಹಿತಿ ಪಡೆದರು. ಕೋಗಿಲು ಅಕ್ರಮ ವಾಸಿಗಳಿಗೆ ಯಾವ ಸ್ಥಳದಲ್ಲಿ ಅನುಸರಿಸಲಾಗುತ್ತಿದೆ ಅಂತಾ ಪ್ರಶ್ನಿಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ, ಕಾನೂನು ಗಾಳಿಗೆ ತೂರಿದರೆ ಹುಷಾರ್ ಅಂತಾ ಎಚ್ಚರಿಕೆ ನೀಡಿದ್ದಾರೆ. ಆ ಬಳಿಕ ಮಾತಾಡಿದ ರಾಜೀವ್ ಗಾಂಧಿ ವಸತಿ ನಿಗಮದ ಎಂಡಿ ಪರಶುರಾಮ್, ಸ್ಥಳೀಯ ಶಾಸಕ ಕೃಷ್ಣ ಬೈರೇಗೌಡ ಕಳುಹಿಸಿಕೊಡುವ ಜನರಿಗೆ ಮಾತ್ರ ನಾವು ಮನೆ ಕೊಡೋಕೆ ಸಾಧ್ಯ ಅಂತಾ ಹೇಳಿದ್ದಾರೆ.

ಇದನ್ನೂ ಓದಿ: ಕೋಗಿಲು ಲೇಔಟ್: ಒತ್ತುವರಿ ಮಾಡಿಕೊಂಡಿರುವವರಲ್ಲಿ ಮುಸ್ಲಿಂ ಕುಟುಂಬಗಳೇ ಹೆಚ್ಚು, ಜಿಬಿಎ ಕೈಸೇರಿತು ಅಂತಿಮ ವರದಿ

ಮತ್ತೊಂದು ಕಡೆ ಕೋಗಿಲು ಲೇಔಟ್ ಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ ಕೊಟ್ಟಿತ್ತು. ಈ ವೇಳೆ ಕೆಲವರ ಆಧಾರ್ ಕಾರ್ಡ್ ಅನ್ನು ಪರಿಶೀಲಿಸಿದರು, ಆಗ ಮಹಿಳೆಯೊಬ್ಬರು ಡಿ.ಜೆ. ಹಳ್ಳಿ ವಿಳಾಸದ ಆಧಾರ್ ಕಾರ್ಡ್ ತೋರಿಸಿದರು. ಬಿಜೆಪಿ ನಿಯೋಗ ಮರುಪ್ರಶ್ನೆ ಕೇಳಿದರೆ, ನಾವು ಇಲ್ಲಿ 5 ವರ್ಷದಿಂದ ಇದ್ದೀವಿ ಅಂತಾ ಇಲ್ಲಿನ ನಿವಾಸಿಗಳು ಹೇಳುತ್ತಿದ್ದಾರೆ.

‘ಮನೆಗೆ ಮಾರಿ, ನಮಗೆ ಉಪಕಾರಿ’: ಪ್ರಹ್ಲಾದ್ ಜೋಶಿ

ಇನ್ನು ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಮನೆಗೆ ಮಾರಿ, ಅತಿಕ್ರಮಣಕಾರರಿಗೆ ಉಪಕಾರಿ. ಬೆಂಗಳೂರಿನಲ್ಲಿ ಬಾಂಗ್ಲಾ ಅಕ್ರಮ ನುಸುಳುಕೋರರು ಇದ್ದಾರೆ. ಎಸ್‌ಐಆರ್‌ಗೂ ವಿರೋಧ ಮಾಡಲು ಇದೇ ಕಾರಣ. ನಕಲಿ ಗುರುತಿನ ಚೀಟಿಗಳನ್ನು ತೋರಿಸಿದೆ. ನಾಳೆ ಕುಮಾರಕೃಪಾದಲ್ಲಿ ಟೆಂಟ್ ಹಾಕಿದ್ರೆ ಏನ್ ಮಾಡೋದು. ಹಿಂದೆ ದೆಹಲಿಯಿಂದ ಕಾಂಗ್ರೆಸ್ ಹೈಕಮಾಂಡ್ ನಡೆಯುತ್ತಿತ್ತು. ಈಗ ಕಾಂಗ್ರೆಸ್ ಹೈಕಮಾಂಡ್ ಕೇರಳದಿಂದ ನಡೆಯುತ್ತಿದೆ. ಅಲ್ಲಿ ಹಲವು ವರ್ಷಗಳಿಂದ ಎಂಬುದಕ್ಕೆ ದಾಖಲೆ ಇಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ. ಮತ್ತೊಂದ್ಕಡೆ ಎಲ್ಲರಿಗೂ ಒಂದೇ ನ್ಯಾಯ ಕೊಡಿ ಎಂದು ಎಸ್.ಆರ್. ವಿಶ್ವನಾಥ್ ಕೂಡ ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ಎರಡು ತಿಂಗಳಿನಿಂದ ಬೀದಿಗೆ ಬಿದ್ದಿರುವ ಕುಟುಂಬಗಳು; ಕೋಗಿಲು ಲೇಔಟ್‌ಗೆ ತಕ್ಷಣ ಪರಿಹಾರ, ಕೆಜಿ ಹಳ್ಳಿಗೆ ಅನ್ಯಾಯವೇ?

ಕೋಗಿಲು ನಿರಾಶ್ರಿತರಿಗೆ ಕೊಡಬೇಕು ಅಂತಿರೋ 1 BHK ಫ್ಲಾಟ್ ಮೌಲ್ಯ 13.2 ಲಕ್ಷ ರೂಪಾಯಿಯಾಗಿದೆ. ಆದರೆ ಸರ್ಕಾರ 11 ಲಕ್ಷಕ್ಕೆ ಫ್ಲಾಟ್ ಗಳನ್ನ ನೀಡುವ ಸಾಧ್ಯತೆಯಿದೆ ಅಂತಾ ಹೇಳಲಾಗುತ್ತಿದೆ.

ವರದಿ: ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 10:25 pm, ಶನಿ, 3 ಜನವರಿ 26



Source link

Leave a Reply

Your email address will not be published. Required fields are marked *