Headlines

ವಿರಾಟ್ ಕೊಹ್ಲಿ ಫ್ಯಾನ್ಸ್ ಮೇಲೆ ಸಿಟ್ಟಾಗಿದ್ದೇಕೆ? ಅಷ್ಟಕ್ಕೂ ಸ್ಟೇಡಿಯಂನಲ್ಲಿ ಆಗಿದ್ದೇನು?

ವಿರಾಟ್ ಕೊಹ್ಲಿ ಫ್ಯಾನ್ಸ್ ಮೇಲೆ ಸಿಟ್ಟಾಗಿದ್ದೇಕೆ? ಅಷ್ಟಕ್ಕೂ ಸ್ಟೇಡಿಯಂನಲ್ಲಿ ಆಗಿದ್ದೇನು?

ವಿರಾಟ್ ಕೊಹ್ಲಿ ಫ್ಯಾನ್ಸ್ ಮೇಲೆ ಸಿಟ್ಟಾಗಿದ್ದೇಕೆ? ಅಷ್ಟಕ್ಕೂ ಸ್ಟೇಡಿಯಂನಲ್ಲಿ ಆಗಿದ್ದೇನು?

ವಡೋದರಾ: ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿಗೆ ಭಾರತ ಮಾತ್ರವಲ್ಲದೇ ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಕೊಹ್ಲಿಯೂ ತನ್ನ ಅಭಿಮಾನಿಗಳನ್ನು ಗೌರವಿಸುತ್ತಾ ಬಂದಿದ್ದಾರೆ. ಆದರೆ ಇದೀಗ ವಿರಾಟ್ ಕೊಹ್ಲಿ ತಮ್ಮ ಫ್ಯಾನ್ಸ್ ಮೇಲೆ ಸಿಟ್ಟಾಗಿದ್ದಾರೆ. ಯಾಕೆ? ಏನಾಯ್ತು?

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ನ್ಯೂಜಿಲೆಂಡ್ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಆಕರ್ಷಕ ಬ್ಯಾಟಿಂಗ್ ನಡೆಸುವ ಮೂಲಕ ಮಿಂಚಿದ್ದಾರೆ. ಆದರೆ ಪಂದ್ಯ ಮುಕ್ತಾಯದ ಬಳಿಕ ತಮ್ಮ ಅಭಿಮಾನಿಗಳ ಮೇಲೆ ವಿರಾಟ್ ಅಸಮಾಧಾನ ಹೊರಹಾಕಿದ್ದಾರೆ.

ಹೌದು, ರೋಹಿತ್ ಶರ್ಮಾ 12 ರನ್ ಗಳಿಸಿ ವಿಕೆಟ್ ಒಪ್ಪಿಸಿದ ನಂತರ ಸ್ಟೇಡಿಯಂನ ಸ್ಟ್ಯಾಂಡ್‌ನಲ್ಲಿದ್ದ ಅಭಿಮಾನಿಗಳು ಜೋರಾಗಿ ಚಪ್ಪಾಳೆ ತಟ್ಟಿದರು. ಇದು ವಿರಾಟ್ ಕೊಹ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಟೀಂ ಇಂಡಿಯಾ ಆರಂಭಿಕರಾದ ರೋಹಿತ್ ಶರ್ಮಾ ಅಥವಾ ಶುಭ್‌ಮನ್‌ ಗಿಲ್ ಔಟಾದರೆ ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ ಮಾಡಲು ಮೈದಾನಕ್ಕಿಳಿಯುತ್ತಾರೆ. ಇದೇ ಕಾರಣಕ್ಕಾಗಿ ಅವರ ಫ್ಯಾನ್ಸ್ ಇವರು ಔಟಾಗುವುದನ್ನೆ ಕಾಯುತ್ತಾ ಕುಳಿತಿರುತ್ತಾರೆ.

ತಮ್ಮದೇ ದೇಶದ ಯಾವುದೇ ಆಟಗಾರ ಔಟಾದರೇ, ಜೋರಾಗಿ ಚಪ್ಪಾಳೆ ತಟ್ಟಿ ಸಂಭ್ರಮಿಸುವುದು ಸರಿಯಲ್ಲ ಎಂದು ವಿರಾಟ್ ಕೊಹ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಇದೇ ರೀತಿಯ ಅನುಭವ ಐಪಿಎಲ್‌ನಲ್ಲೂ ಆಗಿದೆ. ಐಪಿಎಲ್‌ ನಡೆಯುವ ವೇಳೆಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ಫ್ಯಾನ್ಸ್ ಧೋನಿ ಆಟ ಕಣ್ತುಂಬಿಕೊಳ್ಳಲು ಉಳಿದ ಆಟಗಾರರ ಔಟಾಗುತ್ತಿದ್ದಂತೆಯೇ ಜೋರಾಗಿ ಚಪ್ಪಾಳೆ ತಟ್ಟುತ್ತಿದ್ದರು.

ಈಗಾಗಲೇ ಟೆಸ್ಟ್ ಹಾಗೂ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಿಸಿರುವ ವಿರಾಟ್ ಕೊಹ್ಲಿ, ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ವಿರಾಟ್ ಆಟವನ್ನು ಕಣ್ತುಂಬಿಕೊಳ್ಳಲು ಅವರ ಫ್ಯಾನ್ಸ್ ಸ್ಟೇಡಿಯಂನಲ್ಲಿ ತುದಿಗಾಲಿನಲ್ಲಿ ನಿಂತಿರುತ್ತಾರೆ.

ನ್ಯೂಜಿಲೆಂಡ್ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 93 ರನ್ ಗಳಿಸಿ ಕೇವಲ 7 ರನ್ ಅಂತರದಲ್ಲಿ ಶತಕವಂಚಿತರಾಗಿದ್ದರು. ಇದೀಗ ಕಿವೀಸ್ ಎದುರಿನ ಎರಡನೇ ಏಕದಿನ ಪಂದ್ಯವು ಜನವರಿ 14ರಂದು ರಾಜ್‌ಕೋಟ್‌ನಲ್ಲಿ ನಿಗದಿಯಾಗಿದೆ.

Source link

Leave a Reply

Your email address will not be published. Required fields are marked *