ಕೋಲಾರ: ನಾಪತ್ತೆಯಾಗಿದ್ದ ಶಿಕ್ಷಕಿ ಕೆರೆಯಲ್ಲಿ ಶವವಾಗಿ ಪತ್ತೆ; ಗಣತಿ ಒತ್ತಡದಿಂದ ಆತ್ಮಹತ್ಯೆ ಶಂಕೆ?

ಕೋಲಾರ: ನಾಪತ್ತೆಯಾಗಿದ್ದ ಶಿಕ್ಷಕಿ ಕೆರೆಯಲ್ಲಿ ಶವವಾಗಿ ಪತ್ತೆ; ಗಣತಿ ಒತ್ತಡದಿಂದ ಆತ್ಮಹತ್ಯೆ ಶಂಕೆ?


ಕೋಲಾರ, ಅಕ್ಟೋಬರ್ 16: ರಾಜ್ಯ ಸರ್ಕಾರದಿಂದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ನಡೆಸುತ್ತಿರುವ ಸಮೀಕ್ಷೆ (ಜಾತಿ ಸಮೀಕ್ಷೆ) ತೆರಳಿದ್ದ ಶಿಕ್ಷಕಿ ನಿಗೂಢವಾಗಿ ನಾಪತ್ತೆ, ಬಳಿಕ ಕೆರೆಯಲ್ಲಿ ಶವವಾಗಿ (ಸಾವು) ಪತ್ತೆ ಆದ ಘಟನೆ ಜಿಲ್ಲೆಯ ಕೆಜಿಎಫ್ ತಾಲೂಕಿನ ಐಪಲ್ಲಿ ಗ್ರಾಮದ ಬಳಿ ನಡೆದಿದೆ. ಅಖ್ತರಿ ಬೇಗಂ (53) ಮೃತ ಶಿಕ್ಷಕಿ. ಗಣತಿ ಕಾರ್ಯದ ಒತ್ತಡದಿಂದ ಬೇಸತ್ತು ಶಿಕ್ಷಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಕೋಲಾರ ನಗರದ ಮಹಾಲಕ್ಷ್ಮಿ ಬಡಾವಣೆಯ ನಿವಾಸಿ ಶಿಕ್ಷಕಿ ಬೇಗಂ ಅವರಿಗೆ ಕೆಬಿ ಹೊಸಹಳ್ಳಿ ಗ್ರಾಮದ ಶಿಕ್ಷಕರಿಗೆ ನರಸಾಪುರ ಗ್ರಾಮ ಗಣತಿ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ. ಜಾತಿ ಗಣತಿ ಕಾರ್ಯದ ಒತ್ತಡದಿಂದ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು. ಕಳೆದ ಮೂರು ದಿನಗಳಿಂದ ಗಣತಿ ಕಾರ್ಯಕ್ಕೂ ಹೋಗಿರಲಿಲ್ಲ. ಇತ್ತ ಮನೆಯಲ್ಲಿ ತನ್ನ ಮೊಬೈಲ್ ಫೋನ್ ಹಾಗೂ ಮೈಮೇಲಿದ್ದ ಒಡವೆಗಳನ್ನು ಬಿಚ್ಚಿಟ್ಟಿದ್ದರು. ತನ್ನ ಐಡಿ ಕಾರ್ಡ್ ಮಾತ್ರ ಯಾರಿಗೂ ಹೇಳದೆ ಸೋಮವಾರ ಬೆಳಿಗ್ಗೆಯಿಂದ ನಿಗೂಢವಾಗಿ ನಾಪತ್ತೆಯಾಗಿದ್ದರು.

ಇದನ್ನೂ ಓದಿ: ಬೆಂಗಳೂರು: ಜಾತಿ ಸಮೀಕ್ಷೆಗೆಂದು ಹೋದ ಶಿಕ್ಷಕರಿಗೆ ಹೃದಯಘಾತ; ಶಿಕ್ಷಕರಿಗೆ ಗಣತಿಯ ಹೆಸರಿನಲ್ಲಿ ಒತ್ತಡದ ಶಿಕ್ಷೆ

ಶಿಕ್ಷಕಿ ಕುಟುಂಬಸ್ಥರು ಎಷ್ಟೇ ಹುಡುಕಾಡಿದರು ಹಿನ್ನೆಲೆ ಕೋಟ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಇನ್ನು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಶಿಕ್ಷಕಿ ಅಖ್ತರಿ ಬೇಗಂ ತಾನು ಮನೆ ಬಿಡುವ ಕೆಜಿಎಫ್‌ ತಾಲೂಕಿನ ಬೇತಮಂಗಲದ ತನ್ನ ಸ್ನೇಹಿತೆ ಗೀತಾ ಎಂಬವರಿಗೆ ಕರೆ ಮಾಡಿ ಬೇಮಂಗಲ ಕೆರೆ ತುಂಬಿದೆಯಾ ಎಂದು ಕೇಳಿದ್ದರು. ಸ್ನೇಹಿತರ ಕುಟುಂಬವೊಂದು ಬರುತ್ತಿದೆ ಎಂದು ಕೇಳಿದ್ದರು.

ಈ ಜಾಡು ಹಿಡಿದು ಹುಡುಕಲು ಮುಂದಾಗಿದ್ದರು. ಕೋನಗರ ಬಸ್ ನಿಲ್ದಾಣದ ಸಿಸಿಟಿವಿ ಪರೀಕ್ಷೆ ನಡೆಸಿದಾಗ ಅಲ್ಲಿಂದ ಬೇತಮಂಗಲ ಕಡೆಗೆ ಹೋಗುವ ಬಸ್ ಹತ್ತಿ ಹೋಗಿರುವುದು ಖಚಿತವಾಗಿತ್ತು. ಹೀಗಾಗಿ ನಿನ್ನೆ ಬೇತಮಂಗಲ ಹಾಗೂ ಸುತ್ತಮುತ್ತಲ ಬಡಾವಣೆಗಳ ಬಳಿ ತಪಾಸಣೆ ನಡೆಸಿದ್ದು, ಈ ವೇಳೆ ನಿನ್ನೆ ಮಧ್ಯಾಹ್ನ ಸುಮಾರಿಗೆ ಶಿಕ್ಷಕಿಯ ಶವ ಕೆಜಿಎಫ್ ತಾಲೂಕಿನ ಐಪಲ್ಲಿ ಗ್ರಾಮದ ಕೆರೆಯಲ್ಲಿ ಕೆರೆಯಲ್ಲಿ ಕೆರೆ ಏರಿ ಸೇರಿತ್ತು.

ಸ್ನೇಹಿತೆಯವರು ಹೇಳಿದ್ದಿಷ್ಟು

ಅಖ್ತರಿ ಬೇಗಂ ಸಾವಿಗೆ ಸಹೋದ್ಯೋಗಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಗಣತಿ ಕಾರ್ಯದ ಒತ್ತಡ ಹೆಚ್ಚಾಗಿರುತ್ತದೆ, ಆದರೆ ಆತ್ಮಹತ್ಯೆ ಮಾಡಿಕೊಳ್ಳುವಷ್ಟಲ್ಲ, ಶಿಕ್ಷಕಿ ಅಖ್ತರಿ ಬೇಗಂ ಸಹ ಹಟವಾದಿ, ಅವರು ಆತ್ಮಹತ್ಯೆ ಮಾಡಿಕೊಳ್ಳುವವರಲ್ಲ. ಆತ್ಮಹತ್ಯೆಗೆ ಬೇರೆಯ ಕಾರಣ ಇರಬಹುದು ಎಂದು ಸ್ನೇಹಿತೆಯರಾದ ಸವಿತಾ ಮತ್ತು ಜಯಶ್ರೀ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಜಾತಿಗಣತಿ ಕಾರ್ಯ ವೇಳೆ ಇದುವರೆಗೂ ಶಿಕ್ಷಕರು ಸಾವು, ಪರಿಹಾರ ಘೋಷಿಸಿದ ಸಿಎಂ

ಗಣತಿ ಕಾರ್ಯ ಆರಂಭವಾದಾಗಿನಿಂದ ಅಖ್ತರಿ ಬೇಗಂ ಅವರಿಗೆ ಒಟ್ಟು 132 ಮನೆಗಳಿಗೆ ಜವಾಬ್ದಾರಿ ನೀಡಲಾಗಿದೆ. ಅವರು 60 ರಿಂದ 70% ಅಂದರೆ ಸುಮಾರು 85 ಮನೆಯ ಗಣತಿ ಕಾರ್ಯ ಮುಗಿಸಿದ್ದಾರೆ. ಇನ್ನು ಇವರ ಮೇಲ್ವಿಚಾರಕರಾದ ಪ್ರಕಾಶ್ ಎಂಬುವವರ ಬಳಿ ಅವರು ಯಾವುದೇ ಮಾನಸಿಕ ಒತ್ತಡ ಅಥವಾ ಕೆಲಸದ ಒತ್ತಡದ ಬಗ್ಗೆ ಹೇಳಿಕೊಂಡಿಲ್ಲ. ಆದರೆ ಕಳೆದ ಮೂರು ದಿನಗಳಿಂದ ಗಣತಿ ಕಾರ್ಯಕ್ಕೆ ಗೈರಾಗಿದ್ದರು. ಸೋಮವಾರ ಬೇಗ ಶಾಲೆಗೆ ಹೋಗುವುದಾಗಿ ಹೇಳಿ ತನ್ನ ಮಗನಿಂದ ಬಸ್ ನಿಲ್ದಾಣಕ್ಕೆ ಡ್ರಾಪ್ ಮಾಡಲಾಗಿದೆ. ಬಳಿಕ ನಾಪತ್ತೆಯಾಗಿದ್ದ ಅವರು ಶವವಾಗಿ ಪತ್ತೆ ಆಗಿದ್ದಾರೆ.

ಆತ್ಮಹತ್ಯೆಗೆ ಕೌಟುಂಬಿಕ ಕಲಹ ಕಾರಣ ಶಂಕೆ?

ಇನ್ನು ಶವಗಾರದ ಬಳಿ ಹೆಚ್ಚುವರಿ ಜಿಲ್ಲಾಧಿಕಾರಿ ಮಂಗಳ, ತಹಶೀಲ್ದಾರ್ ನಯನ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಲಾಗಿದೆ. ಆದರೆ ಸದ್ಯ ಬೇಗ ಆತ್ಮಹತ್ಯೆಗೆ ಕೌಟುಂಬಿಕ ಕಲಹ ಕಾರಣ ಇರಬಹುದು, ಅವರ ಆತ್ಮಹತ್ಯೆಗೂ ಗಣತಿ ಕಾರ್ಯಕ್ಕೂ ಸಂಬಂಧವಿಲ್ಲ ಅನ್ನೋದು ಅಧಿಕಾರಿಗಳು ಮಾತನಾಡಿದ್ದಾರೆ. ಪೊಲೀಸರ ತನಿಖೆಯಿಂದ ಆತ್ಮಹತ್ಯೆಗೆ ನಿಖರ ಕಾರಣ ಏನು ಅನ್ನೋದು ತಿಳಿಯಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 12:11 pm, ಗುರುವಾರ, 16 ಅಕ್ಟೋಬರ್ 25



Source link

Leave a Reply

Your email address will not be published. Required fields are marked *