ಕೋಲಾರ ಪೊಲೀಸ್ ಠಾಣೆ, ಡ್ರೋನ್
ಕೋಲಾರ, ಡಿಸೆಂಬರ್ 04: ಆ ಜಿಲ್ಲೆಯಲ್ಲಿ ಅಪರಾಧ ತಡೆಗೆ ಪೊಲೀಸ್ ಇಲಾಖೆ (ಪೊಲೀಸ್ ಇಲಾಖೆ)
ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದೆ. ಕಾನೂನು ಬಾಹಿರ ಚಟುವಟಿಕೆಗಳು, ಜೂಜಾಟ, ಕೋಳಿ ಪಂದ್ಯ ಮತ್ತು ಅಕ್ರಮ ಚಟುವಟಿಕೆಗಳ ತಡೆಗೆ ಡ್ರೋನ್ ಬೀಟ್ (ಡ್ರೋನ್ ಬೀಟ್) ಎಂಬ ಹೊಸ ಪ್ರಯೋಗ ಆರಂಭವಾಗಿದೆ. ಕರ್ನಾಟಕದಲ್ಲಿ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಈ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.
ಮೂರು ಡ್ರೋನ್‌ಗಳಿಂದ ಗಸ್ತು
ಕೋಲಾರ ಜಿಲ್ಲಾ ಪೊಲೀಸ್ ಇಲಾಖೆ, ರಾಜ್ಯದಲ್ಲಿ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಡ್ರೋನ್ ಗಸ್ತು ಕಾರ್ಯಾಚರಣೆ ಆರಂಭಿಸಿದೆ. ಜಿಲ್ಲೆಯಲ್ಲಿ ಮೂರು ಡ್ರೋನ್‌ಗಳಿಂದ ಗಸ್ತು ಕಾರ್ಯಾಚರಣೆ ಪ್ರಾರಂಭವಾಯಿತು, ಪ್ರತಿ ದಿನ ಒಂದೊಂದು ತಾಲೂಕಿಗೆ ಡ್ರೋನ್ ಅನ್ನು ಕಳುಹಿಸಲಾಗುತ್ತಿದೆ. ಗಸ್ತು ಕಾರ್ಯಾಚರಣೆಗಾಗಿ ಇಲಾಖೆ 8 ಜನ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತದೆ.
ಇದನ್ನೂ ಓದಿ: ಕೊರೆವ ಚಳಿ, ದಟ್ಟ ಮಂಜು: ಊಟಿಯಂತಾದ ಬಯಲು ಸೀಮೆ ಕೋಲಾರ
ಪೊಲೀಸ್ ಇಲಾಖೆ 112 ನಂಬರ್‌ಗೆ ದೂರು ಬಂದರೆ ಡ್ರೋನ್ ಗಸ್ತು ಮಾಡಲಾಗಿದೆ. ಸುಮಾರು 5ಕಿ.ಮೀ ದೂರದಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಮತ್ತು ಅಕ್ರಮ ಚಟುವಟಿಕೆಗಳ ಪತ್ತೆ ಹಚ್ಚಲಾಗಿದೆ. ಬಹುಮುಖ್ಯವಾಗಿ ಬೆಟ್ಟ, ಅರಣ್ಯ ಪ್ರದೇಶಗಳು ಮತ್ತು ನಿರ್ಜನ ಪ್ರದೇಶಗಳಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳನ್ನು ಡ್ರೋನ್ ಮುಖಾಂತರ ಪತ್ತೆ ಹಚ್ಚಿ ಅಂತವರ ಮೇಲೆ ನಿಗಾ ಇಡಲು ಈ ಡ್ರೋನ್ ಬೀಟ್ ಅನುಕೂಲಕರವಾಗಿದೆ.
ಜಿಲ್ಲಾ ವರಿಷ್ಠಾಧಿಕಾರಿ ನಿಖಿಲ್ ಹೇಳಿದ್ದಾರೆ
ಇನ್ನು ಇತ್ತೀಚಿಗೆ ಅರಣ್ಯ ಪ್ರದೇಶದ ಜೂಜಾಟ, ಅಕ್ರಮ ಚಟುವಟಿಕೆಗಳು, ಪಾರ್ಟಿಗಳು ಸೇರಿ ವಿವಿಧೆಡೆ ನಡೆಯುತ್ತಿರುವಂತಹ ಅಪರಾಧ ಪ್ರಕರಣಗಳ ತಡೆಗೆ ಡ್ರೋನ್ ನಿಯೋಜನೆ ಮಾಡಲಾಗಿದೆ, ಇನ್ನು ಮುಂದೆ ಕೋಲಾರ ಜಿಲ್ಲೆಯ ಡ್ರೋನ್ ಕಣ್ಗಾವಲಿನಲ್ಲಿದೆ. ಈ ಡ್ರೋನ್ ಬೀಟ್ ಕಾರ್ಯಚರಣೆಯನ್ನು ರಾಜ್ಯದಲ್ಲೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಆರಂಭಿಸಿದ್ದು, ಹಂತಹಂತವಾಗಿ ಇಡೀ ರಾಜ್ಯಕ್ಕೆ ವಿಸ್ತರಿಸಲು ರಾಜ್ಯ ಪೊಲೀಸ್ ಇಲಾಖೆ ಉದ್ದೇಶಿಸಿದೆ ಎಂದು ಜಿಲ್ಲಾ ವರಿಷ್ಟಾಧಿಕಾರಿ ನಿಖಿಲ್ ಅವರು ಹೇಳುತ್ತಾರೆ.
ಇನ್ನು ಪೊಲೀಸರ ಕಣ್ಣುತಪ್ಪಿಸಿ ನಿರ್ಜನ ಪ್ರದೇಶ, ತೋಟ, ಬೆಟ್ಟಗಳ ಮೇಲೆ ನಡೆಯುವ ಜೂಜಾಟ ಸೇರಿದಂತೆ ಅಪರಾಧ ಪ್ರಕರಣಗಳ ಮೇಲೆ ನಿಗಾಯಿಡಲು ಕೋಲಾರ ಜಿಲ್ಲಾ ಪೊಲೀಸ್ ಡ್ರೋನ್‌ಗಳ ಮುಖಾಂತರ ಕಣ್ಗಾವಲಿಡಲು ಮುಂದಾಗಿದೆ. ಜೂಜಾಟಕ್ಕೆ ಸಾಕಷ್ಟು ಕಠಿಣ ಕಾನೂನುಗಳು ಜಾರಿಯಲ್ಲಿದ್ದವು. ಪೊಲೀಸರ ಕಣ್ಣು ತಪ್ಪಿಸಿ ಅಲ್ಲಲ್ಲಿ ಅಡ್ಡೆಗಳಲ್ಲಿ ರೂ ಗ್ಯಾಬ್ಲಿಂಗ್ ನಡೆಯುತ್ತಿದೆ. ಆದರೆ ದಾಳಿ ಮಾಡುವಷ್ಟರಲ್ಲಿ ತಪ್ಪಿಸಿಕೊಳ್ಳುತ್ತಾರೆ. ಹೀಗಾಗಿ ಸುಲಭವಾಗಿ ಕಾರ್ಯಚರಣೆ ನಡೆಸಿ ತಿಳಿದುಕೊಳ್ಳಬಹುದು. ಆದ್ದರಿಂದ ಡ್ರೋನ್ ಗಸ್ತು ಹೆಚ್ಚು ಪರಿಣಾಮಕಾರಿಯಾಗಲಿದೆ.
ಸಾರ್ವಜನಿಕರಿಂದ ಪ್ರಶಂಸೆ
ಇನ್ನು ಜಿಲ್ಲಾ ಪೊಲೀಸ್ ಇಲಾಖೆಯ ಡ್ರೋನ್ ಗಸ್ತು ಕಾರ್ಯಚರಣೆಗೆ ಕೋಲಾರದ ಸಾರ್ವಜನಿಕರಿಂದ ಪ್ರಶಂಸೆಯ ಮಾತುಗಳು ಕೇಳಿ ಬರುತ್ತಿವೆ. ಆದರೆ ಇದನ್ನು ಸಮರ್ಪಕವಾಗಿ ಅನುಸರಿಸಬೇಕಾಗಿದೆ. ಇದರಲ್ಲೂ ಮಾಹಿತಿ ಸೋರಿಕೆ ಮಾಡುವ ಮೂಲಕ ಕಳ್ಳರಿಗೆ ನೆರವು ನೀಡದಂತೆ ಎಚ್ಚರ ವಹಿಸಬೇಕು ಎಂದು ಸ್ಥಳೀಯರಾದ ಮಂಜುನಾಥ್ ಎಂಬುವವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಕೋಲಾರದಲ್ಲಿ RTO ಅಧಿಕಾರಿಗಳು ಭರ್ಜರಿ ಬೇಟೆ; 32 ಖಾಸಗಿ ಬಸ್‌ಗಳು ಸೀಜ್
ಒಟ್ಟಾರೆ ಡ್ರೋನ್ ಗಸ್ತಿನ ಮೂಲಕ ಗಡಿ ಭಾಗಗಳಲ್ಲಿ, ಬೆಟ್ಟಗುಡ್ಡಗಳಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಡಲಿದೆ, ಕದ್ದು ಮುಚ್ಚಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಅಪರಾಧಿಗಳ ಮೇಲೆ ಡ್ರೋನ್ ಬೀಟ್ ಪರಿಣಾಮ ಬೀರುವುದಂತೂ ಸತ್ಯ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.