Headlines

IPL 2026 ರಿಂಕು ಸಿಂಗ್‌ಗೆ ಶಾಕ್! ಈ ಅನುಭವಿ ಆಟಗಾರನಿಗೆ ಮತ್ತೆ ಕ್ಯಾಪ್ಟನ್ ಪಟ್ಟ ಕಟ್ಟಿದ ಕೆಕೆಆರ್!

IPL 2026 ರಿಂಕು ಸಿಂಗ್‌ಗೆ ಶಾಕ್! ಈ ಅನುಭವಿ ಆಟಗಾರನಿಗೆ ಮತ್ತೆ ಕ್ಯಾಪ್ಟನ್ ಪಟ್ಟ ಕಟ್ಟಿದ ಕೆಕೆಆರ್!

IPL 2026 ರಿಂಕು ಸಿಂಗ್‌ಗೆ ಶಾಕ್! ಈ ಅನುಭವಿ ಆಟಗಾರನಿಗೆ ಮತ್ತೆ ಕ್ಯಾಪ್ಟನ್ ಪಟ್ಟ ಕಟ್ಟಿದ ಕೆಕೆಆರ್!

ಐಪಿಎಲ್ 2026ರ ಸೀಸನ್‌ಗೆ ಕೋಲ್ಕತಾ ನೈಟ್ ರೈಡರ್ಸ್ ತಂಡವು ಅಜಿಂಕ್ಯ ರಹಾನೆಯನ್ನು ತಮ್ಮ ನಾಯಕನನ್ನಾಗಿ ಅಧಿಕೃತವಾಗಿ ಘೋಷಿಸಿದೆ. ರಿಂಕು ಸಿಂಗ್ ಹೆಸರು ಕೂಡ ಚರ್ಚೆಯಲ್ಲಿತ್ತು, ಆದರೆ ಮ್ಯಾನೇಜ್‌ಮೆಂಟ್ ರಹಾನೆ ಮೇಲೆಯೇ ನಂಬಿಕೆ ಇಟ್ಟಿದೆ. ಅಷ್ಟಕ್ಕೂ ಕೆಕೆಆರ್ ಪ್ಲ್ಯಾನ್ ಏನು?

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಸೀಸನ್‌ಗೆ ಸಿದ್ಧತೆಗಳು ಜೋರಾಗಿವೆ. ಎಲ್ಲಾ ತಂಡಗಳು ತಮ್ಮ ತಯಾರಿ ಆರಂಭಿಸಿವೆ. ಈ ನಡುವೆ, ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ತನ್ನ ನಾಯಕ ಯಾರೆಂಬ ಕುತೂಹಲಕ್ಕೆ ತೆರೆ ಎಳೆದಿದೆ. ರಿಂಕು ಸಿಂಗ್ ನಾಯಕರಾಗುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ, ಹಿರಿಯ ಆಟಗಾರ ಅಜಿಂಕ್ಯ ರಹಾನೆ ಅವರೇ ಮುಂಬರುವ ಸೀಸನ್‌ನಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಕೆಕೆಆರ್ ಅಧಿಕೃತವಾಗಿ ಘೋಷಿಸಿದೆ.

ಕಳೆದ ಸೀಸನ್‌ನಲ್ಲೂ ಅಜಿಂಕ್ಯ ರಹಾನೆ ಕೆಕೆಆರ್ ತಂಡವನ್ನು ಮುನ್ನಡೆಸಿದ್ದರು. ಆದರೆ, 2024ರಲ್ಲಿ ಚಾಂಪಿಯನ್ ಆಗಿದ್ದ ಕೋಲ್ಕತಾ, 2025ರಲ್ಲಿ ರಹಾನೆ ನಾಯಕತ್ವದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ತಂಡವು ಪಾಯಿಂಟ್ಸ್ ಪಟ್ಟಿಯಲ್ಲಿ 7ನೇ ಸ್ಥಾನ ಪಡೆದು ಪ್ಲೇಆಫ್‌ ತಲುಪಲು ವಿಫಲವಾಗಿತ್ತು. ಆದರೂ, ಬ್ಯಾಟರ್ ಆಗಿ ರಹಾನೆ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ್ದರು. ಇದೀಗ, ಕೆಕೆಆರ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಬಿಡುಗಡೆ ಮಾಡಿ, ರಹಾನೆಯೇ ತಮ್ಮ ನಾಯಕ ಎಂದು ಖಚಿತಪಡಿಸಿದೆ. ಇದಕ್ಕೂ ಮುನ್ನ ರಹಾನೆ ತಮ್ಮ ಲಿಂಕ್ಡ್‌ಇನ್ ಖಾತೆಯಲ್ಲಿ ತಾವೇ ತಂಡವನ್ನು ಮುನ್ನಡೆಸುವ ಬಗ್ಗೆ ಸುಳಿವು ನೀಡಿದ್ದರು.
ನಾಯಕತ್ವದ ರೇಸ್‌ನಲ್ಲಿ ಸ್ಟಾರ್ ಫಿನಿಶರ್ ರಿಂಕು ಸಿಂಗ್ ಹೆಸರು ಬಲವಾಗಿ ಕೇಳಿಬಂದಿತ್ತು. ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಕೂಡ ರಿಂಕು ಸಿಂಗ್ ಪರವಾಗಿಯೇ ಮತ ಚಲಾಯಿಸಿದ್ದರು. ಯುಪಿ ಟಿ20 ಲೀಗ್‌ನಲ್ಲಿ ಮೀರತ್ ಮ್ಯಾವೆರಿಕ್ಸ್ ಮತ್ತು ರಣಜಿ ಟ್ರೋಫಿ 2024-25ರಲ್ಲಿ ಉತ್ತರ ಪ್ರದೇಶ ತಂಡವನ್ನು ಮುನ್ನಡೆಸಿದ ಅನುಭವ ರಿಂಕುಗೆ ಇದೆ. ಕೆಕೆಆರ್ ಜೊತೆ ಸುದೀರ್ಘ ಒಡನಾಟ ಹೊಂದಿರುವ ರಿಂಕು ನಾಯಕರಾಗುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಮ್ಯಾನೇಜ್‌ಮೆಂಟ್ ಅನುಭವಿ ರಹಾನೆಗೆ ಮಣೆ ಹಾಕಿದೆ. ಹರಾಜಿನ ಮುನ್ನವೇ ನಾಯಕನನ್ನು ನಿರ್ಧರಿಸದೆ, ಕೊನೆ ಕ್ಷಣದಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದಕ್ಕೆ ಟೀಕೆಗಳು ವ್ಯಕ್ತವಾಗುತ್ತಿವೆ.
ಐಪಿಎಲ್ 2026ಕ್ಕೆ ಕೆಕೆಆರ್ ತನ್ನ ಕೋಚಿಂಗ್ ಸಿಬ್ಬಂದಿಯಲ್ಲಿ ದೊಡ್ಡ ಬದಲಾವಣೆ ಮಾಡಿದೆ. ಅಭಿಷೇಕ್ ನಾಯರ್ ಅವರನ್ನು ಹೆಡ್ ಕೋಚ್ ಆಗಿ ನೇಮಿಸಿದ್ದು, ಶೇನ್ ವ್ಯಾಟ್ಸನ್ ಸಹಾಯಕ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಆಂಡ್ರೆ ರಸೆಲ್ ಪವರ್ ಕೋಚ್ ಆಗಿ ಮತ್ತು ಟಿಮ್ ಸೌಥಿ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ಕಳೆದ ಹರಾಜಿನಲ್ಲಿ ಕೆಕೆಆರ್, 63 ಕೋಟಿ ರೂ.ಗಳ ಬೃಹತ್ ಮೊತ್ತದೊಂದಿಗೆ ಕಣಕ್ಕಿಳಿದು, ಕ್ಯಾಮರೂನ್ ಗ್ರೀನ್‌ರನ್ನು 25.20 ಕೋಟಿ ರೂ.ಗೆ ಮತ್ತು ಮತೀಶ ಪತಿರಾನರನ್ನು 18 ಕೋಟಿ ರೂ.ಗೆ ಖರೀದಿಸಿತ್ತು. ಇದಕ್ಕೂ ಮುನ್ನ ಶ್ರೇಯಸ್ ಅಯ್ಯರ್ ಅವರನ್ನು ಕೈಬಿಟ್ಟು, ವೆಂಕಟೇಶ್ ಅಯ್ಯರ್ ಅವರನ್ನು 23.75 ಕೋಟಿ ರೂ.ಗೆ ಉಳಿಸಿಕೊಂಡಿತ್ತು. ಆದರೆ ಅವರು ವಿಫಲವಾದ ಕಾರಣ ಈ ಬಾರಿ ಹೊಸ ತಂತ್ರಗಳೊಂದಿಗೆ ಕಣಕ್ಕಿಳಿಯುತ್ತಿದೆ.
ಸೀಸನ್ ಆರಂಭಕ್ಕೂ ಮುನ್ನವೇ ಕೆಕೆಆರ್‌ಗೆ ದೊಡ್ಡ ಹಿನ್ನಡೆಯಾಗಿದೆ. ಸ್ಟಾರ್ ಬೌಲರ್ ಹರ್ಷಿತ್ ರಾಣಾ ಮೊಣಕಾಲಿನ ಗಾಯದಿಂದಾಗಿ 2026ರ ಸಂಪೂರ್ಣ ಸೀಸನ್‌ನಿಂದ ಹೊರಗುಳಿಯಲಿದ್ದಾರೆ. 2026ರ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಅವರು ಗಾಯಗೊಂಡಿದ್ದರು. ಅವರ ಸ್ಥಾನಕ್ಕೆ ಬದಲಿ ಆಟಗಾರನನ್ನು ತೆಗೆದುಕೊಳ್ಳಲು ಕೆಕೆಆರ್ ಆಸಕ್ತಿ ತೋರುತ್ತಿಲ್ಲ. ಮತ್ತೊಂದೆಡೆ, ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು 9.20 ಕೋಟಿ ರೂ.ಗೆ ಖರೀದಿಸಿದ್ದರೂ, ಬಿಸಿಸಿಐ ಆದೇಶದ ಮೇರೆಗೆ ಅವರನ್ನು ಬಿಡುಗಡೆ ಮಾಡಬೇಕಾಯಿತು. ಅವರ ಸ್ಥಾನಕ್ಕೆ ಜಿಂಬಾಬ್ವೆಯ ವೇಗಿ ಬ್ಲೆಸ್ಸಿಂಗ್ ಮುಜಾರಬಾನಿಯನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಅಜಿಂಕ್ಯ ರಹಾನೆ (ನಾಯಕ), ರಿಂಕು ಸಿಂಗ್, ಸುನಿಲ್ ನರೈನ್, ವರುಣ್ ಚಕ್ರವರ್ತಿ, ಅಂಕೃಷ್ ರಘುವಂಶಿ, ಮನೀಶ್ ಪಾಂಡೆ, ಕ್ಯಾಮರೂನ್ ಗ್ರೀನ್, ಫಿನ್ ಅಲೆನ್, ತೇಜಸ್ವಿ ಸಿಂಗ್, ರಾಹುಲ್ ತ್ರಿಪಾಠಿ, ಟಿಮ್ ಸೀಫರ್ಟ್, ರೋವ್‌ಮನ್ ಪೊವೆಲ್, ಅನುಕುಲ್ ರಾಯ್, ಸಾರ್ಥಕ್ ರಂಜನ್, ದಕ್ಷ್ ಕಮ್ರಾ, ರಚಿನ್ ರವೀಂದ್ರ, ರಮಣ್‌ದೀಪ್ ಸಿಂಗ್, ವೈಭವ್ ಅರೋರಾ, ಮತೀಶ ಪತಿರಾನ, ಕಾರ್ತಿಕ್ ತ್ಯಾಗಿ, ಪ್ರಶಾಂತ್ ಸೋಲಂಕಿ, ಆಕಾಶ್ ದೀಪ್, ಹರ್ಷಿತ್ ರಾಣಾ, ಉಮ್ರಾನ್ ಮಲಿಕ್, ಬ್ಲೆಸ್ಸಿಂಗ್ ಮುಜಾರಬಾನಿ.

Source link

Leave a Reply

Your email address will not be published. Required fields are marked *