
ವಿಜಯಪುರ, ಏಪ್ರಿಲ್ 05: ಕೂಡಗಿ ಉಷ್ಣ ವಿದ್ಯುತ್ ಸ್ಥಾವರ ಅನ್ನದಾತರ (ರೈತರು) ಪಾಲಿಕೆ ಕಂಟಕವಾಗಿದೆ. ಎನ್ಟಿ ಪಿಸಿ (NTPC) ಕಾರಣದಿಂದ ರೈತರು ಕಣ್ಣೀರು ಹಾಕುತ್ತಿದ್ದಾರೆ. ಸ್ಥಾವರದ ಸುತ್ತಮುತ್ತಲಿನ ಕೊಳವೆ ಬಾವಿಗಳನ್ನು ಕೃಷಿ ಮಾಡುತ್ತಿರುವವರಿಗೆ ಬರೆ ಬಿದ್ದಂತಾಗಿದೆ. ಸಮಸ್ಯೆಗಳ ಬಗ್ಗೆ ಎನ್ ಟಿಪಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಪಾಲಿನ ಜೀವ ಜಲ ವಿಷವಾಗುತ್ತಿದೆ.
ಎಸ್ಟಿಪಿಸಿ ನಿರ್ಮಾಣಕ್ಕೆ ಮೊದಲಿನಿಂದಲೂ ವಿರೋಧ
ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಕೂಡಗಿ ಬಳಿ ಉಷ್ಣ ವಿದ್ಯುತ್ ಸ್ಥಾವರಕ್ಕೆ 2012 ಜೂನ್ 12 ರಂದು ಶಿಲಾನ್ಯಾಸ ಮಾಡಲಾಯಿತು. 2017ರಲ್ಲಿ ಉಷ್ಣ ವಿದ್ಯುತ್ ಸ್ಥಾವರದಲ್ಲಿ ವಿದ್ಯುತ್ ಉತ್ಪಾದನೆಯನ್ನು ಪ್ರಾರಂಭಿಸಲಾಯಿತು. ಎಸ್ಟಿಪಿಸಿ ನಿರ್ಮಾಣಕ್ಕೆ ಮೊದಲಿನಿಂದಲೂ ವಿರೋಧ ವ್ಯಕ್ತವಾಗಿತ್ತು. ಸರ್ಕಾರ ಹಾಗೂ ಎನ್ಟಿಪಿಸಿ ಅಧಿಕಾರಿಗಳು ಆಧುನಿಕ ತಂತ್ರಜ್ಞಾನದಿಂದ ಎಲ್ಲಾ ನಿರ್ವಹಣೆ ಮಾಡೋದಾಗಿ ಭರವಸೆ ನೀಡಿದ್ದರು.
ಇದನ್ನೂ ಓದಿ: ಆಲಿಕಲ್ಲು ಮಳೆಗೆ ಕಾಶ್ಮೀರದಂತಾದ ಬಿಸಿಲನಾಡು ಕಲಬುರಗಿ: ಧಾರವಾಡ, ವಿಜಯಪುರದಲ್ಲಿ ಅಪಾರ ಬೆಳೆ ನಾಶವಾಗಿದೆ.
ವಿದ್ಯುತ್ ಉತ್ಪಾದನೆಯಿಂದ ಸ್ಥಾವರಗಳಿಂದ ಹಾರು ಬೂದಿಯ ನೀರಿನ ಮೂಲಕ ಅನತಿ ದೂರದಲ್ಲಿನ ಮಸೂತಿ ಗ್ರಾಮದ ಬಳಿ ಕೃತಕವಾಗಿ ನಿರ್ಮಾಣ ಮಾಡಿರುವ ಕೆರೆಗಳಲ್ಲಿ ಸಂಗ್ರಹವಾಗಿದೆ. ಹಾರುಬೂದಿಯನ್ನು ನೀರಿನಲ್ಲಿ ಮಿಶ್ರಣ ಮಾಡಿ ಉಷ್ಣ ವಿದ್ಯುತ್ ಸ್ಥಾವರದಿಂದ ನಾಲ್ಕು ಕಿ.ಮೀ ದೂರದಲ್ಲಿರುವ ಮಸೂತಿ ಗ್ರಾಮದ 1400 ಎಕರೆ ಪ್ರದೇಶದಲ್ಲಿ ನಿರ್ಮಿಸಲಾದ ನಾಲ್ಕು ಕೆರೆಗಳಿಗೆ ಬಿಡಲಾಗುತ್ತಿದೆ. ಅಲ್ಲಿ ಮತ್ತೆ ನೀರನ್ನು ಫಿಲ್ಟರ್ ಮಾಡಿ ನೀರನ್ನು ಮರುಬಳಕೆ ಮಾಡಲಿಲ್ಲ.
ಹಾರುಬೂದಿ ಹೂಳಿನ ರೂಪದಲ್ಲಿ ಕೆರೆಯಲ್ಲಿ ಸಂಗ್ರಹವಾಗುತ್ತದೆ. ಅದರ ಸಿಮೆಂಟ್ ಫ್ಯಾಕ್ಟರಿಗೆ ಮತ್ತು ಇಟ್ಟಿಗೆ ತಯಾರಿಕೆಗೆ ಉದ್ದೇಶಿಸಲಾಗಿದೆ. ಆದರೆ ಸಮಸ್ಯೆ ಇಲ್ಲಿಯೇ ಆರಂಭವಾಗಿದೆ. ಉಷ್ಣ ವಿದ್ಯುತ್ ಸ್ಥಾವರದ ಹಾರುಬೂದಿಯನ್ನು ಹೊತ್ತು ತಂದ ನೀರು ಕೆರೆಗಳಲ್ಲಿ ಸಂಗ್ರಹವಾಗುತ್ತಿದ್ದು, ಅದೇ ನೀರು ಕೆರೆಗಳ ಭಾಗದ ರೈತರ ಪಾಲಿಗೆ ವಿಷವಾಗುತ್ತಿದೆ.
ಶಾಕಿಂಗ್ ವರದಿ
ಹಾರುಬೂದಿಯನ್ನು ಸಂಗ್ರಹಿಸುವ ಕೆರೆಗಳ ನೀರು ಸುತ್ತಮುತ್ತಲಿನ ಜಮೀನಿಗೆ ತೆರೆದ ಬಾವಿ, ಕೊಳವೆ ಬಾವಿಗಳ ಅಂತರ್ಜಲದಲ್ಲಿ ನೀರು ತುಂಬಿದೆ. ಜಮೀನುಗಳಲ್ಲಿ ಹೆಚ್ಚಾಗಿ ಮಣ್ಣಿನ ಮೇಲ್ಮೈಯಲ್ಲಿ ಉಪ್ಪಿನಾಂಶ ಸಂಗ್ರಹವಾಗುತ್ತಾ ಹೋಗಿ ಸವಳು ಜವಳಾಗಿದೆ. ಇಲ್ಲಿ ಯಾವುದೇ ಬೆಳೆ ಬೆಳೆಯಲು ಅಸಾಧ್ಯವಾಗಿದೆ. ಖರ್ಚು ರೂ ಹಣ ಖರ್ಚು ಮಾಡಿದರೂ ಫಸಲು ಕುಂಠಿತಗೊಂಡಿದೆ. ಇದರಿಂದ ಬೇಸತ್ತು ರೈತರು ಇಲ್ಲಿ ತೆರೆದ ಬಾವಿ ಹಾಗೂ ಕೊಳವೆ ಬಾವಿಯ ನೀರನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿ ಜನ, ಜಾನುವಾರು ಸೇರಿದಂತೆ ಪ್ರಾಣಿ, ಪಕ್ಷಿಗಳಿಗೆ ಕುಡಿಯಲು ಯೋಗ್ಯವಿಲ್ಲವೆಂಬ ಶಾಕಿಂಗ್ ವರದಿ ಬಂದಿದೆ.
ಒಂದೆಡೆ ಜಮೀನು ಹಾಳಾಗಿದೆ, ಮತ್ತೊಂದೆಡೆ ನಮ್ಮ ಭಾಗದ ಅಂತರ್ಜಲವೂ ವಿಷವಾಗುತ್ತಿದೆ ಎಂದು ರೈತರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ಜಮೀನಿನ ಬಾವಿ, ಕೊಳವೆ ಬಾವಿಯ ನೀರನ್ನು ಕುಡಿಯಲು. ಆದರೆ ಇದೀಗ ಈ ಭಾಗದ ಅಂತರ್ಜಲವನ್ನು ನೀರು ತುಂಬಿರುವ ಕಾರಣ ಇಲ್ಲಿಯ ನೀರಿನ ಸ್ವಾದನೆ ಬದಲಾಗಿದೆ. ಆರೋಗ್ಯ ಸಮಸ್ಯೆಗಳು ಬಾಧಿಸುತ್ತಿವೆ. ಹಾರುಬೂದಿಯ ಸಂಗ್ರಹ ಮಾಡುವ ಕೆರೆಗಳ ನೀರು ಇಡೀ ರೈತಕುಲಕ್ಕೆ ವಿಷವಾಗಿದೆ.
ಇದನ್ನೂ ಓದಿ: ವಿಶ್ವಗುರು ಬಸವಣ್ಣ-ಅಕ್ಕಮಹಾದೇವಿ ಬಗ್ಗೆ ಅಶ್ಲೀಲ ಮಾತು: ಸಿಡಿದೆದ್ದ ಅನುಯಾಯಿಗಳು
ಉಷ್ಣ ವಿದ್ಯುತ್ ಸ್ಥಾವರದ ಹಾರುಬೂದಿಯ ಜೊತೆಗಿರುವ ಕೆಮಿಕಲ್ಸ್ ಸುತ್ತಮುತ್ತಲ ಭಾಗದ ಅಂತರ್ಜಲ ಸೇರುತ್ತಿರುವುದು ಮಾತ್ರ ಮಹಾದುರಂತವೇ ಆಗಿದೆ. ಸಮಸ್ಯೆಗೀಡಾದ ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಂಡು ರೈತರಿಗೆ ಸೂಕ್ತ ಪರಿಹಾರ ನೀಡುವುದೇ ಇದಕ್ಕೆ ಪರಿಹಾರವಾಗಿದೆ. ಈ ಆಧುನಿಕ ಸರ್ಕಾರ, ಎನ್ ಟಿಪಿಸಿ ಹಾಗೂ ಯಾವ ಕ್ರಮತೆಗೆದುಕೊಳ್ಳುತ್ತಾರೋ ಕಾಯ್ದು ನೋಡಬೇಕಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.