ಕೊಪ್ಪಳ, ಡಿಸೆಂಬರ್ 17: ಬೈಕ್‌ಗೆ ಬೊಲೆರೊ ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಮೂವರುಮರಣ ಹೊಂದಿರುವಂತಹ ಘಟನೆ ಕೊಪ್ಪಳ ತಾಲೂಕಿನ ಇಂದರಗಿ ಗ್ರಾಮದ ದುರ್ಘಟನೆ ನಡೆದಿದೆ. ವಾಜಿದ್(17), ರಾಜಾಹುಸೇನ್(17) ಮತ್ತು ಆಸೀಫ್(18) ಮೃತರು. ಶ್ರೀರಾಮನಗರದಿಂದ ಹೊಸಹಳ್ಳಿಗೆ ಬೈಕ್‌ನಲ್ಲಿ ತೆರಳುವಾಗ ಭೀಕರ ಅಪಘಾತ ಸಂಭವಿಸಿದೆ. ಬೊಲೆರೊ ವಾಹನ ಚಾಲಕ ಪರಾರಿ, ಮುನಿರಾಬಾದ್ ಪೊಲೀಸ್ ಠಾಣಾ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಮಾಹಿತಿ ಅಪ್ಡೇಟ್ ಆಗಲಿದೆ.