
ಕೊಪ್ಪಳ, ಏಪ್ರಿಲ್ 13: ಕೊಪ್ಪಳ ಜಿಲ್ಲೆಯಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿರುವ ಮುಸ್ತಾಫಾ ಖಾದ್ರಿ ವಿರುದ್ಧ ಲವ್ ಜಿಹಾದ್ (ಲವ್ ಜಿಹಾದ್ ಪ್ರಕರಣ) ಆರೋಪ ಪ್ರಕರಣಕ್ಕೆ ಈಗ ಮತ್ತೊಂದು ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಆರೋಪಿ ಮುಸ್ತಾಫಾಗೆ ಗೋವಾ ಮತ್ತು ಮುಂಬೈನ ಮಟ್ಕಾ ಬುಕ್ಕಿಗಳೊಂದಿಗೆ ಸಂಪರ್ಕವಿದ್ದು, ಅವರಿಂದಲೇ ಹಣದ ನೆರವು ಸಿಗುತ್ತಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆಯೂ ಇದೀಗ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಪೊಲೀಸರಿಗೆ ದೂರು ನೀಡಿದ್ದಾರೆ.
ಮಟ್ಕಾ ಬುಕ್ಕಿಗಳ ಹಣದಲ್ಲಿ ಹೈಫೈ ಜೀವನ
ಕೊಪ್ಪಳ ತಾಲೂಕಿನ ಕಂಪ್ಲಿ ಗ್ರಾಮದ ನಿವಾಸಿಯಾಗಿರುವ ಮುಸ್ತಾಫಾ ಖಾದ್ರಿ, ಗೋವಾ ಮತ್ತು ಮುಂಬೈನ ಪ್ರಭಾವಿ ಮಟ್ಕಾ ಬುಕ್ಕಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಅವರಿಂದ ಬರುತ್ತಿದ್ದ ಹಣದ ಸಹಾಯದಿಂದ ಈ ಕೊಪ್ಪಳದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದರು. ಇದೇ ಹಣದ ಬಲದಿಂದ ಅಮಾಯಕ ಹುಡುಗಿಯರನ್ನು ಬಲೆಗೆ ಹಾಕಿಕೊಂಡು ಮೋಜು-ಮಸ್ತಿ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಪ್ರಕರಣದ ಹಿನ್ನೆಲೆ: ಅಸಲಿಗೆ ನಡೆದಿದ್ದೇನು?
ಕೊಪ್ಪಳದಲ್ಲಿ ಇತ್ತೀಚೆಗೆ ಮುಸ್ತಾಫಾ ಖಾದ್ರಿ ಎಂಬಾತ ಹಿಂದೂ ಹುಡುಗಿಯರನ್ನು ಪ್ರೀತಿಸುವ ನಾಟಕವಾಡಿ ವಂಚಿಸುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು. ಈತನ ಮೊಬೈಲ್‌ನಲ್ಲಿ ಅನೇಕ ಹುಡುಗಿಯರ ಜೊತೆಗಿನ ಅಶ್ಲೀಲ ವಿಡಿಯೋಗಳು ಮತ್ತು ಫೋಟೋಗಳು ಇದ್ದವು. ಈ ವಿಡಿಯೋಗಳನ್ನು ಇಟ್ಟುಕೊಂಡು ಅವರು ಹುಡುಗಿಯರನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಈ ವಿಚಾರ ತಿಳಿಯುತ್ತಿದ್ದಂತೆಯೇ ವಿಶ್ವ ಹಿಂದೂ ಪರಿಷತ್ ಮತ್ತು ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಪೊಲೀಸರಿಗೆ ನೀಡಿದ್ದರು. ಇದಾದ ಬೆನ್ನಲ್ಲೇ ಸಂತ್ರಸ್ತ ಯುವತಿಯೊಬ್ಬಳು ಧೈರ್ಯ ಮಾಡಿ ಮುಸ್ತಾಫಾ ವಿರುದ್ಧ ದೌರ್ಜನ್ಯದ ದೂರು ದಾಖಲಿಸಿದ್ದಾಳೆ.
ಇದನ್ನೂ ಓದಿ: ಕೊಪ್ಪಳದಲ್ಲೂ ಲವ್ ಜಿಹಾದ್: ಯುವತಿಯರ ಅಶ್ಲೀಲ ವಿಡಿಯೋಗಳು ಪತ್ತೆ; ಸಿಡಿದೆದ್ದ ಹಿಂದೂ ಯುವಕರು
ಅಶ್ಲೀಲ ವಿಡಿಯೋಗಳ ರವಾನೆ ಶಂಕೆ
ಆರೋಪಿಯ ಮೊಬೈಲ್‌ನಲ್ಲಿ ಇರುವ ವಿಡಿಯೋಗಳನ್ನು ಆತ ಬೇರೆ ಯಾರಿಗಾದರೂ ರವಾನಿಸಿದ್ದಾನೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಟ್ಕಾ ಬುಕ್ಕಿಗಳ ಹಣದ ವ್ಯವಹಾರ ಮತ್ತು ಹುಡುಗಿಯರ ವಿಡಿಯೋಗಳ ನಡುವೆ ಏನಾದರೂ ಸಂಬಂಧವಿದೆಯೇ ಎಂಬ ಆಯಾಮದಲ್ಲೂ ತನಿಖೆ ಚುರುಕುಗೊಂಡಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ