ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ, ರಸ್ತೆ ಬದಿ ಮೂತ್ರ ವಿಸರ್ಜನೆ ಮಾಡುವುದನ್ನು ಪ್ರಶ್ನಿಸಿದ್ದಕ್ಕೆ ಹಿರಿಯ ನ್ಯಾಯವಾದಿ ಪ್ರಭಾಕರ್ ಮತ್ತು ಅವರ ಪತ್ನಿ ಮೇಲೆ ಜುಬೇರ್ ಎಂಬ ಯುವಕ ಹಲ್ಲೆ ಮಾಡಿದ್ದಾನೆ. ಈ ಘಟನೆಯನ್ನು ಖಂಡಿಸಿ ವಕೀಲರು ಮತ್ತು ಸಾರ್ವಜನಿಕರು ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ಗಂಗಾವತಿ: ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಹಿರಿಯ ನ್ಯಾಯವಾದಿ ಪ್ರಭಾಕರ ಹಾಗೂ ಅವರ ಪತ್ನಿ ಮೇಲೆ ಹಲ್ಲೆ ಮಾಡಲಾಗಿದ್ದು, ಘಟನೆಯಿಂದ ಆಕ್ರೋಶಗೊಂಡ ವಕೀಲರು ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ಬಸವೇಶ್ವರ ನಗರದ ಬಂಬು ಬಜಾರದಲ್ಲಿ ಘಟನೆ ನಡೆದಿದ್ದು, ರಸ್ತೆಯ ಪಕ್ಕದಲ್ಲಿ ಮೂತ್ರ ವಿಸರ್ಜನೆ ಮಾಡದಂತೆ ತಿಳಿ ಹೇಳಿದಕ್ಕೆ ಜುಬೇರ್ ಎಂಬ ಮುಸ್ಲಿಂ ಯುವಕ ಹಲ್ಲೆ ಮಾಡಿದ್ದಾನೆ.

ನ್ಯಾಯವಾದಿ ಪ್ರಭಾಕರ್ ಹಾಗೂ ಅವರ ಪತ್ನಿ ವಾಯುವಿಹಾರಕ್ಕೆ ಹೋಗಿದ್ದ ಸಂದರ್ಭದಲ್ಲಿ ಜುಬೇರ್ ರಸ್ತೆ ಬದಿ ಮೂತ್ರ ವಿಸರ್ಜನೆ ಮಾಡುತ್ತಿದ್ದರು ಇದಕ್ಕೆ ವಕೀಲರಾದ ಪ್ರಭಾಕರ್ ದಂಪತಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದರಿಂದ ಸಿಟ್ಟಿಗೆದ್ದ ಜುಬೇರ್ ವಕೀಲರ ಮೇಲೆ ಮೊದಲು ಹಲ್ಲೆ ಮಾಡಿದ್ದು, ಹಲ್ಲೆಯನ್ನು ಬಿಡಿಸಲು ಬಂದ ಅವರ ಪತ್ನಿ ಮೇಲೂ ಆರೋಪಿ ಹಲ್ಲೆ ಮಾಡಿದ್ದಾನೆ.

ಈ ವಿಚಾರ ತಿಳಿದ ವಕೀಲರು ಹಾಗೂ ಸಾರ್ವಜನಿಕರು ಗಂಗಾವತಿ ಠಾಣೆ ಮುಂದೆ ಜಮಾಯಿಸಿ ಹಲ್ಲೆಯನ್ನು ಖಂಡಿಸಿದ್ದು, ಆರೋಪಿಯ ಬಂಧನಕ್ಕೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಭಾರೀ ಸ್ಫೋಟ

ವಿಚಾರ ತಿಳಿದು ಮಾಜಿ ಸಂಸದ ಶಿವರಾಮಗೌಡ. ಮಾಜಿ ಶಾಸಕ ಮುನವಳ್ಳಿ ಠಾಣೆಗೆ ಆಗಮಿಸಿದ್ದು, ಆರೋಪಿಯ ಬಂಧನಕ್ಕೆ ಆಗ್ರಹಿಸಿ ಠಾಣೆಯಲ್ಲೇ ಕುಳಿತಿದ್ದಾರೆ ಇದರಿಂದ ಅಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಇದನ್ನೂ ಓದಿ: ಗೆಳತಿ ಹಾಗೂ ಸ್ನೇಹಿತರ ಮುಂದೆ ಅಪ್ರಾಪ್ತ ಬಾಲಕನ ಬಿಲ್ಡಪ್: ಪ್ರಶ್ನಿಸಿದ್ದಕ್ಕೆ ಹದಿಹರೆಯದ ಯುವಕನ ಕೊಲೆ

Source link
ಗಂಗಾವತಿಯಲ್ಲಿ ಹಿರಿಯ ವಕೀಲರ ಮೇಲೆ ಮುಸ್ಲಿಂ ಯುವಕನಿಂದ ಹಲ್ಲೆ: ಠಾಣೆಗೆ ಮುತ್ತಿಗೆ ಹಾಕಿದ ವಕೀಲರು