Headlines

‘ಕೊರಗಜ್ಜ’ ಸಿನಿಮಾ ತಂಡದ ವಿರುದ್ಧ ಕೊಡಗಿನ ದೈವಾರಾಧಕರು ಮತ್ತು ನರ್ತಕರು ರೊಚ್ಚಿಗೆದ್ದಿದ್ದೇಕೆ?

‘ಕೊರಗಜ್ಜ’ ಸಿನಿಮಾ ತಂಡದ ವಿರುದ್ಧ ಕೊಡಗಿನ ದೈವಾರಾಧಕರು ಮತ್ತು ನರ್ತಕರು ರೊಚ್ಚಿಗೆದ್ದಿದ್ದೇಕೆ?


ಕೊರಗಜ್ಜ ಸಿನಿಮಾ ತಂಡದ ವಿರುದ್ಧ ಆಕ್ರೋಶ

ಕೊಡಗು, ಜನವರಿ 03: ಕೊರಗಜ್ಜ (ಕೊರಗಜ್ಜ) ತುಳುನಾಡು ಸೇರಿದಂತೆ ಕೊಡಗು (ಕೊಡಗು) ಜಿಲ್ಲೆಯ ಆರಾಧ್ಯ ದೈವ. ಆದರೆ ಇದೇ ದೈವದ ಹೆಸರಲ್ಲಿ ರೀಲ್ಸ್ ಸ್ಪರ್ಧೆಗೆ ‘ಕೊರಗಜ್ಜ’ ಸಿನಿಮಾ ತಂಡ ಕರೆ ನೀಡಿದೆ. ಗೆದ್ದವರಿಗೆ ವಿದೇಶ ಪ್ರವಾಸದ ಜೊತೆ ಒಂದು ಕೋಟಿ ರೂ ಬಹುಮಾನದ ಆಮಿಷವನ್ನೂ ಒಡ್ಡಿದೆ. ‘ಕೊರಗಜ್ಜ’ ಸಿನಿಮಾ ತಂಡ ನಡೆಯುತ್ತಿರುವ ರೀಲ್ಸ್ ಸ್ಪರ್ಧೆಗೆ ಇದೀಗ ಕೊಡಗಿನ ದೈವ ನರ್ತಕರ ಮತ್ತು ಆರಾಧಕರಿಂದ ತೀವ್ರ ಖಂಡನೆ ವ್ಯಕ್ತವಾಗಿದೆ.

ಇತ್ತೀಚೆಗೆ ಮಲೆನಾಡು ಭಾಗದ ಸ್ಥಳೀಯ ದೈವಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿ ಯಶಸ್ಸು ಗಳಿಸಲಿದೆ. ‘ರಂಗಿತರಂಗ’, ‘ಕಾಂತಾರ’ ಮತ್ತು ‘ಕಾಂತಾರ ಚಾಪ್ಟರ್-1’ ಈ ಸಿನಿಮಾ ಭರ್ಜರಿ ಯಶಸ್ಸು ಗಳಿಸಿದ ಸಿನಿಮಾಗಳು. ಇದರ ಬೆನ್ನಲ್ಲೇ ಇದೀಗ ‘ಕೊರಗಜ್ಜ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ತುಳನಾಡಿನ ಆರಾಧ್ಯ ದೈವವಾಗಿರುವ ಕೊರಗಜ್ಜನನ್ನ ಇಟ್ಟುಕೊಂಡು ಈ ಸಿನಿಮಾದಲ್ಲಿ ಕಥೆ ಹೆಣೆಯಲಾಗಿದೆ. ಸದ್ಯ ಈ ಚಿತ್ರತಂಡ ಸಿನಿಮಾದ ಪ್ರಚಾರಕ್ಕಾಗಿ ಇದೀಗ ಕೊರಗಜ್ಜನ ರೀಲ್ಸ್ ಮಾಡುವ ಸ್ಪರ್ಧೆ ನಡೆಯುತ್ತಿದೆ. ಇದಕ್ಕೆ ಭರ್ಜರಿ ಬಹುಮಾನವನ್ನೂ ಇಟ್ಟಿದೆ.

ಇದನ್ನೂ ಓದಿ: ಕಂಬಳ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ ಅದೊಂದು ಘಟನೆ: ಅಷ್ಟಕ್ಕೂ ನಡೆದಿದ್ದೇನು?

ಸಾವಿರಾರು ರೀಲ್ಸ್ ಕೂಡ ಸಿದ್ಧವಾಗಿದೆ. ಆದರೆ ಸಿನಿಮಾ ತಂಡದ ಈ ಪ್ರಚಾರದ ಗಿಮಿಕ್ ಅನ್ನ ಕೊಡಗಿನ ದೈವ ಆರಾಧಕರು ಹಾಗೂ ದೈವ ನರ್ತಕರು ತೀವ್ರವಾಗಿ ಖಂಡಿಸಿದ್ದಾರೆ. ಈ ಮಡಿಕೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಸಂಘದ ಸದಸ್ಯರು ಸಿನಿಮಾ ತಂಡ ಕೀಳು ಅಭಿರುಚಿಗಾಗಿ ಈ ರೀಲ್ಸ್ ಸ್ಪರ್ಧೆಗೆ ಕರೆ ಕೊಟ್ಟಿದೆ ಎಂದು ಟೀಕಿಸಿದ್ದಾರೆ.

ಕೊರಗಜ್ಜ ಸಿನಿಮಾ ತಂಡದ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹ

ಈ ರೀಲ್ಸ್ ಸ್ಪರ್ಧೆ ಯೋಜನೆಯಿಂದ ಸಾವಿರಾರು ಯುವ ಜನತೆ ಬೀದಿ ಬೀದಿಗಳಲ್ಲಿ ಕೊರಗಜ್ಜನ ವೇಷ ಧರಿಸಿ ಕುಣಿಯಲು ಶುರುಮಾಡುತ್ತಾರೆ, ಇದರಿಂದ ದೈವ ನಿಂದನೆಯಾಗುತ್ತದೆ. ದೇವರ ಅಪಹಾಸ್ಯ ಮಾಡಿದಂತಾಗುತ್ತದೆ. ಇದು ಜನಪದ ಕಲೆಯಲ್ಲ. ಬದಲಿಗೆ ದೈವ ಆರಾಧನೆ. ಕೊರಗಜ್ಜನನ್ನ ನಂಬುವ ಕೋಟ್ಯಂತರ ಭಕ್ತರಿದ್ದಾರೆ. ಕೊರಗಜ್ಜನ ರೀಲ್ಸ್ ಮಾಡುವುದರಿಂದ ಇವರೆಲ್ಲರ ನಂಬಿಕೆಗೆ ಘಾಸಿಯಾಗಿದೆ ಎಂದು ದೈವ ಆರಾಧಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊರಗಜ್ಜ ಸಿನಿಮಾ ತಂಡದ ವಿರುದ್ಧ ಫಿಲ್ಮ್ ಚೇಂಬರ್ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ದೈವ ನರ್ತಕ ಮಂಜುನಾಥ್ ಇದ್ದಾರೆ.

ಇದನ್ನೂ ಓದಿ: ಮತ್ತೆ ದೈವಾರಾಧಕರ ಕೋಪಕ್ಕೆ ಗುರಿಯಾದ ರಿಷಬ್; ನಿಯಮಗಳ ವಿರುದ್ಧ ಹೋದ ನಟ?

ಸುಧೀರ್ ಅತ್ತಾವರ ನಿರ್ದೇಶನದ ಈ ಸಿನಿಮಾದ ಕೊರಗಜ್ಜ ಹಾಡುಗಳನ್ನು ಬಳಸಿ ರೀಲ್ಸ್ ಮಾಡುವಂತೆ ಸಿನಿಮಾ ತಂಡ ಕರೆ ನೀಡಿದೆ. ಇದಕ್ಕಾಗಿ ಒಂದು ಕೋಟಿ ರೂ ಬಹುಮಾನ ಮೀಸಲಿಟ್ಟಿದೆ. ಅಂತಿಮ ಮೂರು ಸ್ಪರ್ಧಿಗಳಿಗೆ ವಿದೇಶ ಪ್ರವಾಸದ ಬಹುಮಾನವನ್ನೂ ಘೋಷಿಸಿದೆ. ಅತಿಹೆಚ್ಚು ಲೈಕ್ಸ್ ಗಳಿಸುವ ಸ್ಪರ್ಧಿಗಳಿಗೆ ಈ ಎಲ್ಲಾ ಬಹುಮಾನ ದೊರೆಯಲಿದೆ ಎಂದು ಚಿತ್ರ ತಂಡ ಆಫರ್ ನೀಡಿದೆ. ಆದರೆ ನಂಬಿದವರಿಗೆ ಇಂಬು ನೀಡುವ ದೇವರೆಂದೇ ಖ್ಯಾತಿಯಾಗಿರುವ ಕೊರಗಜ್ಜನನ್ನ ಬಳಸಿ ರೀಲ್ಸ್ ಮಾಡಲು ಹೊರಟಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *