ದಾಖಲೆ ಬರೆದ ಬೆಂಗಳೂರಿನ ಕೋರಮಂಗಲ ಆರ್ಟಿಓ ‌ಕಚೇರಿ: ರಾಜ್ಯದಲ್ಲಿ ನಂ 1, ದೇಶದಲ್ಲಿ 3ನೇ ಸ್ಥಾನ

ದಾಖಲೆ ಬರೆದ ಬೆಂಗಳೂರಿನ ಕೋರಮಂಗಲ ಆರ್ಟಿಓ ‌ಕಚೇರಿ: ರಾಜ್ಯದಲ್ಲಿ ನಂ 1, ದೇಶದಲ್ಲಿ 3ನೇ ಸ್ಥಾನ


ದಾಖಲೆ ಬರೆದ ಬೆಂಗಳೂರಿನ ಕೋರಮಂಗಲ ಆರ್ಟಿಓ ಕಚೇರಿ: ರಾಜ್ಯದಲ್ಲಿ ನಂ 1, ದೇಶದ 3ನೇ ಸ್ಥಾನ

ಬೆಂಗಳೂರು, ಏಪ್ರಿಲ್ 03: ಸದಾ ಒಂದಿಲ್ಲೊಂದು ನೆಗೆಟಿವ್ ಸುದ್ದಿಯಲ್ಲಿರುವ ಬೆಂಗಳೂರಿನ ಸೆಂಟ್ರಲ್ ಆರ್ ಟಿಓ (ಕೋರಮಂಗಲ ಆರ್‌ಟಿಒ) ಕಚೇರಿ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಆದರೆ ಈ ಬಾರಿ ನೆಗೆಟಿವ್ ವಿಚಾರವಾಗಿ ಹೊಸ ದಾಖಲೆ ಯಾವುದಾದರೂ ಬರೆದಿದೆ. ದೇಶದಲ್ಲೇ ಅತೀ ಹೆಚ್ಚು ಆದಾಯ ಗಳಿಸಿದ 3ನೇ ಅತಿದೊಡ್ಡ ಆರ್ ಟಿಓ ಕಚೇರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಒಂದಿಲ್ಲೊಂದು ಅಕ್ರಮ, ಹಗರಣದ ಆರೋಪದಲ್ಲಿ ಸುದ್ದಿಯಾಗುವ ಬೆಂಗಳೂರಿನ ಸೆಂಟ್ರಲ್ ಕೋರಮಂಗಲದಲ್ಲಿ ಇದೀಗ ದೇಶದಲ್ಲೇ ಹೊಸ ದಾಖಲೆ ಬರೆದಿದ್ದು, ಈ ಬಾರಿ ಆರ್ ಕೆಎ-01 ಕೋರಮಂಗಲ ಆರ್ಟಿಓ ಆದಾಯ ಗಳಿಸುವುದರಲ್ಲಿ ನಂ-1 ಬಂದಿದೆ. ದೇಶದಲ್ಲೇ ಅತಿಹೆಚ್ಚು ರಾಜಸ್ವ ಸಂಗ್ರಹ ಮಾಡಿದ 3ನೇ ಅತಿದೊಡ್ಡ ಆರ್ ಟಿಓ ಕಚೇರಿ ಎಂಬ ದಾಖಲೆ ಬರೆದಿದೆ.

ಇದನ್ನೂ ಓದಿ; ಮೈಸೂರು ದಾಖಲೆ: ಸರಕು ಸಾಗಣೆ-ಪಾರ್ಸೆಲ್, ಟಿಕೆಟ್ ಪರಿಶೀಲನೆಯಲ್ಲಿ ಕೋಟ್ಯಂತರ ರೂ ಆದಾಯ

ಇತ್ತ ರಾಜ್ಯದಲ್ಲಿ ಅತಿಹೆಚ್ಚು ಆದಾಯ ಗಳಿಸಿದ ಮೊದಲ KA-01 ಆರ್ ಟಿಓ ಎಂಬ ದಾಖಲೆಯನ್ನು ನಿರ್ಮಿಸಲಾಗಿದೆ. 2025-26 ಆರ್ಥಿಕ ವರ್ಷದ ಕೋರಮಂಗಲ ಆರ್ ಟಿಓ ಕಚೇರಿ ಬರೋಬ್ಬರಿ 1273 ಕೋಟಿ ರೂ ರಾಜಸ್ವ ಸಂಗ್ರಹ ಮಾಡಿದೆ.

ಯಾವ ಆರ್ಟಿಓ ಕಚೇರಿಗೆ ಯಾವ ಸ್ಥಾನ

ಇನ್ನು ದೇಶದ ಮೊದಲ ಸ್ಥಾನವನ್ನು ಮಹಾರಾಷ್ಟ್ರದ ಪುಣೆ ಆರ್ ಟಿಓಸಲು 1900 ಕೋಟಿ ರೂ ಆದಾಯ ಗಳಿಸಿದ್ದಾರೆ. 150 ಕೋಟಿ ರೂ ರಾಜಸ್ವ ಸಂಗ್ರಹ ಮಾಡುವ ಮೂಲಕ ಮಹಾರಾಷ್ಟ್ರದ ಪಿಂಪ್ರಿ ಆರ್ಟಿಓ ಕಚೇರಿ ಎರಡನೇ ಸ್ಥಾನದಲ್ಲಿದೆ. 1273 ಕೋಟಿ ರೂ ಆದಾಯ ಗಳಿಸುವ ಮೂಲಕ ಕೋರಮಂಗಲ ಆರ್ ಟಿಓ ರಾಜ್ಯದಲ್ಲೇ ಅತಿ ಹೆಚ್ಚು ರಾಜಸ್ವ ಸಂಗ್ರಹ ಮಾಡಿದ ಆರ್ ಟಿಓ ಕಚೇರಿಯಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಹೊಸ ಫ್ಲೈಓವರ್ ನಿರ್ಮಾಣಕ್ಕೆ ಮುಂದಾದ ಜಿಬಿಎ: ಎಲ್ಲಿಂದ ಎಲ್ಲಿಗೆ ಸಂಪರ್ಕ?

ದೇಶದಲ್ಲಿ 110 ಆರ್ ಟಿಓ ಕಚೇರಿಗಳ ಮೇಲಿಂದ ಕೋರಮಂಗಲ ಆರ್ಟಿಓ ಕಚೇರಿ 3ನೇ ಸ್ಥಾನ ಪಡೆದಿದೆ. ಫ್ಯಾನ್ಸಿ ನಂಬರ್, ಪರ್ಮಿಟ್, ಎಫ್‌ಸಿ ನವೀಕರಣ, ವಾಹನ ಸೇರಿದಂತೆ ಹಲವು ರೀತಿಯ ಆರ್‌ಟಿಓ ಸೇವೆಗಳಿಂದ ಅತಿಹೆಚ್ಚು ರಾಜಸ್ವ ಗಳಿಸಿದೆ.

ಒಟ್ಟಿನಲ್ಲಿ ಈ ಬಾರಿಯ ಆರ್ಥಿಕ ವರ್ಷದಲ್ಲಿ 1273 ಆದಾಯ ಗಳಿಸುವ ಮೂಲಕ ದೇಶದಲ್ಲೇ ಮೂರನೇ ಸ್ಥಾನ ಪಡೆದಿದ್ದು, ಬರುವ ಆರ್ಥಿಕ ವರ್ಷದಲ್ಲಿ ಎರಡನೇ ಸ್ಥಾನ ಪಡೆಯುವ ಗುರಿ ಹಾಕಿಕೊಂಡಿರುವುದು ವಿಶೇಷ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *