
ಕೊರಿಯನ್ ಸಿನಿಮಾಗಳು (ಸಿನಿಮಾ) ವಿಶ್ವದಾದ್ಯಂತ ಮೋದಿ ಮಾಡಿದ್ದಾರೆ. ವಿಶ್ವದಲ್ಲಿಯೇ ಅತ್ಯುತ್ತಮ ಸಿನಿಮಾಗಳನ್ನು ನಿರ್ಮಿಸುವ ದೇಶಗಳಲ್ಲಿ ಕೊರಿಯಾ ಸಹ ಒಂದು. ಕೋವಿಡ್ ನಂತರದ ಒಟಿಟಿ ಕ್ರಾಂತಿಯ ಬಳಿಕವಂತೂ ಕೊರಿಯನ್ ಸಿನಿಮಾಗಳೂ ಸಣ್ಣ ಪುಟ್ಟ ನಗರ-ಪಟ್ಟಣ ತಲುಪಿವೆ. ಕೊರಿಯನ್ ಶೋಗಳು, ಕೊರಿಯನ್ ಹಾಡುಗಳು ಭಾರತದಲ್ಲಿಯೂ ಸಹ ಸಖತ್ ಜನಪ್ರಿಯ. ಇತ್ತೀಚೆಗಿನ ‘ಸ್ಕ್ವಿಡ್ ಗೇಮ್ಸ್’ ವೆಬ್ ಸರಣಿ ಸಹ ಭಾರಿ ಹಿಟ್ ಆಗಿದೆ. ಇದೀಗ ಈ ‘ಸ್ಕ್ವಿಡ್ ಗೇಮ್’ ಸೇರಿದಂತೆ ಕೊರಿಯಾದ ಹಲವು ಸಿನಿಮಾ, ಶೋಗಳಲ್ಲಿ ನಟಿಸಿರುವ ಸ್ಟಾರ್ ನಟ ಕನ್ನಡದ ‘ಕೆಜಿಎಫ್’ ಸಿನಿಮಾದ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ.
‘ಸ್ಕ್ವಿಡ್ ಗೇಮ್ಸ್’, ‘ದಿ ಚೇಸ್’, ‘ಮಿಡ್ ನೈಟ್’ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿರುವ ಕೊರಿಯಾದ ಸ್ಟಾರ್ ನಟರಲ್ಲಿ ಒಬ್ಬರು ವಿಹಾ ಜೂನ್ ಅವರು ಇತ್ತೀಚೆಗೆ ಭಾರತಕ್ಕೆ ಬಂದಿದ್ದ ಭಾರತೀಯ ಸಿನಿಮಾಗಳ ಬಗ್ಗೆ ಮಾತನಾಡುತ್ತಾ ಮೊದಲು ‘ಕೆಜಿಎಫ್’ ಸಿನಿಮಾದ ಬಗ್ಗೆ. ‘ನನಗೆ ಕೆಲವು ಭಾರತೀಯ ಸಿನಿಮಾಗಳ ಪರಿಚಯ ಇದೆ. ಕೆಲವು ಸಿನಿಮಾಗಳನ್ನು ನೋಡಿದ್ದೇನೆ. ‘ಕೆಜಿಎಫ್’ ಸಿನಿಮಾ ನನಗೆ ಬಹಳ ಇಷ್ಟ. ಅದೊಂದು ಅದ್ಭುತವಾದ ಬಹಳ ಅದ್ಧೂರಿಯಾದ ಆಕ್ಷನ್ ಸಿನಿಮಾ. ಬಹಳ ಇಂಟೆನ್ಸ್ ಆದ ಆಕ್ಷನ್ ಮತ್ತು ಸನ್ನಿವೇಶಗಳನ್ನು ಆ ಸಿನಿಮಾ ಹೊಂದಿದೆ’.
‘ಕೆಜಿಎಫ್’ ಸಿನಿಮಾ ಅದ್ಧೂರಿ ಸ್ಕೇಲ್ ಹೊಂದಿರುವ ಸೀಟಿನ ತುದಿಗೆ ಕೂರಿಸುವ ಸಿನಿಮಾ, ಅಷ್ಟೇ ಮನೋರಂಜನಾತ್ಮಕವೂ ಇದೆ. ನಾನು ಸಹ ಅಂಥಾ ಒಂದು ಅದ್ಧೂರಿ ಮತ್ತು ಇಂಟೆನ್ಸ್ ಆಗಿರುವ ಆಕ್ಷನ್ ಸಿನಿಮಾದಲ್ಲಿ ನಟಿಸಲು ಕಾತರದಿಂದ ಕಾಯುತ್ತಿದ್ದೀನಿ. ನನಗೆ ಅಂಥಹ ಸಿನಿಮಾಗಳಲ್ಲಿ ನಟಿಸುವ ಆಸೆ ಇದೆ. ಅದು ಮಾತ್ರವೇ ಅಲ್ಲದೆ ವಿಶ್ವದಾದ್ಯಂತ ಜನಪ್ರಿಯವಾಗಿರುವ ‘3 ಇಡಿಯಟ್ಸ್’ ಸಿನಿಮಾವನ್ನು ಸಹ ನಾನು ಈ ಮೆನ್ಷನ್ ಮಾಡಲೇಬೇಕು. ಅದು ಬಹಳ ಮನೋರಂಜನಾತ್ಮಕ ಮತ್ತು ಅಷ್ಟೆ ಹಾಸ್ಯಮಯ ಸಿನಿಮಾ ಅದರ ಜೊತೆಗೆ ಸಮಾಜಕ್ಕೆ ಒಂದು ಅದ್ಭುತವಾದ ಸಂದೇಶವನ್ನು ಹೊಂದಿದೆ’ ಎಂದು ಅವರು ಹೇಳಿದರು.
ಇದನ್ನೂ ಓದಿ:RCB: ವಿವಾದದ ನಡುವೆ ಗುಟ್ಟಾಗಿ ಸಪ್ತಪದಿ ತುಳಿದ ಆರ್ಸಿಬಿ ವೇಗಿ ಯಶ್ ದಯಾಳ್
ಕನ್ನಡದ ಸಿನಿಮಾಗಳು ಕರ್ನಾಟಕದ ಗಡಿಯನ್ನೇ ದಾಟಿದ ಸಮಯವೊಂದಿತ್ತು. ಆದರೆ ಈಗ ವಿಶ್ವದ ಗಡಿಯನ್ನು ದಾಟಿದೆ, ಭಾರತೀಯ ಸಿನಿಮಾಗಳ ಬಗ್ಗೆ ಮಾತನಾಡುವಾಗ ವಿದೇಶಿ ನಟನೊಬ್ಬ ‘ಕೆಜಿಎಫ್’ ಅನ್ನು ಉದಾಹರಣೆಯಾಗಿ ನೀಡುವುದು ‘ಕೆಜಿಎಫ್’ ಸಿನಿಮಾ ಸೃಷ್ಟಿಸಿರುವ ಪ್ರಭಾವಕ್ಕೆ ಅದ್ಭುತ ಉದಾಹರಣೆಯಾಗಿದೆ. ‘ಕೆಜಿಎಫ್’ ಮೂಲಕ ಯಶ್ ಮತ್ತು ಪ್ರಶಾಂತ್ ನೀಲ್ ಅದ್ಭುತವನ್ನೇ ಸೃಷ್ಟಿಸಿದ್ದಾರೆ. ಆ ಸಿನಿಮಾದ ಮೂಲಕ ಮನೋರಂಜನಾ ಕ್ಷೇತ್ರದಲ್ಲಿ ಕರ್ನಾಟಕದ ಹೆಸರು ದೇಶ-ವಿದೇಶಗಳಿಗೆ ವಿಸ್ತರಿಸಿದೆ.
ಈಗ ಯಶ್ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದು ಅದೇ ‘ಟಾಕ್ಸಿಕ್’ ಈ ಸಿನಿಮಾವನ್ನು ಸಹ ಅವರು ಅಂತರಾಷ್ಟ್ರೀಯ ಸಿನಿಮಾ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಿದ್ದಾರೆ. ಸಿನಿಮಾವನ್ನು ಗೀತು ಮೋಹನ್ ದಾಸ್ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಯಶ್ ಮತ್ತು ಕೆವಿಎನ್ ಬಂಡವಾಳ ಹೂಡಿದ್ದು, ಸಿನಿಮಾ ಜೂನ್ 04 ರಂದು ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ