ಶಿವಮೊಗ್ಗ: ಪತ್ನಿಯ ಸಾವಿಗೆ ಕಾರಣವಾಗಿ ಕೆಲವು ತಿಂಗಳುಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಪಾಂಡಿಚೆರಿಯಲ್ಲಿ ಬಂಧಿಸಿದ್ದಾರೆ. ಯಾವುದೇ ಮೊಬೈಲ್, ಡಿಜಿಟಲ್ ಉಪಕರಣ ಬಳಸದ ಎಂಜಿನಿಯರ್ ಅನ್ನು ಪೊಲೀಸರು ಪಾಂಡಿಚೆರಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪತ್ನಿಯ ಸಾವಿನ ಪ್ರಕರಣ ಪ್ರಮುಖ ಆರೋಪಿಯಾಗಿರುವ ಶಿಕಾರಿಪುರದ ದಿಂಡನಹಳ್ಳಿಯ ಕೆಪಿಸಿಎಲ್ ಎಇಇ ಗುರುರಾಜ್‌ನನ್ನು ಹೊಳೆಹೊನ್ನೂರು ಪೊಲೀಸರು ಪಾಂಡಿಚೆರಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ನವೆಂಬರ್ 25ರಂದು ಕೆಪಿಸಿಎಲ್ ಎಇಇ ಗುರುರಾಜ್ ಅವರ ಮನೆಯವರ ಕಿರುಕುಳ ತಾಳಲಾರದೇ ಡಿ.ಬಿ. ಹಳ್ಳಿಯ ನವವಿವಾಹಿತೆ ಲತಾ, ಹಂಚಿನ ಸಿದ್ದಾಪುರ ಬಳಿ ಭದ್ರಾ ನಾಲೆಗೆ ಹಾರಿ ಆತ್ಮ*ಹತ್ಯೆ ಮಾಡಿಕೊಂಡಿದ್ದರು.

ಇದಾಗಿ ಎರಡು ದಿನಗಳ ನಂತರ ಲತಾ ಅವರ ಶವ ಚನ್ನಗಿರಿ ತಾಲೂಕಿನ ಕಣಿವೆಬಿಳಚಿ ಗ್ರಾಮದ ಭದ್ರಾ ನಾಲೆಯಲ್ಲಿ ಸಿಕ್ಕಿತ್ತು. ಇದಾದ ಬಳಿಕ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ಕಳೆದ ವರ್ಷ ಏಪ್ರಿಲ್‌ನಲ್ಲಿ ಶಿಕಾರಿಪುರ ತಾಲೂಕು ದಿಂಡದಹಳ್ಳಿ ಗ್ರಾಮದ ಗುರುರಾಜ್‌ನನ್ನು ಭದ್ರಾವತಿ ತಾಲೂಕಿನ ಡಿ.ಬಿ ಹಳ್ಳಿಯ ಪರಮೇಶ್ವರಪ್ಪ ಮತ್ತು ರುದ್ರಮ್ಮ ದಂಪತಿಯ ಪುತ್ರಿ ಲತಾ ಮದುವೆಯಾಗಿದ್ದರು.

ಮದುವೆಯಾದ ಏಳು ತಿಂಗಳಲ್ಲಿ ಗಂಡನ ಮನೆಯವರಿಂದ ನಾನಾ ರೀತಿಯ ಹಿಂಸೆ ಅನುಭವಿಸಿದ್ದೇನೆ. ನನ್ನ ಸಾವಿಗೆ ಪತಿ ಹಾಗೂ ಆತನ ಕುಟುಂಬಸ್ಥರೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಳು. ಅಂದಿನಿಂದ ಪತಿ ಎಂಜಿನಿಯರ್ ಗುರುರಾಜ್ ತಲೆಮರೆಸಿಕೊಂಡಿದ್ದ.

ಇನ್ನು ಮೊಬೈಲ್ ಸೇರಿ ಡಿಜಿಟಲ್ ಉಪಕರಣ ಬಳಸದ ಚಾಲಾಕಿ ಗುರುರಾಜ್ ವಿಶಾಖಪಟ್ಟಣಂ, ಚೆನ್ನೈ, ತಮಿಳುನಾಡು, ಕೇರಳ, ಗೋವಾದಲ್ಲಿ ಸ್ಥಳ ಬದಲಿಸಿ ಪೊಲೀಸರ ದಿಕ್ಕು ತಪ್ಪಿಸಿದ್ದಾನೆ.

ಆದರೆ ತನ್ನದೇ ಶೈಲಿಯಲ್ಲಿ ತನಿಖೆ ನಡೆಸಿದ ಹೊಳೆಹೊನ್ನೂರು ಪೊಲೀಸರು ಕೊನೆಗೂ ಪಾಂಡಿಚೇರಿಯಲ್ಲಿ ಗುರುರಾಜ್ ಅವರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದಂತೆ ಪ್ರಕರಣದ ಇತರ ಆರೋಪಿಗಳಾದ ನಾಗರತ್ನಮ್ಮ, ರಾಜೇಶ್ವರಿ, ಶಾರದಮ್ಮ ಹಾಗೂ ಕೃಷ್ಣಪ್ಪ ತಲೆಮರೆಸಿ ಕೊಂಡಿದ್ದಾರೆ.

Source link
ಪತ್ನಿ ಕೊಂದು ತಲೆಮರೆಸಿಕೊಂಡಿದ್ದ ಚಾಲಾಕಿ ಎಂಜಿನಿಯರ್ ಪಾಂಡಿಚೆರಿಯಲ್ಲಿ ಲಾಕ್! ಮೊಬೈಲ್ ಬಳಸದ ಈತ ಸಿಕ್ಕಿಬಿದ್ದಿದ್ದೇ ರೋಚಕ ಸ್ಟೋರಿ