ಬಾಗಲಕೋಟೆ, ಡಿಸೆಂಬರ್ 23: ಎರಡು ವರ್ಷದ ಗಂಡು ಮಗುವಿನ ಸಮೇತ ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ (ಆತ್ಮಹತ್ಯೆ ಯತ್ನ) ತಾಯಿಯನ್ನು 112 ಪೊಲೀಸರ ಕ್ಷಿಪ್ರ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿರುವಂತಹ ಜಿಲ್ಲೆಯ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ (ಚಿಕ್ಕಪಡಸಲಗಿ) ಬ್ರಿಡ್ಜ್ ಬಳಿ ನಡೆದಿದೆ. ಸುರೇಖಾ ಭಜಂತ್ರಿ ಮಗುವಿನೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿ. ಸದ್ಯ ಮಹಿಳೆಯನ್ನು ಸಾವಳಗಿ ಠಾಣೆಗೆ ಕರೆತಂದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ನಡೆದಿದ್ದೇನು?
ಸುರೇಖಾ ಭಜಂತ್ರಿ ತಮ್ಮ ಎರಡು ವರ್ಷದ ಗಂಡು ಮಗುವಿನ ಸಮೇತ ಚಿಕ್ಕಪಡಸಲಗಿ ಕೃಷ್ಣಾ ನದಿ ಬ್ರಿಡ್ಜ್‌ನಿಂದ ಹಾರಲು ಮುಂದಾಗಿದ್ದರು. ಈ ವೇಳೆ ಮಲ್ಲು ಕಲ್ಯಾಣಿ ಸ್ಥಳೀಯರು ಗಮನಿಸಿ 112 ಪೊಲೀಸರಿಗೆ ಕರೆ ಮಾಡಿದ್ದಾರೆ. ತಕ್ಷಣ ಬಂದ ಪೊಲೀಸರು ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆದಿದ್ದಾರೆ.
ಇದನ್ನೂ ಓದಿ: ಮಗುವಿಗೆ ಜನ್ಮ ನೀಡಿದ 10ನೇ ತರಗತಿ ವಿದ್ಯಾರ್ಥಿನಿ: ಶಾಲಾ ಬಸ್ ಚಾಲಕನಿಂದಲೇ ನೀಚ ಕೃತ್ಯ
ಸದ್ಯ ಮಹಿಳೆ ವಿಚಾರಣೆ ನಡೆಸುತ್ತಿರುವ ಗಂಡನ ಮನೆಗೆ ಕರೆ ಮಾಡಿ. ಠಾಣೆಗೆ ಬಂದ ಪತಿ ತಮ್ಮ ಪತ್ನಿ ಮತ್ತು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಮಹಿಳೆ ಮಾನಸಿಕ ಸ್ಥಿತಿ ಕಳೆದುಕೊಂಡಿದ್ದಾರೆ.
ಕುಟುಂಬ ಕಲಹದಿಂದ ಬೇಸತ್ತು ವ್ಯಕ್ತಿ ನೇಣಿಗೆ ಶರಣು
ಕುಟುಂಬ ಕಲಹದಿಂದ ಮಾನಸಿಕವಾಗಿ ಮನನೊಂದಿದ್ದ ವ್ಯಕ್ತಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ನಡೆದಿದೆ.
ಇದನ್ನೂ ಓದಿ: ಬೆಳ್ಳಂ ಬೆಳಗ್ಗೆ ಬಿರಿಯಾನಿ ತಿನ್ನಲು ಹೋದವರಿಗೆ ಭರ್ಜರಿ ಶಾಕ್ : ಕಾಲೇಜು ವಿದ್ಯಾರ್ಥಿಗಳ ಅಡ್ಡಗಟ್ಟಿ ದರೋಡೆ
ಪಟ್ಟಣದ ರೇಷ್ಮೆ ಹುರಿ ಘಟಕದ ಅದರ ಚಿಂತಾಮಣಿ ಮೂಲದ ಕಲ್ಯಾಣ್ ಕುಮಾರ್ ( 35 ) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಕಳೆದ ದಿನಗಳಿಂದ ಮನೆಯಲ್ಲಿ ಜಗಳ ಮಾಡಿಕೊಂಡ ಕೌಟುಂಬಿಕ ಕಲಹದಿಂದ ಮನನೊಂದು ಮೂರು ದಿನಗಳ ಹಿಂದೆ ವಿಜಯಪುರಕ್ಕೆ ಬಂದು ಮರಕ್ಕೆ ನೇಣುಬಿಗಿದುಕೊಂಡು ಸಾವನ್ನಪಿರುವ ಶಂಕೆ ವ್ಯಕ್ತವಾಗಿದೆ. ಶವವನ್ನ ಕಂಡ ಸ್ಥಳ ವಿಜಯಪುರ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳ ಪರಿಶೀಲನೆ ನಡೆಸಿದ ವಿಜಯಪುರ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.