
ಬೆಂಗಳೂರು, (ಮಾರ್ಚ್ 17): 2025-26ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ-1 (SSLC ಪರೀಕ್ಷೆ) ನಾಳೆಯಿಂದ ಮಾರ್ಚ್ 18 ರಿಂದ ಏಪ್ರಿಲ್ 2 ರ ವರೆಗೆ ನಡೆಯಲಿದ್ದು, ಅಂದರೆ ನಿಮ್ಮ ವಿದ್ಯಾರ್ಥಿಗಳ ಪರೀಕ್ಷೆಗೆ (ಎಕ್ಸಾಂ) ಬರೆಯಲು ಸಜ್ಜಾಗಿದ್ದಾರೆ. ಇನ್ನು ವಿದ್ಯಾರ್ಥಿಗಳ ಪರೀಕ್ಷಾ ಪ್ರಯಾಣವನ್ನು ಸುಗಮಗೊಳಿಸಲು ಕೆಎಸ್ ಆರ್ ಟಿಸಿ ಉಚಿತವಾಗಿ ಪ್ರಯಾಣಿಸಿದ್ದು, ಹಾಲ್ ಟಿಕೆಟ್ ತೋರಿಸಿ ಬಸ್ ನಲ್ಲಿ ಪ್ರಯಾಣಿಸಬಹುದು. ಇನ್ನು ಪರೀಕ್ಷೆಗೆ ಹೋಗುವ ಮಕ್ಕಳಿಗೆ ಕಂಡಕ್ಟರ್ ಮನ ಮಿಡಿದಿದ್ದು, ಡ್ರೈವರ್ ಸಾಹೇಬ್ರೆ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹೋಗುವ ವಿದ್ಯಾರ್ಥಿಗಳು ಎಲ್ಲ ಕೈ ಮಾಡಿದರೂ ಬಸ್ ನಿಲ್ಲಿಸಿ ಎಂದು ಕಂಡಕ್ಟರ್ ಹೇಳಿದ್ದಾರೆ, ಸದ್ಯ ಈ ವಿಡಿಯೋ ಫುಲ್ ವೈರಲ್ ಆಗಿದೆ. ಇನ್ನು 10ನೇ ತರಗತಿ ಪರೀಕ್ಷೆ ಬರೆಯುವ ಮಕ್ಕಳ ಬಗ್ಗೆ ನಿರ್ವಾಹಕ ಆಡಿದ ಮಾತು ಹೇಗಿದೆ ಕೇಳಿ.