ನಕಲಿ ದಾಖಲೆ ಸೃಷ್ಟಿಸಿ ಕೆಎಸ್​ಆರ್​ಟಿಸಿ ಸಿಬ್ಬಂದಿ ವರ್ಗಾವಣೆ: ಪರಿಶೀಲನೆ ಬಳಿಕ ಅಸಲಿ ಸತ್ಯ ಬಯಲು

ನಕಲಿ ದಾಖಲೆ ಸೃಷ್ಟಿಸಿ ಕೆಎಸ್​ಆರ್​ಟಿಸಿ ಸಿಬ್ಬಂದಿ ವರ್ಗಾವಣೆ: ಪರಿಶೀಲನೆ ಬಳಿಕ ಅಸಲಿ ಸತ್ಯ ಬಯಲು


ಬೆಂಗಳೂರು, ಫೆಬ್ರವರಿ 16: ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದ್ದರು ಕೆಎಸ್ ಆರ್ ಟಿಸಿ (KSRTC) ಸಿಬ್ಬಂದಿ ವರ್ಗಾವಣೆ (ವರ್ಗಾವಣೆ) ನಡೆದಿರುವಂತಹ ಘಟನೆಯೊಂದು ನಡೆದಿದೆ. ಬೆಂಗಳೂರು ದಕ್ಷಿಣ ವಿಭಾಗದ ಮಾಗಡಿ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಚಾಲಕ ಕಂ ನಿರ್ವಾಹಕ ಎಂ.ಜಯದೇವರನ್ನು ಏಕಾಏಕಿ ಮಂಗಳೂರಿಗೆ ವರ್ಗಾವಣೆ ಮಾಡಲಾಗಿದೆ. ಸದ್ಯ ಪರಿಶೀಲನೆ ವೇಳೆ ಯಾರೋ ಇವರ ಹೆಸರಿನಲ್ಲಿ ವರ್ಗಾವಣೆ ಅರ್ಜಿ ಸಲ್ಲಿಸಿರುವುದು, ವಿಧಾನಸೌಧ ಠಾಣೆಯಲ್ಲಿ ಸಚಿನ್ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?

ಬೆಂಗಳೂರು ದಕ್ಷಿಣ ವಿಭಾಗದ ಮಾಗಡಿ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎಂ.ಜಯದೇವರನ್ನು ಏಕಾಏಕಿ ಮಂಗಳೂರಿಗೆ ವರ್ಗಾವಣೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಶಿಫಾರಸಿನ ಮೇಲೆ ವರ್ಗಾವಣೆ ಆಗುತ್ತಿದೆ.

ಇದನ್ನೂ ಓದಿ: ಪ್ರಯಾಣಿಕರಿಗೆ ಶಾಕ್ ಕೊಟ್ಟ ಕೆಎಸ್ ಆರ್ ಟಿಸಿ: ಇಂದಿನಿಂದಲೇ ಈ ದರ ಏರಿಕೆ

ವರ್ಗಾವಣೆ ಬಗ್ಗೆ ಅನುಮಾನ ಹಿನ್ನೆಲೆ ಜಯದೇವ ಪರಿಶೀಲನೆ ನಡೆಸಿದ್ದಾರೆ. ವಿಧಾನಸೌಧದ ಸಚಿವರ ಕಚೇರಿಗೆ ಭೇಟಿ ನೀಡಿದ್ದ ಸಿಬ್ಬಂದಿ, ಜಯದೇವ ಹೆಸರಿನಲ್ಲಿ ಸಚಿವರು ಶಿಫಾರಸು ಮಾಡಿ ಪತ್ರ ನೀಡಿರುವುದು. ಹೀಗಾಗಿ ನಾನು ವರ್ಗಾವಣೆ ಕೋರಿ ಮನವಿ ಪತ್ರ ಸಲ್ಲಿಸಿಲ್ಲ. ಯಾರೋ ನನ್ನ ಹೆಸರಿನ ಮನವಿ ಪತ್ರ ಸಲ್ಲಿಸಿದ್ದಾರೆ ಎಂದು ವಿಧಾನಸೌಧ ಠಾಣೆಗೆ ಜಯದೇವ ದೂರು ನೀಡಿದ್ದಾರೆ.

ದೂರಿನಲ್ಲೇನಿದೆ?

ಈ ಹಿಂದೆ ನಾನು (ಜಯದೇವ) ಬೆಂಗಳೂರು ಕೇಂದ್ರೀಯ ವಿಭಾಗದ 6ನೇ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ದಿನಾಂಕ 11.11.2025 ರಂದು ಮುಖ್ಯ ಸಂಚಾರ ವ್ಯವಸ್ಥಾಪಕರಾದ ಅಂತೋಣಿ ಜಾರ್ಜ್ ರವರು ನನ್ನನ್ನು ಏಕಾಏಕಿ ಬೆಂಗಳೂರು ಕೇಂದ್ರೀಯ ದಿಂದ ಮಂಗಳೂರು ವರ್ಗಾವಣೆ ಮಾಡಿದ್ದೇನೆ. ಈ ಬಗ್ಗೆ ಪರಿಶೀಲನೆ ನಡೆಸಿದಾಗ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರ ಶಿಫಾರಸ್ಸಿನ ಬಗ್ಗೆ ನನ್ನ ವರ್ಗಾವಣೆಯಾಗಿದೆ ಎಂದು ತಿಳಿಯಿತು.

ಇದನ್ನೂ ಓದಿ: ಬಿಗ್ ಶಾಕ್ ಕೊಟ್ಟ KSRTC: ನಾಳೆಯಿಂದಲೇ ನೂತನ ಪರಿಷ್ಕೃತ ದರ ಜಾರಿಗೆ ಬಂದಿದೆ

ನಂತರ ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿಗೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಆರ್ ಟಿಐ ಮೂಲಕ ಅರ್ಜಿ ಸಲ್ಲಿಸಿ ದಾಖಲಾತಿಗಳನ್ನು ಸ್ವೀಕರಿಸಿ ನನ್ನ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ನಾನು ಕೋರಿರುವ ಕೌಟುಂಬಿಕ ಸಮಸ್ಯೆ ಹಿನ್ನಲೆಯಲ್ಲಿ ಬೆಂಗಳೂರು ಕೇಂದ್ರೀಯ ವಿಭಾಗದಿಂದ ಮಂಗಳೂರು ವರ್ಗಾವಣೆ ಮಾಡಲು ದಿನಾಂಕ 24.09.2025 ರಂದು ಮನವಿ ಸಲ್ಲಿಸಿ, ಸಚಿವರ ನಡಾವಳಿ ಪತ್ರವನ್ನು ಸ್ವೀಕರಿಸಿ ಮನವಿ ಸಲ್ಲಿಸಿದರು. ಸೃಷ್ಟಿಸಿ, ಸಚಿವರ ಕಚೇರಿಗೆ ಸಲ್ಲಿಸಿ ವರ್ಗಾವಣೆಗೆ ಕಾರಣವಾಗಿರುವ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *