ಕೆಎಸ್‌ಆರ್‌ಟಿಸಿಗೆ ರಾಷ್ಟ್ರಮಟ್ಟದ ‘ಸ್ಕಾಚ್’ ಗೌರವ: ಪಾರದರ್ಶಕ ನೇಮಕಾತಿ ಮತ್ತು ತರಬೇತಿಗೆ ಸಂದ ದೊಡ್ಡ ಜಯ!

ಕೆಎಸ್‌ಆರ್‌ಟಿಸಿಗೆ ರಾಷ್ಟ್ರಮಟ್ಟದ ‘ಸ್ಕಾಚ್’ ಗೌರವ: ಪಾರದರ್ಶಕ ನೇಮಕಾತಿ ಮತ್ತು ತರಬೇತಿಗೆ ಸಂದ ದೊಡ್ಡ ಜಯ!


ಕೆಎಸ್‌ಆರ್‌ಟಿಸಿಗೆ ರಾಷ್ಟ್ರಮಟ್ಟದ 'ಸ್ಕಾಚ್' ಗೌರವ: ಪಾರದರ್ಶಕ ನೇಮಕಾತಿ ಮತ್ತು ತರಬೇತಿಗೆ ಸಂದ ದೊಡ್ಡ ಜಯ!

ಬೆಂಗಳೂರು, ಮಾ.28: ನಿಗಮವು ತನ್ನ “ ಪಾರದರ್ಶಕ ನೇಮಕಾತಿ ಮತ್ತು ಪರಿಣಾಮಕಾರಿ ತರಬೇತಿ ಕಾರ್ಯಕ್ರಮ”ಕ್ಕೆ ಪ್ರತಿಷ್ಠಿತ ಸ್ಕೋಚ್ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದೆ. ನಿಗಮವು ಅರ್ಜಿ ಸಲ್ಲಿಕೆಯಿಂದ ಆಯ್ಕೆ ಪ್ರಕ್ರಿಯೆ, ಘಟಕ ನಿಯೋಜನೆ ವರೆಗೆ ನೇಮಕಾತಿಯಲ್ಲಿ ಪಾರದರ್ಶಕತೆ ಮತ್ತು ಏಕರೂಪತೆಯನ್ನು ಕಾಪಾಡುವ ಮೂಲಕ ಮಾನವ ಹಸ್ತಕ್ಷೇಪವನ್ನು ನಿಲ್ಲಿಸಲಾಗಿದೆ.

ತಂತ್ರಜ್ಞಾನ ಆಧಾರಿತ ನೇಮಕಾತಿ ವ್ಯವಸ್ಥೆ, ಸ್ವಯಂ ಚಾಲಿತ ಚಾಲಿತ ಪರೀಕ್ಷೆ, ಆನ್‌ಲೈನ್ ಪರೀಕ್ಷೆಗಳು, ದಾಖಲೆಗಳ ಡಿಜಿಟಲ್ ಪರಿಶೀಲನೆ, ವೆಬ್ ಕ್ಯಾಸ್ಟಿಂಗ್, ಅಟೋ ಜನರೇಟಡ್ ಅಂಕಪಟ್ಟಿ ನೀಡುವ ಮೂಲಕ 2000 ಚಾಲಕ/ ನಿರ್ವಾಹಕರು, 300 ತಾಂತ್ರಿಕ ಸಿಬ್ಬಂದಿಗಳು, 441 ಅನುಕಂಪದ ಆಧಾರದಲ್ಲಿ ಹುದ್ದೆಗಳಿಗೆ ನೇಮಕಾತಿ ಮಾಡಲಾಗಿದೆ. ಇದಲ್ಲದೆ, ಕಳೆದ ಆರು ತಿಂಗಳಲ್ಲಿ ಸುಮಾರು 12,000 ಕ್ಕೂ ಹೆಚ್ಚು ಸಿಬ್ಬಂದಿಗೆ ಪರಿಣಾಮಕಾರಿ ತರಬೇತಿ ನೀಡಲಾಯಿತು, ನಿಗಮದ ಸಮಗ್ರ ವಿಷಯ ನಿರೂಪಣೆಯಲ್ಲಿನ ಬದಲಾವಣೆಗೆ ಸಹಕಾರಿಯಾಗಿದೆ.

ದೆಹಲಿ ಮೂಲದ ಸ್ಕಾಚ್ ಸಂಸ್ಥೆಯು ಸ್ವತಂತ್ರ ವಿಚಾರ ತಜ್ಞ ವೇದಿಕಾ ಸಂಸ್ಥೆ ಹೊಂದಿದ್ದು, 1997 ರಲ್ಲಿ ಸ್ಥಾಪಿತವಾಗಿದೆ. ಈ ಸಂಸ್ಥೆಯು 2003 ರಿಂದ ಸ್ಕಾಚ್ ಪ್ರಶಸ್ತಿಯನ್ನು ದೇಶದ ಸಂಸ್ಥೆಗಳು ಸಾಧಿಸಿರುವ ಉತ್ತಮ ಆಡಳಿತ ನಿರ್ವಹಣೆ, ಹಣಕಾಸು, ತಾಂತ್ರಿಕ ಅಳವಡಿಕೆ, ಪಾರದರ್ಶಕ ನೀತಿ, ಯೋಜನೆ, ಆಂತರಿಕ ಬೆಳವಣಿಗೆಗಾಗಿ ನೀಡುತ್ತಿರುವ ವಿವಿಧ ಕೊಡುಗೆಗಳು ಉತ್ತಮ ಸಾಧನೆ ಮತ್ತು ಅವುಗಳಿಂದ ಉಂಟಾಗುವ ಪರಿಣಾಮಗಳನ್ನು ಆಯ್ಕೆ ಮಾಡಿ.

ಇದನ್ನೂ ಓದಿ: ಇದು ರೈತನ ವಿಭಿನ್ನ ರಾಮನವಮಿ ಸೆಲೆಬ್ರೇಶನ್; ಹೂಕೋಸಿನಲ್ಲಿ ಮೂಡಿ ಬಂದ ರಾಮ, ಸೀತೆ, ಹನುಮಂತ

ಇಂದು, ಸ್ಕಾಚ್ ಸಂಸ್ಥೆಯು ದೆಹಲಿಯ, ಸಿಲ್ವರ್ ಓಕ್ ಹಾಲ್, ಇಂಡಿಯಾ ಹ್ಯಾಬಿಟೇಟ್ ಸೆಂಟರ್ ನಲ್ಲಿ ನಡೆಯುತ್ತಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶ್ರೀ ಅಕ್ರಂ ಪಾಷಾ, ಭಾಸೇ, ವ್ಯವಸ್ಥಾಪಕ ನಿರ್ದೇಶಕರು, ಕೆಎಸ್ಆರ್ ಟಿಸಿ ರವರು ಶ್ರೀ. ಸಮೀರ್ ಕೊಚ್ಚರ್‌, ಅಧ್ಯಕ್ಷರು ಸ್ಕಾಚ್ ಫೌಂಡೇಶನ್, ಡಾ.ಗುರುಚರಣ್ ಧಂಜಾಲ್, ಉಪಾಧ್ಯಕ್ಷರು, ಸ್ಕಾಚ್ ಗ್ರೂಪ್ ರವರಿಂದ ಸ್ವೀಕರಿಸಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *