
ಒಂದೆಡೆ ‘ದಿ ಕೇರಳ ಸ್ಟೋರಿ 2’ ಸಿನಿಮಾಗೆ ಭಾರಿ ವಿರೋಧವಿದೆ. ಇನ್ನೊಂದೆಡೆ ರಿಯಲ್ ಕೇರಳ ಸ್ಟೋರಿ ನಡೆದಿದೆ. ಮುಸ್ಲಿಂ ಪ್ರಿಯಕರ ಮೊಹಮ್ಮದ್ ಫರ್ಮಾನ್ ಜೊತೆ ಮೊನಾಲಿನಾ ಭೋಸ್ಲೆ (ಮೊನಾಲಿಸಾ ಭೋಸ್ಲೆ) ಮದುವೆ ನಡೆದಿದೆ. ತಮ್ಮ ವಿವಾಹಕ್ಕೆ ಕೇರಳವೇ ಸೂಕ್ತ ಮತ್ತು ಸುರಕ್ಷಿತ ಸ್ಥಳ ಎಂದು ತೀರ್ಮಾನಿಸಿ ಮೊನಾಲಿಸಾ ಮತ್ತು ಫರ್ಮಾನ್ ಅವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಹಿಂದೂ ದೇವಾಲಯದಲ್ಲಿ ಈ ಜೋಡಿಯ ಮದುವೆ ನಡೆದಿದೆ. ಮೊನಾಲಿಸಾಗೆ ಫರ್ಮಾನ್ ಅವರು ತಾಳಿ ಕಟ್ಟಿ, ಕುಂಕುಮ ಇಟ್ಟಿದ್ದಾರೆ. ಕೇರಳದ ಸ್ಥಳೀಯ ಜನರು ಮತ್ತು ರಾಜಕೀಯ ಸಂಸ್ಥೆ ಈ ಮದುವೆಗೆ ಬೆಂಬಲ ನೀಡಿದೆ. ನವ ದಂಪತಿಗಳಿಗೆ ಕೇರಳ ಭದ್ರತೆ ಒದಗಿಸಿದ್ದಾರೆ. ಸುದ್ದಿಗೋಷ್ಠಿ ನಡೆಸಿದ ಮೊನಾಲಿಸಾ ಮತ್ತು ಮೊಹಮ್ಮದ್ ಫರ್ಮಾನ್ (ಮುಹಮ್ಮದ್ ಫರ್ಮಾನ್) ಅವರು ‘ರಿಯಲ್ ಕೇರಳ ಸ್ಟೋರಿ’ ಎಂಬ ಫಲಕವನ್ನು ಪ್ರದರ್ಶಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.