Kumbha Sankramana 2026: ಇಂದು ಕುಂಭ ರಾಶಿಗೆ ಸೂರ್ಯ ಪ್ರವೇಶ; ಮಾ.15 ರವರೆಗೆ ಈ ರಾಶಿಯವರು ಜಾಗರೂಕರಾಗಿರಿ

Kumbha Sankramana 2026: ಇಂದು ಕುಂಭ ರಾಶಿಗೆ ಸೂರ್ಯ ಪ್ರವೇಶ; ಮಾ.15 ರವರೆಗೆ ಈ ರಾಶಿಯವರು ಜಾಗರೂಕರಾಗಿರಿ


2026 ರ ಫೆಬ್ರವರಿ 13 ರಂದು, ಸಂಜೆ 4 ಗಂಟೆ 14 ನಿಮಿಷಕ್ಕೆ ಸೂರ್ಯ ಕುಂಭ ರಾಶಿಗೆ ಪ್ರವೇಶ ಮಾಡಲಿದೆ. ಇದನ್ನು ಕುಂಭ ಸಂಕ್ರಮಣ ಎಂದು ಕರೆಯಲಾಗುತ್ತದೆ. ಈ ಸಂಚಾರವು ಮುಂದಿನ ತಿಂಗಳು ಮಾರ್ಚ್ 15 ರವರೆಗೆ ಮುಂದುವರಿಯಲಿದೆ. ಈ ಅವಧಿಯಲ್ಲಿ ದ್ವಾದಶ ರಾಶಿಗಳ ಮೇಲೆ ಸೂರ್ಯನ ಈ ಸಂಚಾರ ಯಾವ ರೀತಿ ಪ್ರಭಾವ ಬೀರಲಿದೆ ಎಂಬುದನ್ನು ತಿಳಿದುಕೊಳ್ಳಿ.

ಮೇಷ ರಾಶಿ:

ಮೇಷ ರಾಶಿಯವರಿಗೆ ಸೂರ್ಯನ ಈ ಸಂಚಾರವು 11ನೇ ಮನೆಯಲ್ಲಿ ನಡೆಯುವುದರಿಂದ ಆರ್ಥಿಕವಾಗಿ ಮತ್ತು ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿದೆ. ಬಹಳಷ್ಟು ಶುಭ ಫಲಗಳು ಲಭಿಸುತ್ತವೆ.

ವೃಷಭ ರಾಶಿ:

ವೃಷಭ ರಾಶಿಯವರಿಗೆ ಸೂರ್ಯನ 10ನೇ ಮನೆ, ಅಂದರೆ ಕರ್ಮಸ್ಥಾನದಲ್ಲಿ ಸಂಚಾರವು ಉದ್ಯೋಗದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರುತ್ತದೆ. ಕೆಲಸಗಳಲ್ಲಿ ಶುಭವಾಗುವುದು, ವ್ಯಾಪಾರದಲ್ಲಿ ಲಾಭ, ಹಳೆಯ ಬಾಕಿ ವಸೂಲಿ ಮತ್ತು ಸಾಲ ಮಂಜೂರಿಯಾಗುತ್ತದೆ. ವೃತ್ತಿಯಲ್ಲಿ ಪ್ರಗತಿ ಕಾಣುತ್ತಾರೆ. ಆರೋಗ್ಯದ ವಿಷಯದಲ್ಲಿ ಉದಾಸೀನತೆ ಬೇಡ.

ಮಿಥುನ ರಾಶಿ:

ಮಿಥುನ ರಾಶಿಯವರಿಗೆ ಕುಂಭ ಸಂಕ್ರಮಣವು ಭಾಗ್ಯಸ್ಥಾನದಲ್ಲಿ ನಡೆಯುತ್ತಿದೆ. ಪ್ರವಾಸ ಯೋಗ ಕೂಡಿ ಬರುತ್ತದೆ. ತಂದೆ ತಾಯಿಗಳ ಪರಿಪೂರ್ಣ ಆಶೀರ್ವಾದ ಸಿಗುತ್ತದೆ. ರೈತಾಪಿ ವರ್ಗದವರಿಗೆ ಒಳಿತಾಗುತ್ತದೆ. ಅದೃಷ್ಟವೂ ಜೊತೆಗೂಡಲಿದೆ.

ಕರ್ಕಾಟಕ ರಾಶಿ:

ಕರ್ಕಾಟಕ ರಾಶಿಯವರಿಗೆ ಅಷ್ಟಮ ಸ್ಥಾನದಲ್ಲಿ ಸೂರ್ಯನ ಸಂಚಾರವಿರುತ್ತದೆ. ಎಂಟನೇ ಸೂರ್ಯನ ಮನೆಯಲ್ಲಿ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನು ತರಬಹುದಾದ್ದರಿಂದ ಜಾಗರೂಕರಾಗಿರಬೇಕು.

ಸಿಂಹ ರಾಶಿ:

ಸಿಂಹ ರಾಶಿಯವರಿಗೆ ಸಪ್ತಮ ಸ್ಥಾನದಲ್ಲಿ ಸೂರ್ಯ ಸಂಚಾರವು ಇದೆ. ಇದು ಶನಿಯ ಮನೆಯಾಗದ ಗಂಡ-ಹೆಂಡತಿಯರ ಜಗಳ, ಪಾಲುದಾರಿಕೆಯಲ್ಲಿ ಮತ್ತು ವ್ಯವಹಾರಗಳಲ್ಲಿ ಸ್ವಲ್ಪ ಜಾಗರೂಕರಾಗಿರಿ.

ಕನ್ಯಾ ರಾಶಿ:

ಕನ್ಯಾ ರಾಶಿಯವರಿಗೆ ಸೂರ್ಯನ ಸಂಚಾರವು ಆರನೇ ಮನೆಯಲ್ಲಿ ನಡೆಯುವುದರಿಂದ ತುಂಬಾ ಅದೃಷ್ಟ ತರಲಿದೆ. ಸಾಕಷ್ಟು ಶುಭಫಲಗಳು ಸಿಗುತ್ತವೆ. ಆರೋಗ್ಯದಲ್ಲಿ ಕಾಣಿಸಿಕೊಂಡಿದೆ. ಔಷಧಿ ವ್ಯಾಪಾರಿಗಳಿಗೆ ಮತ್ತು ಆರೋಗ್ಯ ಇಲಾಖೆಯಲ್ಲಿರುವವರಿಗೆ ಬಹಳ ಉತ್ತಮವಾಗಿದೆ.

ತುಲಾ ರಾಶಿ:

ತುಲಾ ರಾಶಿಯವರಿಗೆ ಐದನೇ ಮನೆಯಲ್ಲಿ ಸೂರ್ಯನ ಸಂಚಾರವು ಮಿಶ್ರ ಫಲಗಳನ್ನು ನೀಡುತ್ತದೆ. ಆದರೂ ಆರ್ಥಿಕವಾಗಿ, ಕೀರ್ತಿ ಮತ್ತು ಪ್ರತಿಷ್ಠೆಯ ವಿಷಯದಲ್ಲಿ ಉತ್ತಮ ಫಲಗಳು ಇರುತ್ತವೆ.

ವೃಶ್ಚಿಕ ರಾಶಿ:

ವೃಶ್ಚಿಕ ರಾಶಿಯವರಿಗೆ ನಾಲ್ಕನೇ ಮನೆ, ಅಂದರೆ ಅರ್ಧಾಷ್ಟಮದಲ್ಲಿ ರವಿಯ ಸಂಚಾರದ ಮನೆ ಅಥವಾ ಸೈಟಿನ ವಿಚಾರದಲ್ಲಿ, ಸಣ್ಣಪುಟ್ಟ ಸಮಸ್ಯೆಗಳು ಮತ್ತು ತಂದೆ-ತಾಯಿಗಳ ವಿಷಯದಲ್ಲಿ ಜಾಗರೂಕರಾಗಿರಲು ಹೇಳಲಾಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವವರು ಮತ್ತು ವಾಹನ ಚಾಲನೆಯಲ್ಲಿ ಜಾಗ್ರತೆ ವಹಿಸಬೇಕು.

ಧನುಸ್ಸು ರಾಶಿ:

ಧನುಸ್ಸು ರಾಶಿಯವರಿಗೆ ಮೂರನೇ ಮನೆಯಲ್ಲಿ ಸೂರ್ಯನ ಸಂಚಾರದಿಂದ ಬಹಳಷ್ಟು ಶುಭಫಲಗಳು ದೊರೆಯುವ ಸಾಧ್ಯತೆ ಇದೆ. ಅದೃಷ್ಟವೂ ಜೊತೆಗೂಡಲಿದೆ

ಇದನ್ನೂ ಓದಿ: ಜೀವನವನ್ನೇ ಬದಲಾಯಿಸುವ ಮಹಾನ್ ಶಕ್ತಿ ಮಹಾಲಕ್ಷ್ಮೀ ರಾಜಯೋಗದ ಬಗ್ಗೆ ಮಾಹಿತಿ ಇಲ್ಲಿದೆ

ಮಕರ ರಾಶಿ:

ಮಕರ ರಾಶಿಯವರಿಗೆ ದ್ವಿತೀಯ ಸ್ಥಾನದಲ್ಲಿ ಸೂರ್ಯ ಭಗವಾನ್‌ರ ಸಂಚಾರವು ಭಯದ ವಾತಾವರಣವನ್ನು ದೂರ ಮಾಡುತ್ತದೆ. ಕೆಲಸಕಾರ್ಯಗಳಲ್ಲಿ ಶುಭವಾಗುವುದು, ರೈತಾಪಿ ವರ್ಗದವರಿಗೆ ಒಳ್ಳೆಯದಾಗುತ್ತದೆ. ವ್ಯಾಪಾರ ವ್ಯವಹಾರಗಳು ಉತ್ತಮ ಮತ್ತು ಕುಟುಂಬ ಸಮಸ್ಯೆಗಳು ಕೂಡ ಬಗೆಹರಿಯುತ್ತವೆ.

ಕುಂಭ ರಾಶಿ:

ಕುಂಭ ರಾಶಿಯವರಿಗೆ ಜನ್ಮರಾಶಿಯಲ್ಲಿಯೇ ರವಿಯ ಸಂಚಾರದ ಫಲಾಫಲಗಳನ್ನು ನೋಡಿದಾಗ, ವಿವಾಹ ವಿಷಯಗಳಲ್ಲಿ ಶುಭವಾಗುವುದು ಮತ್ತು ಪ್ರಯತ್ನಗಳಿಗೆ ತಕ್ಕ ಫಲ ಸಿಗುತ್ತದೆ. ಆದರೆ ಆತ್ಮಸ್ಥೈರ್ಯ ಸ್ವಲ್ಪ ಕಡಿಮೆಯಾಗುವ ಸಾಧ್ಯತೆಯಿದೆ. ಭಯದ ವಾತಾವರಣವೂ ಉಂಟಾಗಬಹುದು.

ಮೀನ ರಾಶಿ:

ಮೀನ ರಾಶಿಯವರಿಗೆ 12ನೇ ಮನೆ, ಅಂದರೆ ದುಸ್ಥಾನದಲ್ಲಿ ರವಿಯ ಸಂಚಾರವು ಅನಗತ್ಯ ಟೆನ್ಷನ್‌ಗಳನ್ನು ಕಡಿಮೆ ಮಾಡಿಕೊಳ್ಳಬೇಕು. ಆದಷ್ಟು ಆರಾಮಾಗಿ, ಸಂತೃಪ್ತಿಯಿಂದ ಇರಬೇಕು. ಅಪವಾದಗಳು ಮತ್ತು ಕೆಟ್ಟ ಜನರ ಸಹವಾಸದಿಂದ ದೂರವಿದ್ದರೆ ಉತ್ತಮ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *