Headlines

ದಯವಿಟ್ಟು ಕಾಪಾಡಿ: ಮದ್ವೆಯಾದ ವಾರದಲ್ಲೇ ಲೈವ್​ಗೆ ಬಂದು ಕುಂಭಮೇಳ ಮೊನಾಲಿಸಾ ಕಣ್ಣೀರು- ಆಗಿದ್ದೇನು?

ದಯವಿಟ್ಟು ಕಾಪಾಡಿ: ಮದ್ವೆಯಾದ ವಾರದಲ್ಲೇ ಲೈವ್​ಗೆ ಬಂದು ಕುಂಭಮೇಳ ಮೊನಾಲಿಸಾ ಕಣ್ಣೀರು- ಆಗಿದ್ದೇನು?

ದಯವಿಟ್ಟು ಕಾಪಾಡಿ: ಮದ್ವೆಯಾದ ವಾರದಲ್ಲೇ ಲೈವ್​ಗೆ ಬಂದು ಕುಂಭಮೇಳ ಮೊನಾಲಿಸಾ ಕಣ್ಣೀರು- ಆಗಿದ್ದೇನು?

ಕುಂಭಮೇಳದಲ್ಲಿ ‘ರುದ್ರಾಕ್ಷಿ ಲೇಡಿ’ ಎಂದು ವೈರಲ್ ಆಗಿದ್ದ ಮೊನಾಲಿಸಾ, ಮುಸ್ಲಿಂ ಯುವಕ ಫರ್ಮಾನ್ ಖಾನ್ ಅವರನ್ನು ವಿವಾಹವಾಗಿದ್ದು, ಇದು ‘ಲವ್ ಜಿಹಾದ್’ ಚರ್ಚೆಗೆ ಕಾರಣವಾಗಿದೆ. ಜೀವ ಬೆದರಿಕೆ ಎದುರಿಸುತ್ತಿರುವ ದಂಪತಿ ರಕ್ಷಣೆ ಕೋರಿದ್ದಾರೆ.

ಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಾ ಕಣ್ಣುಗಳಿಂದಲೇ ವೈರಲ್​ ಆಗಿ ಇಡೀ ದೇಶದಲ್ಲಿ ಹಲ್​ಚಲ್​ ಸೃಷ್ಟಿಸಿದ್ದ ಮೊನಾಲಿಸಾ (Kumbhamala Monalisa) ಇದೀಗ ಮತ್ತೊಮ್ಮೆ ಸದ್ದು ಮಾಡುತ್ತಿದ್ದಾರೆ. ಮುಸ್ಲಿಂ ಯುವಕನನ್ನು ಪ್ರೀತಿಸಿ ಮದುವೆಯಾಗಿರೋ ಮೋನಿ ಬಗ್ಗೆ ಇದಾಗಲೇ ವಾದ-ಪ್ರತಿವಾದ-ವಿವಾದ ಎಲ್ಲವೂ ಶುರುವಾಗಿಬಿಟ್ಟಿದೆ.

ಫರ್ಮಾನ್​ ಖಾನ್​ ಎನ್ನುವ ನಟನನ್ನು ಪ್ರೀತಿಸಿ ಮದುವೆಯಾಗಿರುವ ಮೊನಾಲಿಸಾದ್ದು ಲವ್​ ಜಿಹಾದ್ ಎಂದು ಬಹುದೊಡ್ಡ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ಇದಾಗಲೇ ಈ ದಂಪತಿ ಈ ಬಗ್ಗೆ ಸ್ಪಷ್ಟಪಡಿಸಿದ್ದೂ ಆಗಿದೆ. ಮೊನಾಲಿಸಾ ತಾನೇ ಖುದ್ದಾಗಿ ಲವ್​ ಮಾಡಿ, ಮದುವೆಗೆ ಒತ್ತಾಯಿಸಿದ್ದು, ಇದರಲ್ಲಿ ತಮ್ಮ ಪತಿಯ ತಪ್ಪಿಲ್ಲ ಎಂದಿದ್ದಾರೆ.

ಫರ್ಮಾನ್ ಖಾನ್​ ಕೂಡ ನಾನು ಇವಳನ್ನು ಮತಾಂತರ ಮಾಡುವುದಿಲ್ಲ. ಅವಳೇ ಒತ್ತಾಯ ಮಾಡಿದ್ದಕ್ಕೆ ಮದುವೆಯಾದೆ ಎಂದಿದ್ದಾರೆ.

ಇದೀಗ ಮದುವೆಯಾದ ವಾರದಲ್ಲಿಯೇ ಜೋಡಿ ಲೈವ್​ಗೆ ಬಂದಿದೆ. ಮೊನಾಲಿಸಾ ಜೀವ ರಕ್ಷಣೆ ಕೋರಿದ್ದಾರೆ. ನಮ್ಮನ್ನು ಕಾಪಾಡಿ. ಸಾರ್ವಜನಿಕರಿಂದ ನಮಗೆ ಜೀವ ಭಯ ಉಂಟಾಗಿದೆ. ಸೋಷಿಯಲ್​ ಮೀಡಿಯಾಗಳಲ್ಲಿ, ಮೊಬೈಲ್​ ಮೂಲಕ ನಮ್ಮನ್ನು ಸಾ*ಯಿಸುವುದಾಗಿ, ಕ*ತ್ತರಿಸುವುದಾಗಿ ಜೀವ ಬೆದರಿಕೆ ಹಾಕಲಾಗುತ್ತಿದೆ. ಈ ಬಗ್ಗೆ ಪೊಲೀಸರು, ಮಾಧ್ಯದವರ ಗಮನಕ್ಕೆ ತಂದಿದ್ದೇವೆ. ದಯವಿಟ್ಟು ನಮ್ಮನ್ನು ಕಾಪಾಡಿ ಎಂದು ಕೋರಿಕೊಂಡಿದ್ದಾರೆ ಮೊನಾಲಿಸಾ.

ಆದರೆ, ಇವೆಲ್ಲವುಗಳ ನಡುವೆಯೇ, ಮೊನಾಲಿಸಾ ಅಪ್ಪ ಜೈ ಸಿಂಗ್​ ಭೋಸ್ಲೆ ಹೇಳ್ತಿರೋದೇ ಬೇರೆ. ನನ್ನ ಮಗಳಿಗೆ ಬ್ರೈನ್​ವಾಷ್​ ಮಾಡಲಾಗಿದೆ. ಏನೇನೋ ಮಾತನಾಡುತ್ತಾಳೆ. ಕೆಲವು ತಿಂಗಳ ಹಿಂದೆ ಸರಿಯಾಗಿಯೇ ಇದ್ದಳು. ಈಗ ಏಕಾಏಕಿ ಈ ನಿರ್ಧಾರ ತೆಗೆದುಕೊಂಡಿದ್ದಾಳೆ. ಇದು ಸಿಕ್ಕಾಪಟ್ಟೆ ಅನುಮಾನ ಮೂಡಿಸುತ್ತಿದೆ ಎಂದು ಕಣ್ಣೀರು ಹಾಕಿದ್ದಾರೆ.

ನನ್ನ ಮಗಳು ನನ್ನನ್ನೇ ಧಿಕ್ಕರಿಸಿದಳು. ನಮ್ಮ ವಿರುದ್ಧವೇ ಪೊಲೀಸ್​ ರಕ್ಷಣೆ ಕೋರಿದಳು. ಅವಳು ನಮಗೆ ವಾಪಸ್​ ಬೇಕು. ಅವಳ ದಿಕ್ಕನ್ನು ತಪ್ಪಿಸಲಾಗಿದೆ. ಅವಳಿಗೆ ಏನೋ ಆಗುತ್ತಿದೆ. ಏನೂ ಸರಿಯಿಲ್ಲ ಎಂದು ಎನ್ನಿಸುತ್ತಿದೆ ಎಂದಿದ್ದಾರೆ ಅಪ್ಪ.

Source link

Leave a Reply

Your email address will not be published. Required fields are marked *