Headlines

ಬಾಯ್​​ಫ್ರೆಂಡ್ ಜೊತೆ ಕೇರಳದಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಕುಂಭಮೇಳ ಮೊನಲಿಸ

ಬಾಯ್​​ಫ್ರೆಂಡ್ ಜೊತೆ ಕೇರಳದಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಕುಂಭಮೇಳ ಮೊನಲಿಸ


ಬಾಯ್ ಫ್ರೆಂಡ್ ಜೊತೆ ಕೇರಳದ ಪೊಲೀಸ್ ಠಾಣೆ ಮೆಟ್ಟಿಲೇರಿದ ಕುಂಭಮೇಳ ಮೊನಲಿಸ

ಕುಂಭಮೇಳದಲ್ಲಿ ರುದ್ರಾಕ್ಷ ಮಾಲೆ ಮಾರುತ್ತಿದ್ದ ಯುವತಿ ಮೊನಲಿಸಾ ಭೋಸ್ಲೆಯ (ಮೊನಾಲಿಸಾ) ಒಂದೇ ಒಂದು ಚಿತ್ರ ವೈರಲ್ ಆಗಿ ಆಕೆಯ ಅದೃಷ್ಟವೇ ಬದಲಾಗಿ ಹೋಯ್ತು. ಯಾವ ಮಟ್ಟಿಗೆ ಚಿತ್ರ ವೈರಲ್ ಆಯ್ತೆಂದರೆ ಅದೊಂದು ಚಿತ್ರದಿಂದಾಗಿ ಮೊನಲಿಸಾ ಬೋಸ್ಲೆಗೆ ಸಿನಿಮಾ ಅವಕಾಶಗಳು ಅರಸಿ ಬಂದಿದ್ದು, ಇದೀಗ ಮೊನಲಿಸಾ ಬೋಸ್ಲೆ ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೆ ಇದೀಗ ಮೊನಲಿಸಾ ಭೋಸ್ಲೆ, ಕೇರಳದಲ್ಲಿ ತಮ್ಮ ಬಾಯ್‌ಫ್ರೆಂಡ್ ಜೊತೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಮೊನಿಸಲಾ ಭೋಸ್ಲೆ ಪ್ರಸ್ತುತ ಸಿನಿಮಾ ಒಂದರ ಚಿತ್ರೀಕರಣಕ್ಕಾಗಿ ಕೇರಳಕ್ಕೆ ಬಂದಿದ್ದರು. ಆದರೆ ಇದೀಗ ಅವರು ತಿರುವನಂತಪುರದ ತಂಪನೂರು ಪೊಲೀಸ್ ಠಾಣೆಗೆ ಭೇಟಿ ನೀಡಿದ್ದು, ತಮ್ಮ ಪೋಷಕರ ವಿರುದ್ಧವೇ ದೂರು ನೀಡಿದ್ದಾರೆ. ತಮ್ಮ ಬೆಂಬಲ ತಮಗೆ ಬಲವಂತದ ಮದುವೆ ಮಾಡಲು ಯತ್ನಿಸಿದ್ದಾರೆ, ಈ ಬಲವಂತದ ಮದುವೆಯಿಂದ ತಮಗೆ ರಕ್ಷಣೆ ಕೊಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಮೂಲತಃ ಮಧ್ಯಪ್ರದೇಶದ ಇಂದೋರ್ ನವರಾದ ಮೊನಾಲಿಸಾ ಭೋಂಸ್ಲೆ, ಫರ್ಮಾನ್ ಖಾನ್ ಎಂಬುವವರನ್ನು ಪ್ರೀತಿಸಿದ್ದು, ಅವರೊಟ್ಟಿಗೆ ಮದುವೆ ಆಗಿರುವುದಾಗಿ ಹೇಳಿದ್ದಾರೆ. ಆದರೆ ಅವರ ಅನುಮತಿ ಮೋನಸಿಲಾಗೆ ಬೇರೆ ಮದುವೆ ಮಾಡಲು ನಿರ್ಧರಿಸಿದ್ದು, ತಾವು ನೋಡಿದ ವರನೊಡನೆ ಮದುವೆ ಆಗುವಂತೆ ಒತ್ತಾಯ ಮಾಡಿದ್ದಾರಂತೆ. ಇದೇ ಕಾರಣಕ್ಕೆ ಅವರು ತಮ್ಮ ಬಾಯ್ ಫ್ರೆಂಡ್ ಜೊತೆಗೆ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ.

ಮೊನಾಲಿಸಾ ಮತ್ತು ಮಹಾರಾಷ್ಟ್ರ ಮೂಲದ ಫರ್ಮಾನ್ ಖಾನ್ ಕಳೆದ ಒಂದೂವರೆ ವರ್ಷದಿಂದ ಪ್ರೀತಿಸುತ್ತಿದ್ದಾರೆ. ಇವರ ಅಂತರ್ಧರ್ಮೀಯ ವಿವಾಹಕ್ಕೆ ಮೊನಾಲಿಸಾ ಅವರ ತಂದೆ ವಿಜಯ್ ಸಿಂಗ್ ಭೋಂಸ್ಲೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ . ಪೊಲೀಸರ ಮುಂದೆ ದೂರು ನೀಡಿರುವ ಮೊನಲಿಸಾ, ತಮಗೆ ಯಾವುದೇ ದೈಹಿಕ ಹಿಂಸೆ ನಡೆದಿಲ್ಲವಾದರೂ, ಮಾನಸಿಕವಾಗಿ ಒತ್ತಡ ಹೇರುವುದರಿಂದ ಅವರಿಗೆ ರಕ್ಷಣೆ ನೀಡಲಾಗಿದೆ.

ಇದನ್ನೂ ಓದಿ:ಕುಂಭಮೇಳ ‘ಮೊನಾಲಿಸಾ’ ಮೊದಲ ಸಿನಿಮಾ ಬಂದ್, ನಿರ್ದೇಶಕನಿಂದ ಮೋಸ?

ಮೊನಾಲಿಸಾ ಅವರ ದೂರನ್ನು ಸ್ವೀಕರಿಸಿರುವ ಪೊಲೀಸರು, ಆಕೆ ವಯಸ್ಕಳಾಗಿರುವುದರಿಂದ ತನ್ನ ಜೀವನದ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಅವಳಿಗೆ ಇದೆ ಎಂದು. ಆಕೆಯ ತಂದೆಯನ್ನು ಕರೆಸಿ ಮಾತುಕತೆ ಅಗತ್ಯ. ಈ ಪ್ರೇಮಿಗಳಿಗೆ ಕೇರಳದ ಸ್ಥಳೀಯ ರಾಜಕೀಯ ನಾಯಕರು ಬೆಂಬಲ ನೀಡಿದ್ದಾರೆ. ಇಂದು ಸಂಜೆ ಕೇರಳದ ವಿಝಿಂಜಂನಲ್ಲಿರುವ ಒಂದು ದೇವಸ್ಥಾನದಲ್ಲಿ ಇವರು ವಿವಾಹವಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಮಾರಂಭದಲ್ಲಿ ಕೆಲವು ಪ್ರಮುಖ ರಾಜಕಾರಣಿಗಳು ಕೂಡ ಭಾಗವಹಿಸುವ ಸಾಧ್ಯತೆ ಇದೆ.

ಕುಂಭಮೇಳದಲ್ಲಿ ವೈರಲ್ ಆದ ನಂತರ ಮೊನಾಲಿಸಾಗೆ ಹಲವು ಸಿನಿಮಾಗಳ ಅವಕಾಶ ಬಂದಿತ್ತು. ಸದ್ಯ ಅವರು ‘ನಾಗಮ್ಮ’ ಎಂಬ ಮಲಯಾಳಂ ಸಿನಿಮಾ ಹಾಗೂ ‘ಲೈಫ್’ ಎಂಬ ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *