ಕ್ವಾಟ್ಲೆ ಕಿಚನ್ ಶೋನ ಗ್ರ್ಯಾಂಡ್ ಫಿನಾಲೆ ಪ್ರಸಾರ ಆಗುತ್ತಿದೆ. ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಭಾಗವಹಿಸುವ 3 ಸ್ಪರ್ಧಿಗಳ ಹೆಸರನ್ನು ಕ್ವಾಟ್ಲೆ ಕಿಚನ್ ಗ್ರ್ಯಾಂಡ್ ಫಿನಾಲೆಯಲ್ಲಿ ರಿವೀಲ್ ಮಾಡಲಾಗುವುದು ಎಂದು ಮೊದಲೇ ಮಾಹಿತಿಯಿತ್ತು. ಹಾಗಾದರೆ ಅವರು ಯಾರು?

ಸಲಗ, ಮಾದೇವ, ಟಗರು ಮುಂತಾದ ಸ್ಟಾರ್ ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸಿರುವ ಕಾಕ್ರೋಚ್ ಸುಧಿ ಅವರು ಡೈಲಾಗ್ ಹೇಳೋದರಲ್ಲಿ ಪಂಟರ್. ಅವರೀಗ ಬಿಗ್ ಬಾಸ್ ಮನೆ ಪ್ರವೇಶ ಮಾಡಲಿದ್ದಾರಂತೆ.

ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಮಂಜುಭಾಷಿಣಿ ಅವರು ಭಾಗವಹಿಸಲಿದ್ದಾರೆ. ಕಳೆದ ಬಾರಿ ಇದೇ ಧಾರಾವಾಹಿಯಿಂದ ನಟಿ ಹಂಸ ಪ್ರತಾಪ್ ಅವರು ಭಾಗವಹಿಸಿದ್ದರು. ಈ ಬಾರಿ ಮಂಜುಭಾಷಿಣಿ ಅವರು ಭಾಗವಹಿಸುತ್ತಿರೋದು ವಿಶೇಷವಾಗಿದೆ.

ಗಿಲ್ಲಿ ನಟ ಕೂಡ ಈ ಶೋನಲ್ಲಿ ಭಾಗಿಯಾಗಲಿದ್ದಾರೆ. ಕಳೆದ ಎರಡು ಸೀಸನ್‌ಗಳಿಂದಲೂ ಗಿಲ್ಲಿ ನಟ ಭಾಗವಹಿಸಲಿದ್ದಾರೆ ಎನ್ನಲಾಗಿತ್ತು. ಈಗ ಇವರು ಈ ಶೋನಲ್ಲಿ ಭಾಗವಹಿಸೋದು ಪಕ್ಕಾ ಆಗಿದೆ. ಪ್ರಾಪರ್ಟಿ ಕಾಮಿಡಿ ಅವರು ನಗಿಸಿದ್ದರು, ಅಚ್ಚರಿ ಎಂಬಂತೆ ಡ್ಯಾನ್ಸ್ ಕೂಡ ಮಾಡಿದ್ದರು.

ಕರ್ನಾಟಕ ರಕ್ಷಣಾ ವೇದಿಕೆ ಕೆಲಸಗಳಲ್ಲಿ ಭಾಗಿಯಾಗಿರುವ ಅಶ್ವಿನಿ ಗೌಡ ಅವರು ಬಿಗ್ ಬಾಸ್ ಶೋನಲ್ಲಿ ಭಾಗವಹಿಸಲಿದ್ದಾರೆ. 50 ಧಾರಾವಾಹಿ, ಸಿನಿಮಾ ಎಂದು ಅವರು ಚಿತ್ರರಂಗದಲ್ಲಿ ಆಕ್ಟಿವ್ ಆಗಿದ್ದರು. ಈ ಬಾರಿ ಅವರು ದೊಡ್ಮನೆ ಪ್ರವೇಶ ಮಾಡಿದ್ದಾರೆ.

ಡಾಗ್ ಸತೀಶ್ ಎಂದೇ ಖ್ಯಾತಿ ಪಡೆದಿರುವವರು ಕೂಡ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರಂತೆ. ಇವರ ಬಳಿ ದುಬಾರಿ ಬೆಲೆಯ ಶ್ವಾನಗಳು ಇವೆ. ಈ ಹಿಂದೆ ಒಮ್ಮೆ ಶ್ವಾನವನ್ನು ದುಬಾರಿ ಬೆಲೆ ಶ್ವಾನ ಎಂದು ಯಾಮಾರಿಸಿದ್ದರು ಎಂಬ ಕಾಂಟ್ರವರ್ಸಿ ಸೃಷ್ಟಿಯಾಗಿತ್ತು.

Source link
'ಕ್ವಾಟ್ಲೆ ಕಿಚನ್' ಗ್ರ್ಯಾಂಡ್ ಫಿನಾಲೆಯಲ್ಲಿ Bigg Boss Kannada 12 ಶೋ ಸ್ಪರ್ಧಿಗಳ ಹೆಸರು ರಿವೀಲ್; ಯಾರು?