ಕಲಬುರಗಿಯಲ್ಲಿ ಕಳ್ಳಿಯರ ಕೈಚಳಕ ಸಿಸಿ ಕ್ಯಾಮರಾದಲ್ಲಿ ಸೆರೆ: ಬೀಗ ಹಾಕಿದ ಮನೆಗಳಿಗೆ ಕನ್ನ ಹಾಕುತ್ತಿದ್ದ ಲೇಡಿ ಗ್ಯಾಂಗ್

ಕಲಬುರಗಿಯಲ್ಲಿ ಕಳ್ಳಿಯರ ಕೈಚಳಕ ಸಿಸಿ ಕ್ಯಾಮರಾದಲ್ಲಿ ಸೆರೆ: ಬೀಗ ಹಾಕಿದ ಮನೆಗಳಿಗೆ ಕನ್ನ ಹಾಕುತ್ತಿದ್ದ ಲೇಡಿ ಗ್ಯಾಂಗ್

ಕಲಬುರಗಿಯಲ್ಲಿ ಕಳ್ಳಿಯರ ಕೈಚಳಕ ಸಿಸಿ ಕ್ಯಾಮರಾದಲ್ಲಿ ಸೆರೆ: ಬೀಗ ಹಾಕಿದ ಮನೆಗಳಿಗೆ ಕನ್ನ ಹಾಕುತ್ತಿದ್ದ ಲೇಡಿ ಗ್ಯಾಂಗ್

ಕಲಬುರಗಿಯಲ್ಲಿ ಬೀಗ ಹಾಕಿದ್ದ ಮನೆಗಳನ್ನೇ ನೋಡಿ ಕಳ್ಳತನ ಮಾಡುವ ಕಳ್ಳಿಯರ ಗ್ಯಾಂಗೊಂದು ಕಾರ್ಯಾಚರಿಸುತ್ತಿದ್ದು, ಈ ಕಳ್ಳಿಯರ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಳ್ಳಿಯರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ..

ಕಲಬುರಗಿ: ಕಲಬುರಗಿಯಲ್ಲಿ ಬೀಗ ಹಾಕಿದ್ದ ಮನೆಗಳನ್ನೇ ನೋಡಿ ಕಳ್ಳತನ ಮಾಡುವ ಕಳ್ಳಿಯರ ಗ್ಯಾಂಗೊಂದು ಕಾರ್ಯಾಚರಿಸುತ್ತಿದ್ದು, ಈ ಕಳ್ಳಿಯರ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕಲಬುರಗಿ ನಗರದ ಕಾಂತಾ ಕಾಲೋನಿಯಲ್ಲಿ ಬೀಗ ಹಾಕಿದ್ದ ಮನೆಯೊಂದರಲ್ಲಿ ಕಳ್ಳಿಯರು ಕೈ ಚಳಕ ತೋರಿದ್ದು ಅವರ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಕಾಂತಾ ಕಾಲೋನಿಯ ಶಿಕ್ಷಕಿ ಶಶಿಕಲಾ ನರೋಣಕರ್ ಮನೆಗೆ ನುಗ್ಗಿದ ಕಳ್ಳರು ಮನೆಯಲ್ಲಿದ್ದ ಅಲಮಾರಿಯ(ಕಪಾಟು) ಬೀಗ ಮುರಿದು ಚಿನ್ನ, ಬೆಳ್ಳಿ ಆಭರಣ, ಚೆಕ್‌, ಮೊಬೈಲ್ ಹಾಗು ನಗದು ಹಣ ಕಳವು ಮಾಡಿದ್ದಾರೆ.

ಕಳ್ಳರು 8 ಗ್ರಾಂ. ಚಿನ್ನಾಭರಣ, 34 ತೋಲಿ ಬೆಳ್ಳಿ ಆಭರಣ, 2 ಲಕ್ಷದ 20 ಸಾವಿರ ನಗದು ಹಣ ಚೆಕ್ ಬುಕ್ ಹಾಗೂ 1 ಮೊಬೈಲ್ ಫೋನ್ ಕಳವು ಮಾಡಿದ್ದಾರೆ. ಕಳ್ಳರು ಒಟ್ಟು 2 ಲಕ್ಷದ 84 ಸಾವಿರ ರೂ. ಮೌಲ್ಯದ ವಸ್ತುಗಳನ್ನು ಕಳವು ಮಾಡಿ ಎಸ್ಕೇಪ್ ಆಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ನನ್ನ ಹೆಂಡತಿ, ಮಗನಿಗೆ ತೊಂದರೆ ಕೊಡುತ್ತಿದ್ದಾರೆ : ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ಟಿ ಡಿ‌‌ ರಾಜೇಗೌಡ ಕಣ್ಣೀರು

ಕಾರ್ಯಕ್ರಮ ನಿಮಿತ್ತ ಶಿಕ್ಷಕಿ ಶಶಿಕಲಾ ನರೋಣಕರ್ ಮನೆಗೆ ಬೀಗ ಹಾಕಿ ಬೆಂಗಳೂರಿಗೆ ಹೋಗಿದ್ದರು. ಬೆಂಗಳೂರಿನಿಂದ ವಾಪಸ್ ಬಂದು ನೋಡಿದಾಗ ಮನೆಯಲ್ಲಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಈಗ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪೊಲೀಸರು ಕಳ್ಳಿಯರ ಸೆರೆಗೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ: ನಿಮ್ಮ ವಾಹನವೂ ಕದ್ದೋಗಿದ್ಯಾ?: ರಾಮನಗರದಲ್ಲಿ ಖದೀಮರ ಸೆರೆ: 15ಕ್ಕೂ ಹೆಚ್ಚು ವಾಹನಗಳ ಜಪ್ತಿ

Source link

Leave a Reply

Your email address will not be published. Required fields are marked *