
ಲಕ್ಕುಂಡಿ ಉತ್ಖನನ ವೇಳೆ ಪತ್ತೆಯಾಯ್ತು ಜೀವಂತ ಹಾವು; ‘ನಿಧಿ’ ಇರುವ ಸೂಚನೆ ಎಂದ ಗ್ರಾಮಸ್ಥರು!
ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯದ ವೇಳೆ ಅಚ್ಚರಿಯ ಘಟನೆಯೊಂದು ನಡೆದಿದೆ. ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಎದುರು ನಡೆಯುತ್ತಿರುವ ಉತ್ಖನನ ಸ್ಥಳದಲ್ಲಿ ವಿಶೇಷ ಪ್ರಭೇದದ ಜೀವಂತ ಹಾವು ಕಾಣಿಸಿಕೊಂಡಿದೆ. ಮಾಹಿತಿ ಪಡೆದ ಕೂಡಲೇ ಸ್ಥಳಕ್ಕೆ ಧಾವಿಸಿದ ಉತ್ಖನನ ಸಿಬ್ಬಂದಿ, ಎಚ್ಚರಿಕೆಯಿಂದ ಹಾವನ್ನು ಹಿಡಿದು ಯಾವುದೇ ಹಾನಿ ಆಗದಂತೆ ಸುರಕ್ಷಿತವಾಗಿ ರಕ್ಷಿಸಿ, ನಂತರ ಹಾವನ್ನು ಕಾಡಿನ ಪ್ರದೇಶಕ್ಕೆ ಬಿಡಲಾಗಿದೆ.
ಘಟನೆಯ ಬಳಿಕ ಉತ್ಖನನ ಕಾರ್ಯವನ್ನು ಕೆಲಕಾಲ ಸ್ಥಗಿತಗೊಳಿಸಿ, ನಂತರ ಸುರಕ್ಷತಾ ಕ್ರಮಗಳೊಂದಿಗೆ ಪುನರಾರಂಭಿಸಲಾಗಿದೆ. ಈ ಘಟನೆಯು ಸ್ಥಳೀಯರಲ್ಲಿ ಕುತೂಹಲ ಮೂಡಿಸಿದ್ದು, ಉತ್ಖನನ ಪ್ರದೇಶದಲ್ಲಿ ಇನ್ನಷ್ಟು ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಆದರೆ, ಅಚ್ಚರಿ ಎನ್ನುವಂತೆ, ಲಕ್ಕುಂಡಿ ಗ್ರಾಮಸ್ಥರು ಈಗ ಉತ್ಖನನ ಕಾರ್ಯದ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಗ್ರಾಮಸ್ಥರು ಸರ್ಕಾರದ ಉತ್ಖನನ ಕೆಲಸದ ವಿರುದ್ಧ ತಿರುಗಿ ಬೀಳಲು ಕಾರಣ, ಅಲ್ಲಿ ಅವರಿಗಾಗುತ್ತಿರುವ ತೊಂದರೆ. ಅಂದರೆ, ಶುರುವಿನಲ್ಲಿ ಆ ಗ್ರಾಮದಲ್ಲಿ ನಿಧಿ ಸಿಕ್ಕ ಖುಷಿಯಲ್ಲಿ ಇದ್ದ ಕೆಲಸಗಳನ್ನೆಲ್ಲಾ ಬಿಟ್ಟು ಊರವೆರಲ್ಲಾ ಅಲ್ಲಿ ಸೇರುತ್ತಿದ್ದರು. ಆದರೆ, ಬರಬರುತ್ತ ಊರಿಗೆ ಬರುವವರ ಸಂಖ್ಯೆ ಅತಿಯಾಗತೊಡಗಿದೆ. ಜೊತೆಗೆ, ಅಲ್ಲಿ ರಾಜಕೀಯ, ಧಾರ್ಮಿಕತೆ ಎಲ್ಲ ಸಮಸ್ಯೆಗಳೂ ತಲೆಹಾಕತಿಡಗಿದ್ದು ಊರಿನ ಜನರ ಮಾನಸಿಕ ಶಾಂತಿಗೆ ಧಕ್ಕೆ ಬರುತ್ತಿದೆ.
ಹೀಗಾಗಿ, ಮೊದಲು ಸಿಕ್ಕ ನಿಧಿ ಬಳಿಕ ಈಗ ಇಲ್ಲಿ ಏನೂ ಸಿಗುತ್ತಿಲ್ಲ. ಅಷ್ಟಾದ ಮೇಲೆ ಕೂಡ ಮತ್ತೆಮತ್ತೆ ಅಲ್ಲೇ ಅಗೆಯುತ್ತ, ನಿಧಿಗಾಗಿ ಹುಡುಕುತ್ತ, ಅಲ್ಲಿನ ಕುಟುಂಬ ಹಾಗೂ ಅಕ್ಕಪಕ್ಕದ ಕುಟುಂಬಕ್ಕೆ ಆಗುತ್ತಿರುವ ತೊಂದರೆ ತಪ್ಪಲಿ ಎಂಬುದು ಆ ಗ್ರಾಮದ ಆಶಯ ಅಷ್ಟೇ. ಇಷ್ಟು ದಿನ ಅಗೆದಿದ್ದು ಓಕೆ, ಇನ್ನೂ ಕೂಡ ಯಾವುದೇ ಸಾಕ್ಷಿ, ಮಾಹಿತಿ ಇಲ್ಲದೇ ಅಗೆಯುತ್ತಲೇ ಹೋದರೆ ಅದು ಮುಗಿದು ಅಲ್ಲಿ ಕುಟುಂಬ ಹಾಗೂ ಗ್ರಾಮ ಮತ್ತೆ ನೆಮ್ಮದಿ ಬದುಕು ಸಾಗಿಸುವುದು ಯಾವಾಗ ಎನ್ನುವುದಷ್ಟೇ ಆ ಗ್ರಾಮದ ಸದ್ಯದ ಪ್ರಶ್ನೆಯಾಗಿದೆ. ಈ ಪ್ರಶ್ನೆಗೆ ಉತ್ತರ ಸಿಗಬಹುದೇ?