ಲಕ್ಕುಂಡಿಯಲ್ಲಿ ನಿಧಿ ಸಿಕ್ಕ ಕುಟುಂಬಕ್ಕೆ ಸರ್ಪದ ಭಯದ ನಡುವೆಯೂ ಶುಕ್ರದೆಸೆ

ಲಕ್ಕುಂಡಿಯಲ್ಲಿ ನಿಧಿ ಸಿಕ್ಕ ಕುಟುಂಬಕ್ಕೆ ಸರ್ಪದ ಭಯದ ನಡುವೆಯೂ ಶುಕ್ರದೆಸೆ


ಗದಗ, (ಜನವರಿ 13): ನೂರೊಂದು ಬಾವಿ. ನೂರೊಂದು ದೇವಸ್ಥಾನಗಳ ಸ್ವರ್ಗ. ಪ್ರಾಚೀನ ಗ್ರಾಮ ಲಕ್ಕುಂಡಿಯಲ್ಲಿ ನಿಧಿಯದ್ದೇ (ಲಕ್ಕುಂಡಿ ಚಿನ್ನದ ನಿಧಿ) ಚರ್ಚೆ ದಿನಬೆಳಗಾದ್ರೆ ನಿಧಿ ನಿಧಿ ಎಂಬ ಮಾತು ಗಲ್ಲಿ ಗಲ್ಲಿಯಲ್ಲೂ ಚರ್ಚೆ ನಡೆಯುತ್ತಿದೆ. ಹೌದು.. ಗದಗದ (ಗದಗ) ಲಕ್ಕುಂಡಿಯಲ್ಲಿ ಮನೆ ನಿರ್ಮಾಣಕ್ಕೆ ಪಾಯ ತೆಗೆಯುವಾಗ ನಿಧಿ ಸಿಕ್ಕಿದ್ದು, ಕುಟುಂಬ ಪ್ರಮಾಣಿಕತೆ ಮೆರೆದಿದೆ. ಆದರೆ. ನಿಧಿಯಲ್ಲ, ನಿಧಿ ಅಂತಾ ಅಧಿಕಾರಿಗಳು ಧ್ವಂಸ ಹೇಳಿಕೆ ನೀಡಿದ ಬಳಿಕ ಕುಟುಂಬಕ್ಕೆ ಮತ್ತಷ್ಟು ಗೊಂದಲ ಉಂಟಾಗಿದೆ. ನಿಧಿಯಲ್ಲ ಅಂದ್ರೆ ನಮ್ಮ ಚಿನ್ನ ನಮಗೆ ಕೊಡಿ ಎಂದ ಕುಟುಂಬ, ಬಳಿಕ ನಿಧಿ ಬೇಡ ನಮಗೆ ಮನೆ ಕೊಡಿ ಎಂದಿತ್ತು. ಆದರೆ ಇದೀಗ ಅರ್ಧ ಕೆ.ಜಿಯಷ್ಟು ಜಿನ್ನ ಸಿಕ್ಕರೂ ಕುಟುಂಬಕ್ಕೆ ನೆಮ್ಮದಿಯೇ ಇಲ್ಲ. ಕುಟುಂಬ ಗೊಂದಲಕ್ಕೆ ಸಿಲುಕುವುದಕ್ಕೂ ಕಾರಣವಿದೆ. ಅದೇನಂದ್ರೆ, ಈವರೆಗೂ ಲಕ್ಕುಂಡಿಯಲ್ಲಿ ನಿಧಿ ಸಿಕ್ಕವರಿಗೆ ಒಳ್ಳೆಯದೇ ಆಗಿಲ್ಲ. ಹೀಗಾಗಿ ಕುಟುಂಬ ಆತಂಕದಲ್ಲಿದೆ. ಲಕ್ಕುಂಡಿ ಗ್ರಾಮದ ಹಿರಿಯರು ಈ ಹಿಂದೆ ನಿಧಿ ಬಳಿಕ ಗ್ರಾಮದಲ್ಲಿ ಏನೇಲ್ಲಾ ಆಯ್ತು ಎಂಬ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.

ಸಿಕ್ಕ ನಿಧಿ ಸರ್ಕಾರಕ್ಕೆ ಕೊಟ್ಟ ಬಾಲಕನಿಗೆ ಶುಕ್ರದೆಸೆ

ಮನೆ ಪಾಯ ಆಗುವಾಗ ಸಿಕ್ಕ ಬರೋಬ್ಬರಿ 65 ಲಕ್ಷ ರೂಪಾಯಿಗಳಿಂದ ಅಧಿಕ ಮೌಲ್ಯದ ನಿಧಿಯನ್ನು ಆಸೆ ಪಡದೇ ಸರ್ಕಾರಕ್ಕೆ ಒಪ್ಪಿಸಿ ದೇಶಕ್ಕೇ ಮಾದರಿಯಾದ ಲಕ್ಕುಂಡಿಯ ಬಾಲಕ ಪ್ರಜ್ವಲ್ ರಿತ್ತಿಗೆ ಇದೀಗ ಲಕ್ ಶುರುವಾಗಿದೆ. ಸರ್ಕಾರಕ್ಕೆ ನಿಧಿ ಕೊಟ್ಟು ಪ್ರಮಾಣಿಕತೆ ಮೆರೆದ ಪ್ರಜ್ವಲ್ ರಿತ್ತಿಗೆ ಬಿ.ಹೆಚ್. ಪಾಟೀಲ್ ಪದವಿ ಪೂರ್ವ ಕಾಲೇಜು ಶಿಕ್ಷಣ ಸಂಸ್ಥೆ ನೆರವಿನ ಹಸ್ತ ನೀಡಿದೆ. ಟಿವಿ9 ವರದಿಗೆ ಸ್ಪಂದಿಸಿದ ಶಿಕ್ಷಣ ಸಂಸ್ಥೆ, ಪ್ರಜ್ವಲ್‌ಗೆ ಉಚಿತ ಶಿಕ್ಷಣ ನೀಡುವುದಾಗಿ ತಿಳಿಸಲಾಗಿದೆ. ಪಿಯುಸಿ ಓದಿದ ಬಳಿಕ ಪೊಲೀಸ್ ಇಲಾಖೆ ಸೇರ್ತೀನಿ ಎಂದಿರೋ ಪ್ರಜ್ವಲ್, ಪೊಲೀಸ್ ಕಾನ್ ಸ್ಟೇಬಲ್ ಆಗುವ ಕನಸು ಬಿಚ್ವಿಟ್ಟಿದ್ದಾನೆ.

ಇದನ್ನೂ ಓದಿ: ಲಕ್ಕುಂಡಿಯಲ್ಲಿ ಸಿಕ್ಕ ನಿಧಿಯಲ್ಲಿ ಏನೇನು ಚಿನ್ನಾಭರಣಗಳಿದ್ದವು ಗೊತ್ತೇ? ಕೊನೆಗೂ ಸಿಕ್ತು ಅಧಿಕೃತ ಮಾಹಿತಿ

ಸದ್ಯ ನಿಧಿಯನ್ನ ಏನು ಮಾಡಬೇಕು ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಲಕ್ಕು ಗ್ರಾಮಕ್ಕೆ ಭೇಟಿ ನೀಡಿದ ಕಾನೂನು ಸಚಿವ ಹೆಚ್.ಕೆ ಪಾಟೀಲ್ ಪರಿಶೀಲನೆ.

ಕುಟುಂಬಕ್ಕೆ ಮನೆ, ನೌಕರಿ ಭರವಸೆ

ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಎಚ್‌ಕೆ ಪಾಟೀಲ್, ಲಕ್ಕುಂಡಿ ಗ್ರಾಮದಲ್ಲಿ ಇತಿಹಾಸ ಸೃಷ್ಟಿಯಾಗಿದೆ. ಲಕ್ಕುಂಡಿಯಲ್ಲಿ ಮಳೆಗಾಲದಲ್ಲಿ ಮುತ್ತು ರತ್ನ ಹವಳಗಳು ಸಿಗುತ್ತವೆ. ಈ ಸ್ಥಳದಲ್ಲಿ ಅನೇಕ ಅದ್ಭುತ ಘಟನೆಗಳು ನಡೆದಿವೆ. ಲಕ್ಕುಂಡಿಯನ್ನು ವಿಶ್ವಪಾರಂಪರಿಕ ಪಟ್ಟಿಗೆ ಸೇರಿಸಲು ಪ್ರಯತ್ನ ನಡೆದಿದೆ. 2 ದಿನದ ಹಿಂದೆ 466 ಗ್ರಾಂ ಚಿನ್ನ, 634 ಗ್ರಾಂ ತಾಮ್ರ ತುಂಬಿಗೆ ಸಿಕ್ಕಿದೆ. ಲಕ್ಕುಂಡಿಯಲ್ಲಿ ಸಿಕ್ಕಿದ ಚಿನ್ನವನ್ನು ಗದಗ ಸರಿಯಾಗಿ ಒಪ್ಪಿಸಲಾಗಿದೆ. ಕಾನೂನು ಪ್ರಕಾರ ಈ ನಿಧಿಯನ್ನು ಎಲ್ಲಿ ಇಡಬೇಕೆಂದು ಚರ್ಚೆ ನಡೆಯುತ್ತಿದೆ ಎಂದು ಹೇಳಿದರು.

ಪ್ರಜ್ವಲ್ ಕುಟುಂಬಕ್ಕೆ ನೆರವು ನೀಡಬೇಕೆಂದು ಹಿರಿಯರು ಮನವಿ ಮಾಡಿದ್ದಾರೆ. ಮನೆ, ಜಾಗ, ಬಾಲಕನ ತಾಯಿಗೆ ಕೆಲಸ ಕೊಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಈ 3 ವಿಚಾರವನ್ನು ಸಿಎಂ ಜೊತೆ ಚರ್ಚಿಸುತ್ತೇನೆ. ಕಾನೂನು ಪ್ರಕಾರ ಏನ್ ಕೊಡಬೇಕು ಎಲ್ಲಾ ಕುಟುಂಬಕ್ಕೆ ಮಾಡಲಾಗುತ್ತೆ. ಪ್ರಾಮಾಣಿಕತೆಗೆ ಗೌರವ ನೀಡುವ ಉದ್ದೇಶದಿಂದ ಮನೆ, ನೌಕರಿ ಕೊಡಲಾಗುತ್ತೆ.ಹೂವು ಕಟ್ಟಿ ಮಾರಾಟ ಮಾಡಿದರೆ ಮಾತ್ರ ಬದುಕು. ಇಂಥ ಬಡತನದಲ್ಲೂ ಬಂಗಾರ ನಮ್ಮದಲ್ಲ ಅಂತ ಮಾಹಿತಿ. ಕುಟುಂಬದ ಪ್ರಾಮಾಣಿಕತೆಗೆ ಗೌರವ ನೀಡಲಾಗುತ್ತೆ ಎಂದು ಸ್ಪಷ್ಟಪಡಿಸಿದರು.

ಒಟ್ಟಿನಲ್ಲಿ ತಮ್ಮ ಮನೆ ಪಾಯ ಆಗುವಾಗ ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿ ಪ್ರಮಾಣಿಕತೆ ಮರೆದಿರುವ ಕುಟುಂಬಕ್ಕೆ ಮೆಚ್ಚುಗೆಗಳ ಮಹಾಪೂರವೇ ಹರಿದುಬರುತ್ತಿದೆ, ಮತ್ತೊಂದೆಡೆ ಸರ್ಕಾರದಿಂದ ಸೂಕ್ತ ಪರಿಹಾರ ಸಿಗುವ ಭರವಸೆಯಲ್ಲಿ ಕುಟುಂಬವಿದೆ. ಆದರೆ, ಯಾವುದಾದರೂ ಮಾತುಗಳಿಂದ ಆತಂಕಗೊಂಡಿರುವ ಕುಟುಂಬಸ್ಥರು, ಯಾಕಾದರೂ ನಿಧಿ ಸಿಕ್ಕಿತೋ ಎಂಬಂತಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *