ಐತಿಹಾಸಿಕ ಲಕ್ಕುಂಡಿಯಲ್ಲಿ 6ನೇ ದಿನದ ಉತ್ಖನನದಲ್ಲಿ ಏನೇನು ಸಿಕ್ತು? ಇಲ್ಲಿದೆ ವಿವರ

ಐತಿಹಾಸಿಕ ಲಕ್ಕುಂಡಿಯಲ್ಲಿ 6ನೇ ದಿನದ ಉತ್ಖನನದಲ್ಲಿ ಏನೇನು ಸಿಕ್ತು? ಇಲ್ಲಿದೆ ವಿವರ


ಗದಗ, (ಜನವರಿ 21): ಲಕ್ಕುಂಡಿಯಲ್ಲಿ ಚಿನ್ನದ ನಿಧಿ (ಲಕ್ಕುಂಡಿ ಚಿನ್ನದ ನಿಧಿ) ಸಿಕ್ಕಿದ್ದೇ ಸಿಕ್ಕಿದ್ದು ಗ್ರಾಮದ ಹೆಸರು ಭಾರೀ ಸದ್ದು ಮಾಡತೊಡಗಿದೆ. ಗ್ರಾಮದ ಶ್ರೀಕೋಟೆಭದ್ರೇಶ್ವರ ದೇವಸ್ಥಾನದ ಅಂಗಳದಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯ (ಲಕ್ಕುಂಡಿ ಉತ್ಖನನ) ಭರದಿಂದ ಸಾಗಿದ್ದು, 6ನೇ ದಿನದ ಉತ್ಖನನ ಕಾರ್ಯ ಅಂತ್ಯವಾಗಿದೆ. ಇಂದು (ಜನವರಿ 21) 6ನೇ ದಿನದ ಉತ್ಖನನ ಕಾರ್ಯ ವೇಳೆ ಐದಾರು ಬಿಲ್ಲೆ, ನಾಗರಹಾವಿನ ಚಿತ್ರದ ಶಿಲೆಯೊಂದಿಗೆ ಮೂಳೆ ತುಣುಕುಗಳು ಸಹ ಸಿಕ್ಕಿರುವುದು ಕುತೂಹಲಕ್ಕೆ ಕಾರಣವಾಗಿದೆ.

6ನೇ ದಿನ ಅಪರೂಪದ ವಸ್ತುಗಳ ಪತ್ತೆ

ಪುರಾತನ ಕಾಲದ ಅಪರೂಪದ ಬಿಲ್ಲೆ ಇದೆ. ಅಷ್ಟೇ ಅಲ್ಲ ಮತ್ತೆ ನಾಗರ ಹಾವಿನ ಚಿತ್ರ ಇರೋ ಶಿಲೆ ಇದೆ. ಪದೇ ಪದೇ ಇದೇ ಸ್ಥಳದಲ್ಲಿ ನಾಗರಹಾವಿನ ಚಿತ್ರ ಇರೋ ಶಿಲೆಗಳು ಇರುವುದಿರಂದ ಇಲ್ಲಿ ನಿಧಿ ಇದೆಯಾ ಎನ್ನುವ ಕೌತಕ. ಇನ್ನೊಂದೆಡೆ ನಿಧಿಯನ್ನು ಹಾವುಗಳು ಕಾಯುತ್ತಿವೆಯಾ ಎನ್ನುವ ಭಯ, ಆತಂಕ ಸಹ ಗ್ರಾಮಸ್ಥರಲ್ಲಿ ಉಂಟಾಗುತ್ತಿದೆ. ಸುಮಾರು 6 ಅಡಿಯಷ್ಟು ಆಳಕ್ಕೆ ಅಗೆಯ ನಂತರ, ಮುಂದೆ ನಡೆಯುವ ಉತ್ಖನನದಲ್ಲಿ ಮತ್ತಷ್ಟು ಪ್ರಾಚೀನ ಅವಶೇಷಗಳ ಸಾಧ್ಯತೆಯೂ ಇದೆ.

ಇದನ್ನೂ ಓದಿ: ಲಕ್ಕುಂಡಿ ನಿಧಿಗೆ ಸರ್ಪ ಕಾವಲು? ಮೈಸೂರಿನಿಂದ ಬಂದ ಉರಗ ರಕ್ಷಕರು ಹೇಳಿದ್ದೇನು?

ಇದ್ದಿದ್ದ ಪಾಣಿಪೀಠ ಹಿನ್ನೆಲೆ

ಉತ್ಖನನ ವೇಳೆ ಸ್ಥಾಪಿಸಿದ್ದ ಪಾಣಿಪೀಠವನ್ನು ಶಿವಲಿಂಗ ಪಾಣಿಪೀಠ ಎನ್ನಲಾಗುತ್ತದೆ.ಪಾಣಿಪೀಠದಲ್ಲಿ ಗರುಡ ಮುದ್ರೆಯಿಂದ ವಿಷ್ಣುವಿನ ಪೀಠದ ಸಾಧ್ಯತೆ ಇದೆ. ಯಾಕಂದ್ರೆ ಕೇಶವ ಅಂದ್ರೆ ವಿಷ್ಣು ದೇವರ ಪೀಠವಾಗಿರಬಹುದು. ಕೇಶವಾದಿತ್ಯ ದೇವಾಲಯಕ್ಕೆ ಸಂಬಂಧಪಟ್ಟ ಪೀಠ ಸುಖಾಸನದ ಆಕಾರದಲ್ಲಿ ಕುಳಿತ ಗರುಡ ಚಿತ್ರ ಇರುವ ಪೀಠ ಇದೆ.

ಲಕ್ಕುಂಡಿಯಲ್ಲಿ ಭೂಗರ್ಭ ಎಷ್ಟೋ ಅವಶೇಷಗಳು ಇವೆ. ಇವು ಸಾಕಷ್ಟು ಕುತೂಹಲ ಮೂಡಿಸುತ್ತಿದೆ. ಉತ್ಖನನ ಜಾಗದ A4 ಬ್ಲಾಕ್‌ನಲ್ಲಿ ಐದಾರು ಚಿಕ್ಕ ಚಿಕ್ಕ ಮೂಳೆಯ ತುಣುಕುಗಳು ಇವೆ. ಸಿಕ್ಕ ಆ ಮೂಳೆಯ ತುಂಡನ್ನು ಪ್ರತ್ಯೇಕವಾಗಿ ತೆಗೆದಿಡಲಾಗಿದೆ. ಅದನ್ನು ಚಿಕ್ಕ ಪ್ಲಾಸ್ಟಿಕ್ ಪ್ಯಾಕೇಟ್‌ನಲ್ಲಿ ಸೀಲ್ ಮಾಡಿ ಮೂಳೆಯನ್ನ ತೆಗೆದಿದ್ದು, ಪುರಾತತ್ವ ಇಲಾಖೆಯ ಅಧಿಕಾರಿಗಳು, ಮೇಲ್ವಿಚಾರಕರು ಇದರ ಬಗ್ಗೆ ಪರಿಶೀಲನೆಗೆ ಮುಂದಾಗಿದ್ದಾರೆ. ಈ ಮೂಳೆ ಮಾನವರದ್ದಾ? ಪ್ರಾಣಿಗಳದ್ದಾ? ಅಥವಾ ಯಾವುದಾದರೂ ಪಕ್ಷಿಯದ್ದಾ ಎಂಬ ಸ್ಪಷ್ಟ ವರದಿಯನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕಾಗಿದೆ.

ಅದನ್ನು ಆಕರ್ಷಿಸುತ್ತಿದೆ ಲಕ್ಕುಂಡಿ!

ಇನ್ನು ಚಿನ್ನದ ನಿಧಿ ಸಿಕ್ಕಿದ್ದೇ ತಡ ಲಕ್ಕುಂಡಿ ಗ್ರಾಮ ಇದೀಗ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ ಲಕ್ಕುಂಡಿಯಲ್ಲಿ ಯಾವಾಗ ನಿಧಿ ಸಿಕ್ಟೋ ಪ್ರವಾಸಗರ ದಂಡೇ ಬರುತ್ತಿದೆ. ಅದರಲ್ಲೂ ಇಂದು ಹುಬ್ಬಳ್ಳಿ ನೇಕಾರ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು, ಶಿಕ್ಷಕರು ಆಗಮಿಸಿ ಉತ್ಖನನ ಕಾರ್ಯ ಹೇಗಿರುತ್ತೆ ಎನ್ನುವುದನ್ನು ಮಕ್ಕಳಿಗೆ ತಿಳಿಸಲಾಯ್ತು

ಉತ್ಖನನ ಬಗ್ಗೆ ಕೇವಲ ಪಠ್ಯಪುಸ್ತಕಗಳ ಮೂಲಕ ತಿಳಿದುಕೊಂಡಿದ್ದೆವು. ಈಗ ಪ್ರತ್ಯಕ್ಷವಾಗಿ ಉತ್ಖನನ ಕೆಲಸ ನೋಡಿ ತುಂಬಾ ಖುಷಿಯಾಗಿದೆ. ಉತ್ಖನನ ಅಂದ್ರೆ ಏನು? ಹೇಗೆ ಉತ್ಖನನ ಮಾಡ್ತಾರೆ.? ಅಲ್ಲಿ ಏನೆಲ್ಲಾ ಅವಶೇಷಗಳು ಸಿಗುತ್ತವೆ? ಇದರ ಹಿನ್ನಲೆ ಏನಿರಬಹುದು.? ಹೀಗೆ ಹತ್ತಾರು’ ಕುತೂಹಲಕಾರಿ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ನಮಗೆ ಸಂತೋಷವಾಗುತ್ತಿದೆ ಅಂತಿದ್ದಾರೆ ಶಿಕ್ಷಕರು.

ಒಟ್ಟಾರೆ ಲಕ್ಕುಂಡಿ ಸಾಕಷ್ಟು ಬಂಗಾರ, ವಜ್ರ ವೈಡೂರ್ಯ ಶ್ರೀಮಂತ ನಾಡು ಈಗ ರಾಜ್ಯ, ದೇಶದ ಗಮನ ಸೆಳೆಯುತ್ತಿದೆ. ಇದು ಇತಿಹಾಸ ಗ್ರಾಮ ಆಗಬೇಕು. ಇಲ್ಲಿಯ ಪ್ರತಿಯೊಂದು ದೇವಸ್ಥಾನ ಅಭಿವೃದ್ಧಿ ಪಡಿಸಬೇಕಿದ್ದು, ಲಕ್ಕುಂಡಿಯಲ್ಲಿ ನಡೆಯುವ ಉತ್ಖನನ ವೇಳೆ ಏನೆಲ್ಲಾ ಸಿಗಬಹುದು ಎಂಬ ಕುತೂಹಲ ಜನರಲ್ಲಿ ಮನೆಮಾಡಿದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *