
ಗದಗ, (ಮಾರ್ಚ್ 12): ಪ್ರಾಚೀನ ದೇವಾಲಯಗಳ ಸರ್ಗ, ಶಿಲ್ಪಕಲೆಗಳ ಬೀಡು, ಕಲ್ಯಾಣ ಚಾಲುಕ್ಯರ ನಾಡು ಗದಗ (ಗದಗ) ಜಿಲ್ಲೆಯ ಲಕ್ಕುಂಡಿಯಲ್ಲಿ ನಿಧಿ (ಲಕ್ಕುಂಡಿ ಚಿನ್ನದ ನಿಧಿ) ಸಿಕ್ಕ ಬಳಿಕ ಲಕ್ಕುಂಡಿ ರಾಷ್ಟ್ರಮಟ್ಟದಲ್ಲಿ ಭಾರಿ ಸದ್ದು ಮಾಡಿದೆ. ಇಲ್ಲಿ ಸಿಕ್ಕ ನಿಧಿಗೆ ಕಲ್ಯಾಣ ಚಾಲುಕ್ಯರು, ವಿಜಯನಗರ ಅರಸರ ಕಾಲದ ಇತಿಹಾಸ ಇದೆ. ಈ ಆಭರಣಗಳು ಅದ್ಭುತವಾದ ಕಸೂರಿ ನೋಡಿದ್ರೆ ಮೈ ರೋಮಾಂಚನವಾಗುತ್ತೆ. ಅಪರೂಪದ ನೀಲಮಣಿ ಲಕ್ಕುಂಡಿ ಗತವೈಭವ ಸಾರುತ್ತಿದೆ. ಆಂಟಿಕ್ ಆಭರಣಗಳ ಅಂದಾಜು ಮೌಲ್ಯ 8 ಕೋಟಿಯಾಗಿದೆ. ಹೀಗಾಗಿ ನಿಧಿ ಸಿಕ್ಕ ಪ್ರಜ್ವಲ್ ಕುಟುಂಬ ಈಗ 8 ಕೋಟಿ ರೂಪಾಯಿಯಲ್ಲಿ ಪಾಲು ಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದೆ. ಇನ್ನು ಈ ಬಗ್ಗೆ ಪುರಾತತ್ವ ತಜ್ಞರ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.