
ಕೆಲ ದಿನಗಳ ಹಿಂದೆ ನಟಿ, ಮೊದಲ ಮದುವೆಯ ಬಗ್ಗೆ ಮಾತನಾಡಿದ್ದರು. ಏನೂ ಸತ್ವ ಉಳಿದುಕೊಳ್ಳದಿದ್ದಾಗ, ಯಾರೂ ಏನೂ ಎಂಜಾಯ್ ಮಾಡುತ್ತಿರಲಿಲ್ಲ ಎಂದಾಗ ಆ ಮದುವೆ ಮುರಿದುಕೊಳ್ಳುತ್ತಿರುತ್ತದೆ. ಫಿಸಿಕಲೀ, ಮೆಂಟಲೀ, ಎಮೋಶನಲಿ ಆಗಿರಬಹುದು. ಇನ್ನೊಬ್ಬ ವ್ಯಕ್ತಿಯನ್ನು ಮದುವೆ ಆಗುವಾಗ ಹೆಣ್ಣು ಮಕ್ಕಳಿಗೆ ಏನೇನೋ ಯೋಚನೆ ಇರುತ್ತದೆ. ನನ್ನ ಅದೃಷ್ಟವೋ, ಪ್ರಾರ್ಥನೆಯೋ ಏನೋ ನನ್ನ, ಪ್ರೀತಂ ಯೋಚನೆಗಳು 99% ಮ್ಯಾಚ್ ಆಗುತ್ತವೆ. ಆಗ ಭಯ ಇಲ್ಲದೆ, ಆತ್ಮವಿಶ್ವಾಸ ಬರುತ್ತದೆ ಎಂದು ಮಾನಸಾ ಮನೋಹರ್ ಹೇಳಿದ್ದಾರೆ.