Lakshmi Nivasa:​ ನನ್ನನ್ನು ಸಾಯಿಸಿದವನಿಂದಲೇ ಕೇಕ್​ ಕಟ್​ ಮಾಡಿಸಿ ಸನ್ಮಾನಿಸಿದರು; ನಟಿ ವಿಜಯಲಕ್ಷ್ಮಿ ಭಾವುಕ

Lakshmi Nivasa:​ ನನ್ನನ್ನು ಸಾಯಿಸಿದವನಿಂದಲೇ ಕೇಕ್​ ಕಟ್​ ಮಾಡಿಸಿ ಸನ್ಮಾನಿಸಿದರು; ನಟಿ ವಿಜಯಲಕ್ಷ್ಮಿ ಭಾವುಕ

Lakshmi Nivasa:​ ನನ್ನನ್ನು ಸಾಯಿಸಿದವನಿಂದಲೇ ಕೇಕ್​ ಕಟ್​ ಮಾಡಿಸಿ ಸನ್ಮಾನಿಸಿದರು; ನಟಿ ವಿಜಯಲಕ್ಷ್ಮಿ ಭಾವುಕ

’ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ವಿಶ್ವನ ತಾಯಿ ಲಲಿತಾ ಪಾತ್ರವನ್ನು ಹಠಾತ್ತನೆ ಅಂತ್ಯಗೊಳಿಸಲಾಗಿದೆ. ಜಯಂತ್‌ನಿಂದ ತಳ್ಳಲ್ಪಟ್ಟು ಸಾವನ್ನಪ್ಪುವ ದೃಶ್ಯದ ಮೂಲಕ ನಟಿ ವಿಜಯಲಕ್ಷ್ಮಿ ಸುಬ್ರಮಣಿ ಅವರ ಪಾತ್ರಕ್ಕೆ ಮುಕ್ತಾಯ ಹಾಡಲಾಗಿದೆ.  ಇದೀಗ ಸನ್ಮಾನ ಮಾಡಿರುವ ಬಗ್ಗೆ ನಟಿ ಹೇಳಿದ್ದೇನು?

ಲಕ್ಷ್ಮೀ ನಿವಾಸ (Lakshmi Nivasa) ಸೀರಿಯಲ್​ನಲ್ಲಿ ವಿಶ್ವನ ತಾಯಿ ಲಲಿತಾ ಪಾತ್ರದಲ್ಲಿ ನಟಿ ವಿಜಯಲಕ್ಷ್ಮಿ ಸುಬ್ರಮಣಿ (vijayalakshmi Subramani) ನಟಿಸುತ್ತಿದ್ದರು. ಆದರೆ ಅವರ ಪಾತ್ರವನ್ನು ಈಗ ಮುಗಿಸಲಾಗಿದೆ. ಮನೆ ಬಿಟ್ಟು ಹೋಗಿರುವ ಜಾಹ್ನವಿ, ತನ್ನ ಸ್ನೇಹಿತೆಯ ಮಗಳು ಎಂದು ಗೊತ್ತಾದ ತಕ್ಷಣ ಆಕೆಯನ್ನು ವಾಪಸ್​ ಮನೆಗೆ ಕರೆದು ಆಕೆಗೆ ತಾಯಿಯ ಪ್ರೀತಿ ನೀಡಿದ ಲಲಿತಾ ಅವರನ್ನು ಸಾಯಿಸುವ ಮೂಲಕ ಪಾತ್ರಕ್ಕೆ ಮುಕ್ತಾಯ ಹಾಡಲಾಗಿದೆ.

ಜಾಹ್ನವಿಯನ್ನು ಹುಡುಕಿಕೊಂಡು ವಿಶ್ವನ ಮನೆಗೆ ಜಯಂತ್​ ಬರುತ್ತಾನೆ. ಆದರೆ, ಲಲಿತಾ ಆತನನ್ನು ತಡೆಯುತ್ತಾಳೆ. ನನ್ನ ಕೊನೆಯ ಉಸಿರು ಇರುವವರೆಗೂ ನಾನು ಅವಳನ್ನು ಭೇಟಿಯಾಗಲು ಬಿಡುವುದಿಲ್ಲ ಎನ್ನುತ್ತಾಳೆ. ಇದರಿಂದ ಕೋಪಗೊಂಡ ಜಯಂತ್​ ಆಕೆಯನ್ನು ದೂಕಿದಾಗ ಅಲ್ಲಿಯೇ ಲಲಿತಾ ಸಾವನ್ನಪ್ಪುತ್ತಾಳೆ.

ಈ ದೃಶ್ಯದ ಅವಶ್ಯಕತೆಯೇ ಇರಲಿಲ್ಲ. ಆದರೂ ತಮ್ಮನ್ನು ವಿನಾಕಾರಣ ಸಾಯಿಸಲಾಗಿದೆ ಎಂದು ನಟಿ ವಿಜಯಲಕ್ಷ್ಮಿ ಅವರು ಇದಾಗಲೇ ಕೆಲವು ಪೋಸ್ಟ್​ಗಳ ಮೂಲಕ ಅಸಮಾಧಾನ ಹೊರಹಾಕಿದ್ದರು. ಒಂದು ಒಳ್ಳೆ ಪಾತ್ರವನ್ನ ಸುಖಾಸುಮ್ಮನೆ ಸಾಯಿಸೋದು? ಈ ಧಾರಾವಾಹಿಗೆ ಕಥೆ ಮಾಡುವವರ ಪಾಂಡಿತ್ಯ ನಿಪುಣತೆಗೆ ಕನ್ನಡಿ ಹಿಡಿದಿದೆ ಎನ್ನುತ್ತಾ ತಮ್ಮ ಪಾತ್ರವನ್ನು ಸಾಯಿಸಿರುವ ಬಗ್ಗೆ ನೋವು ತೋಡಿಕೊಂಡಿದ್ದರು ನಟಿ.

ಇದೀಗ ಅವರು ಸೋಷಿಯಲ್ ಮೀಡಿಯಾದಲ್ಲಿ ಇನ್ನೊಂದು ಪೋಸ್ಟ್​ ಹಾಕಿದ್ದಾರೆ. ಅದರಲ್ಲಿ ಲಲಿತಾ ಸಾವಿನ ಬಳಿಕ, ಅವರ ರೋಲ್​ ಮುಗಿದ ಕಾರಣ ಅವರನ್ನು ಆತ್ಮೀಯವಾಗಿ ಸೀರಿಯಲ್​ನಿಂದ ಬೀಳ್ಕೊಟ್ಟ ದೃಶ್ಯವಿದೆ.

ಇದರಲ್ಲಿ ಜಯಂತ್​ ಪಾತ್ರಧಾರಿ ದೀಪಕ್ ಸುಬ್ರಹ್ಮಣ್ಯ (Deepak Subramanya) ಅವರು ಕೇಕ್​ ಕಟ್​ ಮಾಡುವುದನ್ನು ನೋಡಬಹುದಾಗಿದೆ. ಕೇಕ್​ ತಂದು ಅದರಲ್ಲಿ ವಿಜಯಲಕ್ಷ್ಮಿ ಅವರಿಗೆ ವಿಷ್​ ಮಾಡಲಾಗಿದೆ. ಅದನ್ನು ಶೇರ್​ ಮಾಡಿಕೊಂಡಿರೋ ನಟಿ, ಕೊನೆ ದಿನದ ಲಲಿತಾ ಸಾವಿನ ಚಿತ್ರೀಕರಣ ಮುಗಿದ ನಂತರ ಜಯಂತ್ ಕೈಯಲ್ಲೆ ಪೇಟ ತೋಡಿಸಿ ಸನ್ಮಾನ ಮಾಡಿದ್ದು ಎಂದು ತಮಾಷೆಯಿಂದ ಬರೆದುಕೊಂಡಿದ್ದಾರೆ.

ಆದರೆ, ಇದು ತಮಾಷೆಯಲ್ಲ, ನೋವಿನ ವಿಷಯವೆನ್ನುವುದು ಅವರ ಮುಂದಿನ ಲೈನ್​ಗಳಲ್ಲಿ ತಿಳಿಯುತ್ತದೆ. ನಾನು ನನ್ನ ಪಾತ್ರ ಸೀರಿಯಲ್ ನಲ್ಲಿ ಮುಗಿದ ಮೇಲೆ ಮಲೇಷ್ಯಾಗೆ ಹೋಗಿದ್ದೆ. ನಾನು ಬೇರೆ ಯಾವ ಪ್ರಾಜೆಕ್ಟೂ ಒಪ್ಪಿಕೊಂಡಿರಲಿಲ್ಲ, ನನ್ನ ಪಾತ್ರಕ್ಕೆ ಅಂತ್ಯ ಹಾಡಿರೋದು ನನ್ನಿಂದಲ್ಲ, ಕಾರಣ ನನಗೆ ಇದುವರೆಗೂ ಗೊತ್ತಿಲ್ಲ ಎಂದು ನಟಿ ನೋವು ತೋಡಿಕೊಂಡಿದ್ದಾರೆ.

Source link

Leave a Reply

Your email address will not be published. Required fields are marked *