Headlines

ಇಬ್ಬರಿಗೂ ಒಟ್ಟಿಗೇ ಮಗು ಹುಟ್ಟುತ್ತೆ: 'ಲಕ್ಷ್ಮೀ ನಿವಾಸ' ನಟಿ ಹಂಚಿಕೊಂಡ್ರು ಕುತೂಹಲದ ಪೋಸ್ಟ್​

ಇಬ್ಬರಿಗೂ ಒಟ್ಟಿಗೇ ಮಗು ಹುಟ್ಟುತ್ತೆ: 'ಲಕ್ಷ್ಮೀ ನಿವಾಸ' ನಟಿ ಹಂಚಿಕೊಂಡ್ರು ಕುತೂಹಲದ ಪೋಸ್ಟ್​

ಇಬ್ಬರಿಗೂ ಒಟ್ಟಿಗೇ ಮಗು ಹುಟ್ಟುತ್ತೆ: 'ಲಕ್ಷ್ಮೀ ನಿವಾಸ' ನಟಿ ಹಂಚಿಕೊಂಡ್ರು ಕುತೂಹಲದ ಪೋಸ್ಟ್​
‘ಲಕ್ಷ್ಮೀ ನಿವಾಸ’ ಸೀರಿಯಲ್‌ನ ನಟಿ ಮಾನಸಾ ಮನೋಹರ್ ಅವರು ತಾವು ಗರ್ಭಿಣಿ ಎಂದು ಘೋಷಿಸಿದ್ದಾರೆ. ವಿಶೇಷವೆಂದರೆ, ಅವರ ಅತ್ತಿಗೆಯೂ ಗರ್ಭಿಣಿಯಾಗಿದ್ದು, ಇಬ್ಬರೂ ಕೆಲವೇ ವಾರಗಳ ಅಂತರದಲ್ಲಿ ಮಗುವನ್ನು ಸ್ವಾಗತಿಸಲಿದ್ದಾರೆ. ಮಾನಸಾ ಅವರು ಮೇ ತಿಂಗಳಿನಲ್ಲಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
’ಲಕ್ಷ್ಮೀ ನಿವಾಸ’ ಸೀರಿಯಲ್​ನಲ್ಲಿ ಸಿದ್ಧೇ ಗೌಡರ ಅತ್ತಿಗೆ ನೀಲೂ ಪಾತ್ರದಲ್ಲಿ ಅರ್ಥಾತ್​ ನೆಗೆಟಿವ್ ಶೇಡ್​ನಲ್ಲಿ ಮಿಂಚುತ್ತಿರೋ ನಟಿ ಮಾನಸಾ ಮನೋಹರ (Manasa Manohar). ಅವರು ಈಗ ಮಗುವಿನ ನಿರೀಕ್ಷೆಯಲ್ಲಿದ್ದು, ಇದರ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಹಾಕಿದ್ದಾರೆ.

ಅತ್ತಿಗೆ ಮತ್ತು ತಾವು ಇಬ್ಬರೂ ಒಟ್ಟಿಗೇ ಗರ್ಭಿಣಿಯಾಗಿದ್ದು, ಬಹುತೇಕ ಒಂದೇ ತಿಂಗಳಲ್ಲಿ, ಕೇವಲ ಎರಡು ವಾರಗಳ ಅಂತರದಲ್ಲಿ ಮಗು ಜನಿಸಲಿದೆ ಎಂದು ಅವರು ಬರೆದುಕೊಂಡಿದ್ದಾರೆ.

ಇಂದು ನಾನು ನಿಮ್ಮೆಲ್ಲರೊಂದಿಗೆ ಇದನ್ನು ಹಂಚಿಕೊಳ್ಳುತ್ತಿರುವುದರಿಂದ ಇದು ತುಂಬಾ ವಿಶೇಷವೆನಿಸುತ್ತದೆ. ಜೀವನವು ಸಂತೋಷವನ್ನು ಹೆಚ್ಚಿಸುವ ತನ್ನದೇ ಆದ ಸುಂದರವಾದ ಮಾರ್ಗವನ್ನು ಹೊಂದಿದೆ. ಈ ಬಾರಿ ಅದು ನಮ್ಮ ಕುಟುಂಬವನ್ನು ಪ್ರೀತಿಯನ್ನು ದ್ವಿಗುಣಗೊಳಿಸಲು, ಪ್ರಾರ್ಥನೆಗಳನ್ನು ದ್ವಿಗುಣಗೊಳಿಸಲು ಮತ್ತು ಸಣ್ಣ ಹೃದಯ ಬಡಿತಗಳನ್ನು ದ್ವಿಗುಣಗೊಳಿಸಲು ಆಯ್ಕೆ ಮಾಡಿದೆ ಎಂದು ನಟಿ ಹೇಳಿಕೊಂಡಿದ್ದಾರೆ.

ಎರಡು ಶಿಶುಗಳು, ಬಹುತೇಕ ಒಟ್ಟಿಗೆ ಬರುತ್ತಿವೆ. ನಮ್ಮ ಮನೆ ಇದಾಗಲೇ ಸಂತೋಷದಿಂದ ತುಂಬಿದೆ. ಈ ಸುಂದರ ಅಧ್ಯಾಯವನ್ನು ಸ್ವಾಗತಿಸಲು ತುಂಬಾ ಸಿದ್ಧವಾಗಿದೆ ಎಂದು ನಟಿ ಮಾನಸಾ ಮನೋಹರ ಪೋಸ್ಟ್​ನಲ್ಲಿ ಹೇಳಿಕೊಂಡಿದ್ದಾರೆ.

ಅಂದಹಾಗೆ, 2024ರಲ್ಲಿ ಮಾನಸ ಮನೋಹರ್ ಬ್ಯುಸಿನೆಸ್ ಮ್ಯಾನ್ ಆಗಿರುವ ಪ್ರೀತಂ ಚಂದ್ರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದು ನಟಿಯ ಎರಡನೆ ಮದುವೆಯಾಗಿದೆ. ಇತ್ತೀಚೆಗಷ್ಟೇ ನಟಿ ತಮ್ಮ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದ್ದರು.

ಸುಮಾರು ಒಂದು ವರ್ಷದ ಹಿಂದೆ, ಅದೇ ಸ್ಥಳದಲ್ಲಿ, ಅದೇ ಮರಗಳ ನಡುವೆ ನಾವಿಬ್ಬರೂ ಒಂದಾದೆವು ಮತ್ತು ಇಂದು ನಮಗೆ ನಮ್ಮ ಪ್ಲಸ್ ಒನ್ ಆಶೀರ್ವಾದ ದೊರೆಯುತ್ತಿದೆ. ನಮ್ಮ ಅತ್ಯಂತ ‘ಅಮೂಲ್ಯ ಅಭಿವ್ಯಕ್ತಿ’ ಈ ಮೇ ತಿಂಗಳಲ್ಲಿ ನಮ್ಮೊಂದಿಗೆ ಸೇರುತ್ತಿದೆ ಎನ್ನುವ ಮೂಲಕ ಬರುವ ಮೇ ತಿಂಗಳಿನಲ್ಲಿ ಮಗು ಹುಟ್ಟುವ ಬಗ್ಗೆ ತಿಳಿಸಿದ್ದಾರೆ.

Source link

Leave a Reply

Your email address will not be published. Required fields are marked *