ಲಕ್ಷ್ಮಿ ನಿವಾಸ ಧಾರಾವಾಹಿಯಲ್ಲಿ, ಜಯಂತ್ ಲಲಿತಮ್ಮನ ಸಾವಿಗೆ ಕಾರಣನಾಗಿ ಸಂತೋಷ್ನಿಂದ ಬ್ಲ್ಯಾಕ್ಮೇಲ್ಗೆ ಒಳಗಾಗಿದ್ದಾನೆ. ಈ ಸತ್ಯ ಯಾರಿಗೂ ತಿಳಿಯದಂತೆ, ಜಾಹ್ನವಿಯ ಪೋಷಕರು ಆತನಿಗೆ ಮರುಮದುವೆ ಮಾಡಲು ಮುಂದಾಗಿದ್ದಾರೆ.

ಲಕ್ಷ್ಮಿ ನಿವಾಸ (Lakshmi Nivasa) ಸೀರಿಯಲ್ನಲ್ಲಿ ಸದ್ಯ ಜಯಂತ್, ಲಲಿತಮ್ಮನ ಕೊ*ಲೆ ಮಾಡಿ ಏನೂ ಆಗದವರ ರೀತಿಯಲ್ಲಿ ಇದ್ದಾನೆ. ಜಾಹ್ನವಿಯನ್ನು ಹುಡುಕಿ ವಿಶ್ವನ ಮನೆಗೆ ಹೋದಾಗ, ಅಡ್ಡ ಬಂದ ಲಲಿತಮ್ಮನನ್ನು ದೂಕುವ ಭರದಲ್ಲಿ ಅವರ ಸಾವಿಗೆ ಕಾರಣನಾಗಿದ್ದಾನೆ ಜಯಂತ್.

ಇದರ ವಿಡಿಯೋ ಮಾಡಿರುವ ಸಂತೋಷ್ ಜಯಂತ್ನ ಬ್ಲ್ಯಾಕ್ಮೇಲ್ ಮಾಡುತ್ತಾ, ದುಡ್ಡು ವಸೂಲಿ ಮಾಡುತ್ತಿದ್ದಾನೆ, ಅದೇ ದುಡ್ಡಿನಲ್ಲಿ ಭರ್ಜರಿ ಮನೆಯ ಸಾಲವನ್ನೂ ತೀರಿಸಿದ್ದಾನೆ. ಆದರೆ ಜಯಂತ್ಗೆ ಇನ್ನೂ ಅವನು ಯಾರು ಎನ್ನುವುದು ತಿಳಿದಿಲ್ಲ.

ಇದೀಗ, ಜಾಹ್ನವಿ ಬದುಕಿದ್ದಾಳೆ ಎನ್ನುವ ಸತ್ಯ ಆಕೆಯ ಅಪ್ಪ-ಅಮ್ಮನಿಗೆ ಸೇರಿ ಬಹುತೇಕ ಯಾರಿಗೂ ಗೊತ್ತಿಲ್ಲ. ಆದರೆ ವಿಶ್ವನ ಮೂಲಕ ಜಯಂತ್ಗೆ ಆ ಸತ್ಯ ಗೊತ್ತಿದೆ. ಆದರೆ ಅದನ್ನು ಆತ ಆಕೆಯ ಅಪ್ಪ-ಅಮ್ಮನ ಎದುರು ಬಾಯಿ ಬಿಡುತ್ತಿಲ್ಲ.

ಮನೆಗೆ ಬಂದಿರುವ ಅಳಿಯ ತುಂಬಾ ಒಳ್ಳೆಯವ ಎಂದುಕೊಂಡಿದ್ದಾರೆ ಜಾಹ್ನವಿ ಅಪ್ಪ-ಅಮ್ಮ. ಅದೇ ಕಾರಣಕ್ಕೆ ಇನ್ನೂ ವಯಸ್ಸು ಇರುವ ಅಳಿಯನಿಗೆ ಮತ್ತೊಂದು ಮದುವೆ ಮಾಡಿಸಬೇಕು, ತನ್ನ ಮಗಳ ನೆನಪಿನಲ್ಲಿಯೇ ಆತ ಒಬ್ಬಂಟಿಯಾಗಿ ಇರುವುದು ಬೇಡ ಎನ್ನುವುದು ಅವರ ಕಳಕಳಿ.

ಅದೇ ಮಾತನ್ನು ಜಯಂತ್ ಮುಂದಿಟ್ಟಿದ್ದಾನೆ ಜಾಹ್ನವಿ ಅಪ್ಪ. ಆದರೆ ಜಾಹ್ನವಿ ಬದುಕಿದ್ದಾಳೆ ಎನ್ನುವ ಸತ್ಯ ತಿಳಿದಿರುವ ಜಯಂತ್, ಅದನ್ನು ಹೇಳಲಿಲ್ಲ. ಆದರೆ ನಾನು ಜಾಹ್ನವಿ ನೆನಪಿನಲ್ಲಿಯೇ ಇರುತ್ತೇನೆ. ಮತ್ತೊಂದು ಮದುವೆ ಬೇಡ ಎಂದು ತಿರಸ್ಕರಿಸಿದ್ದಾನೆ.

ಒಟ್ಟಿನಲ್ಲಿ ಈಗ ಜಯಂತ್ ಮತ್ತು ಜಾಹ್ನವಿ ಮುಂದಿನ ಸ್ಟೋರಿ ಮಾತ್ರ ನಿಗೂಢವಾಗಿದೆ. ಲಲಿತಾಳ ಸಾವಿಗೆ ಕಾರಣ ಆಗಿರೋ ಜಯಂತ್ ಸಿಕ್ಕಿಬಿದ್ದರೆ ಆತನಿಗೆ ಭಾರಿ ಶಿಕ್ಷೆ ಆಗುವುದಂತೂ ಗ್ಯಾರೆಂಟಿ. ಒಟ್ಟಿನಲ್ಲಿ ಇವರಿಬ್ಬರ ಕಥೆ ಏನು ಎನ್ನುವುದು ವೀಕ್ಷಕರಿಗೂ ಅರ್ಥ ಮಾಡಿಕೊಳ್ಳಲು ಆಗ್ತಿಲ್ಲ.

Source link
Lakshmi Nivasa: ಜಯಂತ್ಗೆ 2ನೇ ಮದುವೆ ಆಫರ್: ಅಳಿಯನ ಮದುವೆಗೆ ಮುಂದಾದ ಜಾಹ್ನವಿ ಅಪ್ಪ!